ವಿದ್ಯಾ ಪ್ರವೇಶ ದಿನ 11

 

   ವಿದ್ಯಾ ಪ್ರವೇಶ  11ನೇ ದಿನ

👫👬👭👫👫👬👭👫👫👬👭👫

(ವಿ.ಪ್ರ 2022-23 ರ ಕೈಪಿಡಿಯ 17ನೇ ದಿನ)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1

ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ "Good morning, welcome Have a Funfilled Friday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ ಅವರು “Good morning, Thank you,  Same to you" ಎಂದು ಉತ್ತರಿಸಲಿ.

ಚಟುವಟಿಕೆ 2

ದಿನ:- 15 ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆ ಪುನರಾವರ್ತಿಸಿ

ಚಟುವಟಿಕೆ :

ಸಾಮಗ್ರಿಗಳು: ಮ್ಯೂಸಿಕ್ ಪ್ಲೇಯರ್ ಅಥವಾ ಮೊಬೈಲ್, ವಿವಿಧ ಪ್ರಾಣಿಗಳ ಫ್ಲ್ಯಾಶ್ ಕಾರ್ಡ್ಗಳು

ವಿಧಾನ: 

👫  ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.

👫ಅವರ ನೆಚ್ಚಿನ ಪ್ರಾಣಿಯ ಕುರಿತಾಗಿ ಮಾತನಾಡಲು ಪ್ರೋತ್ಸಾಹಿಸಿ. (ಸಾಕು ಪ್ರಾಣಿ ಅಥವಾ ಕಾಡು ಪ್ರಾಣಿ) ಮಾದರಿಯಾಗಿ ಶಿಕ್ಷಕರೇ ಮೊದಲು ಪ್ರಾರಂಭಿಸಬಹುದು.

👫 ಮಾತನಾಡಲು ಪ್ರತಿಯೊಬ್ಬರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಿ.

ಮಾತುಕತೆ

(ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂ ಮಾತನಾಡಲು ಪ್ರೋತ್ಸಾಹಿಸಬಹುದು) 

Head,shoulders, knees and toes ರೈಮ್ ಅನ್ನು ಅಭಿನಯದೊಂದಿಗೆ ಮಕ್ಕಳಿಂದ ಹಾಡಿಸಿ.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

2ನೇ ಅವಧಿ *ನನ್ನ ಸಮಯ*

  ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು. 

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) 

ಸಾಮರ್ಥ್ಯ: ಶಬ್ದದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು.

ಚಟುವಟಿಕೆ : ಆಲಿಸಿ ಹೇಳು (ಗುರಿ 3) 

ಉದ್ದೇಶಗಳು:-

🎧 ಶಬ್ಧವನ್ನು ಆಲಿಸಿ ಗುರುತಿಸುವುದು. 

ಅಗತ್ಯ ಸಾಮಗ್ರಿಗಳು : ಶ್ರವಣ ಉಪಕರಣ

ವಿಧಾನ : 

📌 ಮಕ್ಕಳನ್ನು ವಿವಿಧ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುವುದು.

📌 ಪ್ರತಿ ಗುಂಪಿನ ಮಕ್ಕಳು ಶ್ರವಣ ಉಪಕರಣದ ಸಹಾಯದಿಂದ ಪ್ರಾಣಿಗಳ ಧ್ವನಿಗಳನ್ನು ಆಲಿಸಿ, ಯಾವ ಪ್ರಾಣಿ ಎಂದು ಗುರುತಿಸುವುದು. 

📌 ಪ್ರತಿ ಮಗುವಿಗೂ ಅವಕಾಶ ಸಿಗುವವರೆಗೆ ಚಟುವಟಿಕೆ ಮುಂದುವರೆಸುವುದು.

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಅಭಿನಯ ಗೀತೆಗಳು/ನಾಟಕಗಳು. (ಗುರಿ - 1)

         ರೇಲಾ ರೇಲಾ ರೇಲಾ ರೇಲಾ ರೇಲಾ ರೇಲಾ ರೇಲಾ....

         ಅಡವಿ ತಾಯಿಗೆ ವಂದನೆ ನಮ್ಮ,ತಾಯಿ ಅಡವಿಗೆ ವಂದನೆ.             ಅಡವಿ ಚೆನ್ನಾಗಿದ್ರೆ ಅನ್ನಕ್ಕೆ ಕೊರತೆಯಿಲ್ಲ,

        ಬೆಳೆಯು ಹಟ್ಟಿಗೆ ಬಂದ್ರೆ ಹಬ್ಬ ಮಾಡೋಣ ಎಲ್ಲ ||ಪ||

ಉದ್ದೇಶಗಳು:

• ಶಾರೀರಿಕ ಬೆಳವಣಿಗೆಯ ವಿಕಾಸ ಹೊಂದುವುದು.

• ಪದಸಂಪತ್ತು ಹೆಚ್ಚುವುದರೊಂದಿಗೆ ಪ್ರಾಸ, ಲಯ, ಸಂದರ್ಭ ಹಾಗೂ ಸ್ಪಷ್ಟವಾಗಿ ಉಚ್ಛಾರಿಸುವುದು.

• ಆಂಗಿಕ ಭಾವನೆಗಳನ್ನು ಗುರ್ತಿಸುವುದು.

ಸಾಮಗ್ರಿಗಳು: ಪ್ರಾಸಗೀತೆಗಳ ಪ್ರತಿ.

ವಿಧಾನ :

⭕. ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು.

⭕ಸುಗಮಕಾರರು ಮಕ್ಕಳಿಗೆ ಗೊತ್ತಿರುವ ಪ್ರಾಸಗೀತೆಗಳನ್ನು ಹಾಡಲು ಅವಕಾಶ ಕಲ್ಪಿಸುವುದು. 

⭕ಪ್ರಾಸಗೀತೆಗಳನ್ನು ಆಂಗಿಕ ಚಲನವಲನಗಳಿಂದ ಹಾಡಿಸುವುದು.

⭕. ಪ್ರಾಸಗೀತೆಗಳಲ್ಲಿನ ಪ್ರಾಸ ಪದಗಳನ್ನು ಆಲಿಸಿ ಆನಂದಿಸಲು ಪ್ರೋತ್ಸಾಹ ನೀಡುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

                       *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ, ಅನುಕ್ರಮ ಚಿಂತನೆ, ಸ್ಥೂಲ ಸ್ನಾಯು ಕೌಶಲಗಳ ಅಭಿವೃದ್ಧಿ.

ಚಟುವಟಿಕೆ : ಧ್ವನಿ ವ್ಯತ್ಯಾಸಗಳನ್ನು ಗುರುತಿಸುವುದು.(ಗುರಿ–೨)

ಉದ್ದೇಶಗಳು : ಭಿನ್ನ ಪದಗಳನ್ನು ಆಲಿಸಿ ವ್ಯತ್ಯಾಸ ಗುರುತಿಸುವುದು.

📢 ಪದಗಳನ್ನು ಅನುಕ್ರಮವಾಗಿ ಹೇಳುವುದನ್ನು ರೂಢಿಸುವುದು.  📢ಧ್ವನಿಗೆ ಸಂಬಂಧಿಸಿದಂತೆ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು.

ಅಗತ್ಯ ಸಾಮಗ್ರಿಗಳು : ಸೀಮೆ ಸುಣ್ಣ, ಮಾರ್ಕರ್, ಕ್ರೇಯಾನ್ಸ್, ಕ್ರಮಸಂಖ್ಯೆ ಬರೆದಿರುವ ಚಾರ್ಟ್

ವಿಧಾನ :

 🌀ಶಿಕ್ಷಕರು ನಾಲ್ಕು ಪದಗಳನ್ನು ಗಟ್ಟಿಯಾಗಿ ಹೇಳುವುದು.

🌀ಅವುಗಳಲ್ಲಿ ಮೂರು ಪದಗಳು ಒಂದೇ ಆರಂಭಿಕ ಧ್ವನಿಯಿಂದ ಪ್ರಾರಂಭವಾಗಬೇಕು 

🌀ಒಂದು ಪದ ವಿಭಿನ್ನ ಧ್ವನಿಯಿಂದ ಪ್ರಾರಂಭವಾಗಬೇಕು ಉದಾಹರಣೆ ಪಟ,

🌀ಪದಕ, ಚರಕ ಪುಸ್ತಕ ಇವುಗಳಲ್ಲಿ ವಿಭಿನ್ನ ಧ್ವನಿಯ ಪದ ಯಾವುದು? ಎಂದು ಕೇಳಿ ಗುರುತಿಸಲು ಹೇಳುವುದು..

*ಅರ್ಥ ಗ್ರಹಿಕೆಯೊಂದಿಗೆ ಓದು*

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.

ಚಟುವಟಿಕೆ :  ಚಿತ್ರ ಸಂಪುಟ (ಗುರಿ-೨) 

ವಿಷಯ: ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳು/ವಿಷಯಗಳು.

ಉದ್ದೇಶಗಳು:

     ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು.

     ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.

ಅಗತ್ಯ ಸಾಮಗ್ರಿಗಳು : ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳಿಗೆ ಸಂಬಂಧಿಸಿದ ಚಿತ್ರಪಟ, ಇದಕ್ಕೆ ಪೂರಕವಾದ ಕಥನ/ ಕವಿತೆ/ ಹಾಡುಗಳ ಪಟ್ಟಿ.

ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.

*  ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.

*    ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು / ಬರೆಯುವುದು.

*    ಮಾದರಿ ಚಿತ್ರಗಳನ್ನು (ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳಿಗೆ ಸಂಬಂಧಿಸಿದ) ಓದುವುದು ಮತ್ತು ಅದರ ಕುರಿತಾಗಿ ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆ ಚರ್ಚಿಸುವರು.

    ವೈಯಕ್ತಿಕ ಚಿತ್ರ ಸಂಪುಟ : ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ ಮಗು ಸನ್ನಿವೇಶ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಆ ಚಿತ್ರದ ಓದಿನ ಗ್ರಹಿಕೆಗಳನ್ನು ಅಭಿವ್ಯಕ್ತಪಡಿಸುತ್ತಾರೆ.

ಉದಾ : ಚಂದ್ರ, ನಕ್ಷತ್ರಗಳು, ರಸ್ತೆ ದೀಪಗಳು ಇತ್ಯಾದಿ.. ಚಿತ್ರಗಳು/ ವಿಡಿಯೋಗಳು.

 ಶಿಕ್ಷಕರು ಸುಗಮಕಾರಿಕೆಯಲ್ಲಿ ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:

     ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳು ಯಾವುವು?

     ಅವುಗಳಲ್ಲಿ ನಿನಗೆ ಇಷ್ಟವಾದ ವಸ್ತುಗಳು ಯಾವುವು?

ಹೀಗೆ ಶಿಕ್ಷಕರು ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು.

    ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳ ಚಿತ್ರಗಳನ್ನು/ ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು. ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ ಭಾಷೆಯಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡುವುದು.

* ಉದ್ದೇಶಿತ ಬರೆಹ *

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ.

ಚಟುವಟಿಕೆ ಹೆಸರು : ಪುಸ್ತಕ ರಚನೆ

ಉದ್ದೇಶಗಳು:

     ಮಕ್ಕಳ ಹಸ್ತಪತ್ರಿಕೆಯನ್ನು ಸಿದ್ಧಪಡಿಸುವುದು.

     ಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ತಯಾರಿಸುವುದು.

     ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು.

ಅಗತ್ಯ ಸಾಮಗ್ರಿಗಳು: ಹಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್

ವಿಧಾನ:

* ಶಿಕ್ಷಕರು ತರಗತಿ ನೋಟ್‌ಪುಸ್ತಕಗಳನ್ನು ತಯಾರಿಸಲು ಮಕ್ಕಳಿಗೆ ಸಹಾಯ ಮಾಡುವುದು.. 

*  ಇದರಲ್ಲಿ ಪ್ರತಿ ಮಗುವು ಒಂದು ಹಾಳೆಯಲ್ಲಿ ಸೂಚಿತ ವಿಷಯದ ಬಗ್ಗೆ ಚಿತ್ರ ಬಿಡಿಸಲು ಅಥವಾ ಬರೆಯಲು ತಿಳಿಸುವುದು.

ನಂತರ ಆ ಹಾಳೆಯನ್ನು ತರಗತಿ ನೋಟ್‌ಪುಸ್ತಕಕ್ಕೆ ಸೇರಿಸಲು ನೀಡುವ ಮೂಲಕ ತನ್ನ ಕೊಡುಗೆಯನ್ನು ಸಲ್ಲಿಸಲು ಅವಕಾಶ ಕೊಡುವುದು.

* ಎಲ್ಲಾ ಮಕ್ಕಳ ಹಾಳೆಯನ್ನು ಸೇರಿಸಿ ತರಗತಿ ನೋಟ್‌ಪುಸ್ತಕವನ್ನು ರಚಿಸುವುದು.

ಸಲಹಾತ್ಮಕ ವಿಷಯ: ನನ್ನ ಇಷ್ಟದ ಆಟ

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

  6ನೇ ಅವಧಿ *ಹೊರಾಂಗಣ ಆಟಗಳು*  

ಎಷ್ಟಪ್ಪ? ಎಷ್ಟು? ನೀವು ಹೇಳಿದಷ್ಟು 

ಸಾಮರ್ಥ್ಯ : ಸಂಖ್ಯಾ ಜ್ಞಾನ ಬೆಳೆಸುವುದು

ಸಾಮಗ್ರಿ:

ವಿಧಾನ : ಮಕ್ಕಳನ್ನು ವೃತಾಕಾರದಲ್ಲಿ ನಿಲ್ಲಿಸಿ ಶಿಕ್ಷಕರು ಎಷ್ಟಪ್ಪ ಎಷ್ಟು ಹೇಳಿದಾಗ ಮಕ್ಕಳು ನೀವು ಹೇಳಿದಷ್ಟು ಎಂದು ಉತ್ತರಿಸುವರು ಶಿಕ್ಷಕರು ಹೇಳಿದ ಸಂಖ್ಯೆಗೆ ಅನುಗುಣವಾಗಿ ಮಕ್ಕಳು ಗುಂಪುಗೂಡಬೇಕು ಎಂದು ಸೂಚಿಸುವುದು, ಸಂಖ್ಯೆಗೆ ಅನುಗುಣವಾಗಿರದ ಗುಂಪು ಆಟದಿಂದ ಹೊರಗುಳಿಯುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

7ನೇ ಅವಧಿ *ಕಥಾ ಸಮಯ*

ಶೀರ್ಷಿಕೆ : ಸೋನಿ & ಟೊಮೆಟೋಸ್

ಸಾಮಗ್ರಿಗಳು : ಸಾಹಿತ್ಯ, ಪಾತ್ರಗಳ ಚಿತ್ರಗಳು.

ಉದ್ದೇಶಗಳು :

📢    ಆಲಿಸುವ ಸಾಮರ್ಥ್ಯ ಬೆಳೆಸುವುದು.

📢   ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು

📢    ಪದಸಂಪತ್ತನ್ನು ಹೆಚ್ಚಿಸುವುದು.

📢   ಅಭಿನಯ ಕೌಶಲವನ್ನು ಬೆಳೆಸುವುದು.

ವಿಧಾನ :

🧸    ಕಥೆಯನ್ನು ಓದಿ ಪುನರಾವಲೋಕನ ಮಾಡಿಕೊಳ್ಳುವುದು.

🧸 ಕಥೆಯ ಪಾತ್ರಗಳ ಹೆಸರುಗಳನ್ನು ಮಕ್ಕಳಿಂದ ಹೇಳಿಸುತ್ತಾ ನಿರೂಪಿಸುವುದು.

🧸   ಇದೇ ರೀತಿಯ ಚಿಕ್ಕ ಕಥೆಗಳನ್ನು ಶಿಕ್ಷಕರು ಹೇಳುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

8ನೇ ಅವಧಿ *ಮತ್ತೆ ಸಿಗೋಣ*  

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

🔚 ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

🔚ಮರುದಿನ ಮಕ್ಕಳು ಸಂತೋಷದಿAದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನುಏರ್ಪಡಿಸಿ, ಬೀಳ್ಕೊಡಿ.

🔚"ನೀನೇ ಮಾಡಿ ನೋಡು' ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.

[ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]

                                                         🙏🙏🙏🙏🙏🙏          

                  ಮಲ್ಲಿಕಾರ್ಜುನ್ ಬಡಿಗೇರ್       

                     ನಲಿಕಲಿ ಶಿಕ್ಷಕರು              

 ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ

        ಹೊನ್ನಾಳಿ(ತಾ) ದಾವಣಗೆರೆ (ಜಿ).   

                     9535633529