ವಿದ್ಯಾ ಪ್ರವೇಶ ದಿನ 10

 

   ವಿದ್ಯಾ ಪ್ರವೇಶ  10ನೇ ದಿನ

👫👬👭👫👫👬👭👫👫👬👭👫

(ವಿ.ಪ್ರ 2022-23 ರ ಕೈಪಿಡಿಯ 16ನೇ ದಿನ)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1

ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು “Good morning welcome  Thrilling Thursday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಅವರು “Good morning thank you same to you" ಎಂದು ಉತ್ತರಿಸಲಿ.

ಚಟುವಟಿಕೆ 2

ಚಟುವಟಿಕೆ : ಕದಮ್ ತಾಲ್

ಸಾಮಗ್ರಿಗಳು: ಡ್ರಮ್/ತಂಬೂರಿ

1. ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು ‘ಹಾಯ್ ಟೀಚರ್’ ಎಂದು ಹೇಳಿಸಿ. ಹಲೋ.. ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ.

ಹಿಂದಿನ ದಿನದಂತೆ ಕದಮ್‌ತಾಲ್ ಚಟುವಟಿಕೆ ಮಾಡುವುದು.

ಮಾತುಕತೆ

ಚಟುವಟಿಕೆ : ಮೋಜು ಮಾಡೋಣ

ಸಾಮಗ್ರಿಗಳು: ಸೀಮೆಸುಣ್ಣ / ಕೋಲು

ಕಾರ್ಯವಿಧಾನ:

👫  ಮಕ್ಕಳನ್ನು ಶಾಲಾ ಮೈದಾನಕ್ಕೆ ಕರೆದೊಯ್ದು ವೃತ್ತಾಕಾರದಲ್ಲಿ ನಿಲ್ಲಿಸಿ.

👫 ಪ್ರತಿ ಮಗುವಿಗೆ ಕೋಲು/ಚಾಕ್ ನೀಡಿ ಮತ್ತು ಅವರು ಕುಳಿತು ತಮ್ಮ ಕೈ/ ಪಾದಗಳನ್ನು ಕೋಲು/ಚಾಕ್ ನಿಂದ ರಚಿಸಲು ಮಾರ್ಗದರ್ಶನ ಮಾಡಿ.

👫ಅವರ ಕಾಲುಗಳು/ಕಾಲ್ಬೆರಳುಗಳು ಮತ್ತು ಕೈಗಳನ್ನು ಇತರರ ಕಾಲುಗಳು ಮತ್ತು ಕೈಗಳೊಂದಿಗೆ ಹೋಲಿಸಲು ಅವರಿಗೆ ತಿಳಿಸಿ ಮತ್ತು ಅದನ್ನು ಚಿತ್ರಿದ ನಂತರ ಅವರು ಗಾತ್ರ, ಆಕಾರ ಮತ್ತು ಹೇಗೆ ಭಾವಿಸುತ್ತಾರೆ ಎಂಬುದರ ಬಗ್ಗೆ ಮಾತನಾಡಲು ಬಿಡಿ.

ಚಟುವಟಿಕೆ: ರೈಮ್

·    Head, shoulders, knees and toes ರೈಮ್ ಅನ್ನು ಈ 

ಕೆಳಕಂಡ ರೀತಿಯಲ್ಲಿ ಹಾಡಿಸಿ 

Teacher: Head, shoulders,

Students: knees and toes 

Teacher:Knees and toes,

Students: Knees and toes, 

Teacher: Head, shoulders,

Students: knees and toes

Teacher: It’s my body.

Students: It’s my body. 

Teacher: Eyes and ears,and 

Students: mouth and nose

Teacher: Mouth and nose, 

Students: Mouth and nose, 

Teacher: Eyes and ears and

Students: mouth and nose 

Teacher: Eyes and ears and

Students: mouth and nose 

Teacher: It’s my body. 

Students: It’s my body.


⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

2ನೇ ಅವಧಿ *ನನ್ನ ಸಮಯ*

  ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯನಿರ್ವಹಿಸುವುದು.

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) 

ಸಾಮರ್ಥ್ಯ : ಬಣ್ಣ ಮತ್ತು ಆಕಾರಗಳ ಆಧಾರದ ಮೇಲೆ ವಿಂಗಡಣೆ ಮತ್ತು ಪರಿಸರದ ಅರಿವು

ಚಟುವಟಿಕೆ : ವಿಂಗಡಿಸುವುದು (ಗುರಿ 3)

ಉದ್ದೇಶ:- ಗುಣಲಕ್ಷಣಗಳ ಆಧಾರವಾಗಿ ವಿಂಗಡಿಸುವುದು.

ಅಗತ್ಯ ಸಾಮಗ್ರಿಗಳು : ಮಣ್ಣಿನ ಚೆಂಡುಗಳಂತಹ ವಸ್ತುಗಳು, ಬೆಣಚು ಕಲ್ಲುಗಳು, ಗುಂಡಿಗಳು, ಬೀಜಗಳು, ಉಂಗುರಗಳು

ವಿಧಾನ :

🎯 ವಿವಿಧ ಬಣ್ಣ ಮತ್ತು ಆಕಾರಗಳುಳ್ಳ ವಸ್ತುಗಳನ್ನು ನೆಲದ ಮೇಲೆ ಹರಡಿ ಒಂದೇ ಬಣ್ಣ ಅಥವಾ ಆಕಾರದ ವಸ್ತುಗಳನ್ನು ವಿಂಗಡಿಸಿ ಪ್ರತ್ಯೇಕ ಗುಂಪು ಮಾಡಿಸುವುದು. 

🎯ಒದಗಿಸಿದ ವಸ್ತುಗಳನ್ನು ಹೋಲಿಸಿ ಸಾಮ್ಯತೆ ಮತ್ತು ವ್ಯತ್ಯಾಸ ಗುರುತಿಸಲು ಸೂಚಿಸುವುದು.

🎯ಸಾಮ್ಯತೆ ಮತ್ತು ವ್ಯತ್ಯಾಸವನ್ನು ಯಾವ ಆಧಾರದ ಮೇಲೆ ಗುರುತಿಸಿದರು ಎಂಬುದನ್ನು ವಿವರಿಸಲು ಹೇಳುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.

ಚಟುವಟಿಕೆ : ಆಕೃತಿಗಳನ್ನು ಅಂಟಿಸು. (ಗುರಿ - 1)

ಉದ್ದೇಶಗಳು :

🌀ವಿವಿಧ ಆಕೃತಿಗಳನ್ನು ಗುರುತಿಸುವುದು.

🌀ಕತ್ತರಿಯನ್ನು ಹಿಡಿದು ಹಾಳೆಯನ್ನು ಕತ್ತರಿಸಿ ಅಂಟಿಸುವ ವಿಧಾನವನ್ನು ತಿಳಿಯುವುದು.

🌀ಕೈ ಮತ್ತು ಬೆರಳುಗಳ ಕುಶಲತೆ ಹೆಚ್ಚುವುದರ ಜೊತೆಗೆ ಏಕಾಗ್ರತೆ ಉಂಟಾಗುವುದು.

ಸಾಮಗ್ರಿಗಳು : ಬಣ್ಣದ ಹಾಳೆಗಳು, ಕತ್ತರಿ ಮತ್ತು ಅಂಟು.

ವಿಧಾನ ;

ಬಿಳಿ ಪೇಪರಿನಲ್ಲಿ ವಿವಿಧ ಆಕೃತಿಗಳ (ವೃತ್ತ, ತ್ರಿಭುಜ,ಚೌಕ ಮತ್ತು ಆಯತ) ಚಿತ್ರಗಳನ್ನು ಕತ್ತರಿಸಿ ಇನ್ನೊಂದು ಬಣ್ಣದ ಹಾಳೆಯ ಮೇಲೆ ಅಂಟಿಸಲು ಹೇಳುವುದು.

📖ಅ.ಹಾ: HW 4 ಮುಖದ ಭಾವನೆಗಳು

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

                       *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ: ಪದ ಸಂಯೋಜನೆ

ಚಟುವಟಿಕೆ : ಪದರಚನೆ (ಗುಂಪು-2)

ಉದ್ದೇಶಗಳು:

* ಪದ ರಚನಾ ಸಾಮರ್ಥ್ಯವನ್ನು ಹೆಚ್ಚಿಸುವುದು.

* ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.

ಸಾಮಗ್ರಿ : ಇಲ್ಲ

ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ ಸ್ಪಷ್ಟವಾದ ಸೂಚನೆಗಳನ್ನು ನೀಡಿ ಚಟುವಟಿಕೆಯನ್ನು ಆರಂಭಿಸಿ.

* ನಾನು ಹೇಳುವ ಅಕ್ಷರಗಳನ್ನು ಆಲಿಸಿ.

* ಅಕ್ಷರಗಳನ್ನು ಸೇರಿಸಿ ಪದ ರಚಿಸಿ ಹೇಳಿ.

ಉದಾಹರಣೆ : ಶಿಕ್ಷಕರು ಜೋರಾಗಿ ಸ(ವಿರಾಮ) ರ ಎಂದು ಉಚ್ಚರಿಸಿದಾಗ ಮಕ್ಕಳು ಅಕ್ಷರಗಳನ್ನು ಆಲಿಸಿ ಸರ ಎಂದು ಪದ ರಚಿಸಿ ಹೇಳಲಿ.

ಈ ಚಟುವಟಿಕೆಯಲ್ಲಿ ಶಿಕ್ಷಕರು ಹಂತ ಹಂತವಾಗಿ ಮೂರಕ್ಷರ ಹಾಗೂ ನಾಲ್ಕಕ್ಷರದ ಪದಗಳನ್ನು ಬಳಸಬಹುದಾಗಿದೆ.                     

*ಅರ್ಥ ಗ್ರಹಿಕೆಯೊಂದಿಗೆ ಓದು*

ಸಾಮರ್ಥ್ಯ: ಪದ ಸಂಪತ್ತು ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು

ಚಟುವಟಿಕೆ: ಊಹಾತ್ಮಕ ಓದು (ಗುರಿ-2)

ಉದ್ದೇಶ:

# ಊಹಿಸಿ ಅರ್ಥೈಸಿಕೊಳ್ಳುವರು ಚಿತ್ರಗಳೊಂದಿಗೆ ಪಠ್ಯವನ್ನು ಸಂಬಂಧಿಕರಿಸುವರು.

ಅಗತ್ಯ ಸಾಮಗ್ರಿಗಳು : ಸಚಿತ್ರ ಕೋಶ,

ವಿಧಾನ: ಮಕ್ಕಳು ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನ ನೋಡಿ ಸ್ವತಃ ಊಹೆ ಮಾಡಿ ಓದುವುದು.

 * ಉದ್ದೇಶಿತ ಬರೆಹ *

ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲಚಿಂತನೆ, ಪದಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಹಂಚಿತ ಬರೆಹ (ಗುರಿ : 2) 

ಉದ್ದೇಶಗಳು:

🧸 ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.

🧸ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.

🧸 ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.

🧸ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.

🧸 ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.

ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್

ವಿಧಾನ:

👉ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು.

👉ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬAಧಿಸಿದAತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.

ಸಲಹಾತ್ಮಕ ಸೂಚಿತ ವಿಷಯ:- ನನ್ನ ಶಾಲೆ

ಗಮನಿಸಬೇಕಾದ ಅಂಶಗಳು:

📌ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. 

📌ಮಕ್ಕಳೊಂದಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು.

📌ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ ಬರೆಯಲು ತಿಳಿಸುವುದು.

📌 ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು.

📌 ಅಂತಹ ಸನ್ನಿವೇಶದಲ್ಲಿ ಶಿಕ್ಷಕರು ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.

ಬರವಣಿಗೆಯ ಮಾದರಿ:

* ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

* ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು.

* ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

📖ಅ.ಹಾ: EC-4 ಅಕ್ಷರ ಸಂಖ್ಯೆಗಳನ್ನು ಗುರುತಿಸು

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

  6ನೇ ಅವಧಿ *ಹೊರಾಂಗಣ ಆಟಗಳು*  

ಚಟುವಟಿಕೆ : ವಿಗ್ರಹದಂತೆ ನಿಲ್ಲು

ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು, ಸೂಚನೆ ಪಾಲನೆ, ಕಾಲುಗಳ ಚಲನೆ.

ಸಾಮಗ್ರಿ : ಇಲ್ಲ

ವಿಧಾನ: ಶಿಕ್ಷಕರು Fire in the mountain run run run ಎಂದಾಗ ಮಕ್ಕಳು ಓಡುತ್ತಿರಬೇಕು. ಮಧ್ಯದಲ್ಲೇ ಶಿಕ್ಷಕರು  STATUE ಎಂದು ಹೇಳಿದಾಗ ಮಕ್ಕಳು ಓಡುವುದನ್ನು ನಿಲ್ಲಿಸಿ ವಿಗ್ರಹದಂತೆ ನಿಲ್ಲಬೇಕು. ಚಲನೆಯಲ್ಲಿ ಇರುವ ಮಕ್ಕಳು ಆಟದಿಂದ ಹೊರಗುಳಿಯುವರು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

7ನೇ ಅವಧಿ *ಕಥಾ ಸಮಯ*

ಸಾಮಗ್ರಿಗಳು : ಮುಖವಾಡಗಳು

ಉದ್ದೇಶಗಳು :

* ಆಲಿಸುವ ಸಾಮರ್ಥ್ಯ ಬೆಳೆಸುವುದು.

* ಪದಸಂಪತ್ತನ್ನು ಹೆಚ್ಚಿಸುವುದು.

* ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು.

ವಿಧಾನ :

🔴  ಕಥೆಯನ್ನು ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಹೇಳುವುದು.

🔴 ಪಾತ್ರಗಳಿಗೆ ತಕ್ಕಂತೆ ಸಿದ್ಧಪಡಿಸಿದ ಮುಖವಾಡಗಳನ್ನು ಧರಿಸಿ ಹೇಳುವುದು.

🔴 ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸುವುದು.

🔴  ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. 

🔴 ಕಥೆಯನ್ನು ಹೇಳಿದ ನಂತರ ಪ್ರಶ್ನೆಗಳನ್ನು ಕೇಳಿ.

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

8ನೇ ಅವಧಿ *ಮತ್ತೆ ಸಿಗೋಣ*  

🔚ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

🔚ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

🔚 ಮರುದಿನ ಮಕ್ಕಳು ಸಂತೋಷದಿAದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನುಏರ್ಪಡಿಸಿ, ಬೀಳ್ಕೊಡಿ.

🔚ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.

[ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]

                                                         🙏🙏🙏🙏🙏🙏          

                  ಮಲ್ಲಿಕಾರ್ಜುನ್ ಬಡಿಗೇರ್       

                     ನಲಿಕಲಿ ಶಿಕ್ಷಕರು              

 ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ

        ಹೊನ್ನಾಳಿ(ತಾ) ದಾವಣಗೆರೆ (ಜಿ).   

                     9535633529