ವಿದ್ಯಾ ಪ್ರವೇಶ ದಿನ 13

 

   ವಿದ್ಯಾ ಪ್ರವೇಶ  13ನೇ ದಿನ

👫👬👭👫👫👬👭👫👫👬👭👫

(ವಿ.ಪ್ರ 2022-23 ರ ಕೈಪಿಡಿಯ 22ನೇ ದಿನ)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1

ದಿನ - 17 ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ನೀಡಲಾದ ಚಟುವಟಿಕೆ ಪುನರಾವರ್ತಿಸಿ

ಚಟುವಟಿಕೆ 2: ಅಜ್ಜಿ ಹೇಳುತ್ತಾಳೆ

👵 ಮಕ್ಕಳನ್ನು ವೃತ್ತದಲ್ಲಿ ನಿಲ್ಲುವಂತೆ ಮಾಡಿ ಮತ್ತು ಸ್ಪಷ್ಟವಾಗಿ ಸೂಚನೆಗಳನ್ನು ನೀಡಿ.

👵  ಶಿಕ್ಷಕರು ‚ಅಜ್ಜಿ ನಿಮ್ಮ ಹಲ್ಲನ್ನುಜ್ಜಿ ಅನ್ನುತಿದ್ದಾಳೆ'’ ಎಂದಾಗ, ಮಕ್ಕಳು ಹಲ್ಲುಜ್ಜುವ ಹಾಗೆ ವರ್ತಿಸಬೇಕು.

👨‍🏫    ಶಿಕ್ಷಕರು "ಅಜ್ಜಿ ಹೇಳ್ತಾಳೆ'’ ಅಂತ ಹೇಳದೆ ಕೇವಲ "ಕೂದಲನ್ನು ಬಾಚಿ’’ ಅಥವಾ "ಹಲ್ಲನುಜ್ಜಿ" ಅಂದಾಗ ಮಕ್ಕಳು ಅದನ್ನು ಅನುಪಾಲಿಸಬಾರದು. ಅನುಪಾಲಿಸಿದರೆ ಚಟುವಟಿಕೆಯಿಂದ ಹೊರಗುಳಿಯುತ್ತಾರೆ.

ಮಾತುಕತೆ 

ದಿನ 16ರ ಮಾತುಕತೆ ಚಟುವಟಿಕೆಯನ್ನು ಮಾಡಿಸಿ

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

2ನೇ ಅವಧಿ *ನನ್ನ ಸಮಯ*

  ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯನಿರ್ವಹಿಸುವುದು.

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) 

ಸಾಮರ್ಥ್ಯ: ಧ್ವನಿಯ ಅರಿವು, ಇತರರೊಂದಿಗೆ ಸಂವೇದನಾ ಶೀಲತೆ, ಅನುಭೂತಿ.

ಚಟುವಟಿಕೆ : ಧ್ವನಿಯನ್ನು ಊಹಿಸು.

ಉದ್ದೇಶ:- ವಿಭಿನ್ನ ಶಬ್ಧಗಳನ್ನು ಊಹಿಸಿ ಹೇಳುವುದು.

ಅಗತ್ಯ ಸಾಮಗ್ರಿಗಳು : ಸ್ಥಳೀಯವಾಗಿ ಲಭ್ಯವಿರುವ ಸಂಗೀತ ಸಾಧನಗಳು.

ವಿಧಾನ;

🌀ಮಕ್ಕಳನ್ನು ಹೊರಾಂಗಣಕ್ಕೆ ಕರೆದುಕೊಂಡು ಹೋಗುವುದು.      

🌀ಮಕ್ಕಳಿಗೆ ಅವರ ಕಣ್ಣುಗಳನ್ನು ಮುಚ್ಚಿಕೊಳ್ಳಲು ಹೇಳುವುದು.

🌀 ವಿವಿಧ ರೀತಿಯ ಸಾಧನ/ವಾದ್ಯಗಳನ್ನು ನುಡಿಸುವ ಮೂಲಕ ವಿಭಿನ್ನ ಶಬ್ದಗಳನ್ನು ಮಾಡುವುದು. 

🌀 ಅವರು ಕಣ್ಣುಗಳನ್ನು ಮುಚ್ಚಿಕೊಂಡೆ ಕೇಳಿಸಿಕೊಂಡ ಶಬ್ಧಗಳನ್ನು ಗುರುತಿಸಿ ಹೇಳಲು ಪ್ರೋತ್ಸಾಹಿಸುವುದು. ನಂತರ ಮಕ್ಕಳ ಅನುಭವಗಳನ್ನು ಚರ್ಚಿಸುವುದು.

🌀 ಇದರ ಆಧಾರದಲ್ಲಿ ಕೆಲವು ಜನರು ಕಡಿಮೆ ಅಥವಾ ಯಾವುದೇ ಶಬ್ಧಜ್ಞಾನ ಹೊಂದಿರುವುದಿಲ್ಲ. ಇನ್ನೂ ಕೆಲವರು ತೀಕ್ಷ್ಣವಾದ ಶಬ್ದಜ್ಞಾನವನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಅವರಿಗೆ ತಿಳಿಸುತ್ತಾ ಅಂತಹವರ ಬಗ್ಗೆ ಅನುಭೂತಿ ಹೊಂದಲು ನೆರವಾಗುವುದು. 

🎯 ತಮ್ಮ ಕಿವಿಗಳ ಆರೈಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸುವುದು.

🎯ಅವರು ಸ್ನಾನದ ನಂತರ ತಕ್ಷಣವೇ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ತಮ್ಮ ಪೋಷಕರ ಸಹಾಯವನ್ನು ಪಡೆಯಬಹುದು 

🎯  ಕಿವಿಗಳನ್ನು ಸ್ವಚ್ಛಗೊಳಿಸಲು ಕಿವಿಗಳಲ್ಲಿ ಯಾವುದೇ ಚೂಪಾದ/ಅಪಾಯಕಾರಿ ವಸ್ತುಗಳನ್ನು ಬಳಸಬಾರದು ಎಂಬ ಅರಿವನ್ನು ಮೂಡಿಸುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸೂಕ್ಮ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನ ಶೀಲತೆಯ ಅಭಿವೃದ್ಧಿ.

ಚಟುವಟಿಕೆ: ಸ್ಲೇಟಿನ ಮೇಲೆ ಅಥವಾ ಬೋರ್ಡಿನ ಮೇಲೆ ಚಿತ್ರ ಬಿಡಿಸುವುದು

ಉದ್ದೇಶಗಳು:

🟪 ಸ್ಲೇಟ್ ಮೇಲೆ ಬಳಪ ಹಿಡಿಯುವ ಕೌಶಲ ಬೆಳೆಯುವುದು.

🟪ಬರೆಯುವ ಮತ್ತು ಚಿತ್ರ ಬಿಡಿಸಿ ಬಣ್ಣ ತುಂಬುವ ಕೌಶಲ ವೃದ್ಧಿಸುವುದು.

ಸಾಮಗ್ರಿ; ಸ್ಲೇಟ್/ ಬೋರ್ಡ, ಚಾಕಪೀಸ್.

ವಿಧಾನ: ಬೋರ್ಡ್ ಮತ್ತು ಬಣ್ಣದ ಚಾಕ್ಪೀಸ್ ಕೊಟ್ಟು ಬೇರೆ ಬೇರೆ ಆಕಾರಗಳು ಮತ್ತು ಚಿತ್ರವನ್ನು ಬರೆಯುವಂತೆಹೇಳುವುದು. ಅವರಿಗಿಷ್ಟ ಬಂದಂತೆ ಚಿತ್ರಗಳನ್ನು ಬರೆಯಬಹುದು.

      ಶಿಕ್ಷಕರು ತಮ್ಮ ಅಭಿಪ್ರಾಯದಂತೆ ಯಾವುದೇ ಚಿತ್ರ ಬರೆಯಲು ಒತ್ತಡ ಹೇರಬಾರದು. ಮಕ್ಕಳು ತಮಗಿಷ್ಟ ಬಂದಂತೆ ಚಿತ್ರ ಬರೆದು, ಅವರಿಷ್ಟದ ಬಣ್ಣ ತುಂಬಲು ಹೇಳುವುದು.

ಅ.ಹಾ:-HW-5 ನನ್ನ ನೆರಳನ್ನು ಗುರ್ತಿಸು

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

                       *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.

ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2)

(10 ನೇ ದಿನದಿಂದ ಮುಂದುವರೆದಿದೆ.)

ಉದ್ದೇಶಗಳು:-

🔻   ಧ್ವನಿ ಸಂಕೇತಗಳ ಅರಿವು ಮೂಡಿಸುವುದು.

🔻ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು.

🔻ಪದಗಳನ್ನು ಗ್ರಹಿಸಿ ಗುರುತಿಸುವುದು.

🔻 ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.

ಅಗತ್ಯ ಸಾಮಗ್ರಿಗಳು- ಇಲ್ಲ

ಸಲಹಾತ್ಮಕ ವಿಷಯ : ಪರಿಸರದ ವಸ್ತುಗಳು

ವಿಧಾನ- 

    ಸುಳಿವುಗಳ ಮೂಲಕ ತರಗತಿ ಹೊರಗಿನ ಪರಿಸರದಲ್ಲಿರುವ ವಸ್ತುಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ ಆಯೋಜಿಸಿ. ಉದಾಹರಣೆಗಾಗಿ ಶಿಕ್ಷಕರು ‘ನನ್ನ ಮನಸ್ಸಿನಲ್ಲಿರುವ ವಸ್ತು ಹಸಿರು ಬಣ್ಣವನ್ನು ಹೊಂದಿದ್ದು ಅದರ ಹೆಸರು  ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ಎಲೆ ಎಂದು ಗುರುತಿಸುವುದು. ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.

ಅ.ಹಾ: EC-5 ಧ್ವನಿ-ಬಣ್ಣ ಗುರುತಿಸಿ ಹೇಳು

*ಅರ್ಥ ಗ್ರಹಿಕೆಯೊಂದಿಗೆ ಓದು*

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.
ಚಟುವಟಿಕೆ : ನನ್ನ ಮೊದಲ ಪದ ಪೆಟ್ಟಿಗೆ (ಗುರಿ-2)
ಉದ್ದೇಶ : ಪರಿಚಿತ ವಸ್ತು ವಿಷಗಳನ್ನು ಆಧರಿಸಿ ಪದಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸುವರು ಮತ್ತು ಚಿತ್ರಗ್ರಹಿಸಿ ಪದಗಳನ್ನು ಓದುವರು.
ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ನೋಟ್ ಪುಸ್ತಕ, ಚಿತ್ರ ಪಟ
ವಿಧಾನ: 
    ಮಕ್ಕಳು ಹಳೆಯ ನಿಯತಕಾಲಿಕಗಳಿಂದ ಹಾಗೂ ಕಥೆ ಪುಸ್ತಕಗಳಿಂದ 3-4 ಅಕ್ಷರಗಳ ಪದಗಳನ್ನು ಕತ್ತರಿಸಿ ಒಂದು ಪೆಟ್ಟಿಗೆಯಲ್ಲಿ ಸಂಗ್ರಹಿಸುವುದು. ನಂತರ ಅವುಗಳನ್ನು ಕಾಗದದ ಮೇಲೆ ಅಂಟಿಸಿ,ಪ್ರತಿ ಪದಕ್ಕೂ ಚಿತ್ರ ಬಿಡಿಸಲು ಪ್ರಯತ್ನಿಸುವುದು.

 * ಉದ್ದೇಶಿತ ಬರೆಹ *

ಸಾಮರ್ಥ್ಯ:ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದ ಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿ ಕೊಳ್ಳುವುದು, ಪರಿಸರದ ಅರಿವು.

ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2)

 ಉದ್ದೇಶಗಳು:

📌    ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.

📌   ಸೃಜನಶೀಲ ಚಿಂತನೆಯನ್ನು ಬೆಳೆಸುವುದು.

📌    ಪರಿಸರದ ಅರಿವು ಮೂಡಿಸುವುದು.

📌    ಪದಸಂಪತ್ತನ್ನು ಹೆಚ್ಚಿಸುವುದು.

📌    ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು.

ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದ, ಕ್ರೇಯಾನ್ಸ್

ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.

ಸೂಚಿತ ವಿಷಯ : ಬಣ್ಣಗಳು

      ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್ ಪೇಪರ್ ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. 

 ಈ ಚಾರ್ಟ್ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸಿ, ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.

ಬರವಣಿಗೆಯ ಮಾದರಿ: 

   ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

   ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

  6ನೇ ಅವಧಿ *ಹೊರಾಂಗಣ ಆಟಗಳು*  

ಚಟುವಟಿಕೆ : ರೋಲಿಂಗ್ (ಉರುಳಿಸು) (ಗುರಿ-೧)

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

ಬೇಕಾಗುವ ಸಾಮಗ್ರಿ : ರಿಂಗ್

ವಿಧಾನ:

     ನೆಲದ ಮೇಲೆ ನೇರ ಗೆರೆಯನ್ನು ಎಳೆಯಿರಿ.

  ಮಕ್ಕಳು ಸರದಿಯಲ್ಲಿ ರಿಂಗನ್ನು ಕೈಯಲ್ಲೇ ಹಿಡಿದುಕೊಂಡು ಆ ಗೆರೆಯ ಮೇಲೆ ಉರುಳಿಸಲು ಸೂಚಿಸುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

7ನೇ ಅವಧಿ *ಕಥಾ ಸಮಯ*

ಶೀರ್ಷಿಕೆ : ತೆನಾಲಿರಾಮಕೃಷ್ಣ ಮತ್ತು ಮಡಕೆ

ಸಾಮಗ್ರಿಗಳು : ಕಡ್ಡಿ ಚಿತ್ರಗಳು

ಉದ್ದೇಶಗಳು :

👉   ಆಲೋಚನಾ ಶಕ್ತಿಯನ್ನು ವೃದ್ಧಿಸುವುದು

👉   ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.

👉   ಊಹಿಸುವ ಕೌಶಲವನ್ನು ಹೆಚ್ಚಿಸುವುದು.

👉 ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.

ವಿಧಾನ : ಕಡ್ಡಿ ಚಿತ್ರಗಳು

   ಕಡ್ಡಿಚಿತ್ರಗಳನ್ನು  ಬಳಸಿ ಕಥಾಸಮಯವನ್ನು ಮನೋ ರಂಜನಾತ್ಮಕವಾಗಿ ಸೃಜಿಸುವುದು. ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸಿ.








     ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

೧)  ರಾಜನು ತೆನಾಲಿರಾಮನಿಗೆ ಮುಖ ತೋರಿಸಬೇಡ ಹೊರಟು ಹೋಗು ಎಂದು ಏಕೆ ಹೇಳಿದನು?

೨)  ತೆನಾಲಿರಾಮನು ಹೂಡಿದ ಉಪಾಯವೇನು?

(ಕಥೆಯನ್ನು ಆನಂದಿಸುವುದರ ಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)

👉👉 ಕಥೆಯ ವೀಡಿಯೋಗಾಗಿ ಕ್ಲಿಕ್ ಮಾಡಿ 👈👈

(ವಿಡಿಯೋ ಕೃಪೆ ಶ್ರೀಮತಿ ಗೀತಾ ಶಿಕ್ಷಕರು ಚಿಕ್ಕಮಗಳೂರು)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

8ನೇ ಅವಧಿ *ಮತ್ತೆ ಸಿಗೋಣ*  

🔚ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

🔚ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

🔚   ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ ಬೀಳ್ಕೊಡಿ.

🔚 ಮುಂದಿನವಾರ "ಉದ್ಯಾನವನದ ಭೇಟಿಗಾಗಿ" ಯೋಜನೆ ರೂಪಿಸಿ ಮತ್ತು ಅದಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಸಿದ್ಧಪಡಿಸಿಕೊಳ್ಳಿ.

🔚 ಶಾಲೆಯಲ್ಲಿ ಚಿಕ್ಕ ಪುಸ್ತಕ ಪ್ರದರ್ಶನ ಆಯೋಜಿಸಿ, ಪೋಷಕರನ್ನು ಆಹ್ವಾನಿಸಲು ಯೋಜನೆ ಸಿದ್ಧಪಡಿಸಿ.

[ಸಾಹಿತ್ಯ ಕೃಪೆ: ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]

                                                         🙏🙏🙏🙏🙏🙏          

                  ಮಲ್ಲಿಕಾರ್ಜುನ್ ಬಡಿಗೇರ್       

                     ನಲಿಕಲಿ ಶಿಕ್ಷಕರು              

 ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ

        ಹೊನ್ನಾಳಿ(ತಾ) ದಾವಣಗೆರೆ (ಜಿ).   

                     9535633529