|
ವಿದ್ಯಾ ಪ್ರವೇಶ 9ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ
15ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ) ಚಟುವಟಿಕೆ 1. ಪ್ರತಿ ಮಗುವನ್ನು
ಅವನ/ ಅವಳ ಹೆಸರಿನಿಂದ ಕರೆದು “Good morning welcome” “Have a wonderful Wednesday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಅವರು “Good morning thank you same to you"ಎಂದು ಉತ್ತರಿಸಲಿ.ಅವರಿಗೆ "FIST BUMP"ನೀಡಲು ಹೇಳಿ. ಚಟುವಟಿಕೆ 2 ಚಟುವಟಿಕೆ : ಕದಮ್ ತಾಲ್ ಸಾಮಗ್ರಿಗಳು: ಡ್ರಮ್/ತಂಬೂರಿ 1. ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು ‘ಹಾಯ್ ಟೀಚರ್’ ಎಂದು ಹೇಳಿಸಿ. ‚ಹಲೋ,- ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ. ಹಿಂದಿನ ದಿನದಂತೆ ಕದಮ್‌ತಾಲ್ ಚಟುವಟಿಕೆ ಮಾಡುವುದು. ಮಾತುಕತೆ (ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ) ಚಟುವಟಿಕೆ : ನಿಮ್ಮನ್ನು ನೀವು ತಿಳಿದುಕೊಳ್ಳಿ ಸಾಮಗ್ರಿಗಳು: ವಿವಿಧ ದೇಹದ ಭಾಗಗಳ ಫ್ಲ್ಯಾಶ್ ಕಾರ್ಡ್ಗಳು,
ಚೆಂಡು, ಸಂಗೀತ ಪ್ಲೇಯರ್. ವಿಧಾನ: 1. ಮಕ್ಕಳನ್ನು ವೃತ್ತದಲ್ಲಿ ಕೂರಿಸಿ ಮತ್ತು ಫ್ಲ್ಯಾಶ್
ಕಾರ್ಡ್ ಗಳನ್ನು ಮಧ್ಯದಲ್ಲಿ ಇರಿಸಿ. 2. ಪಾಸಿಂಗ್ ದ ಬಾಲ್ ಆಟವನ್ನು ಆಡಿಸಿ. 3.ಸಂಗೀತ ನಿಂತಾಗ ಯಾವ ಮಗುವಿನ ಕೈಯಲ್ಲಿ ಚೆಂಡು ಉಳಿಯುವುದೊ ಆ ಮಗು ಫ್ಲ್ಯಾಶ್ ಕಾರ್ಡ್ ಅನ್ನು ಆರಿಸಿ ಮತ್ತು ಅದು ಯಾವ ಭಾಗ ಎಂದು ಹೇಳಬೇಕು ಮತ್ತು ಅವರ ದೇಹದ ಮೇಲೆ ತೋರಿಸುವ ಮೂಲಕ ಸೂಚಿಸಬೇಕು. ಉದಾಹರಣೆಗೆ- ಅವನು/ಅವಳು ಕೈ ಯನ್ನು ಎತ್ತಿಕೊಂಡಿದ್ದರೆ, ಅವನು/ಅವಳು ಕೈಯನ್ನು ಮೇಲಕ್ಕೆತ್ತಿ ಜೋರಾಗಿ ಕೈ ಎಂದು ಹೇಳಬೇಕು. ದೇಹದ ಭಾಗಗಳನ್ನು ಇಂಗ್ಲೀಷ್ ನಲ್ಲಿಯೂ ಪರಿಚಯಿಸಿ. 4. ಸಂಗೀತವನ್ನು ನುಡಿಸಿ ಮತ್ತು ಚಟುವಟಿಕೆಯನ್ನು ಪುನರಾವರ್ತಿಸಿ.
ಎಲ್ಲರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಿ. 5. ದೇಹದ ವಿವಿಧ ಭಾಗಗಳ ಕೆಲಸ ಏನು ಎಂದು ಮಕ್ಕಳನ್ನು ಕೇಳಿ. 👄 ಬಾಯಿ-ನಾನು ನನ್ನ ಬಾಯಿಯಿಂದ ಮಾತನಾಡುತ್ತೇನೆ. 🦵ಕಾಲುಗಳು -ನಾನು ನಡೆಯುತ್ತೇನೆ/ನೃತ್ಯ ಮಾಡುತ್ತೇನೆ /ಓಡುತ್ತೇನೆ/ಜಿಗಿಯುತ್ತೇನೆ. 👋ಕೈಗಳು- ನಾನು ಬರೆಯುತ್ತೇನೆ/ಕೆಲಸ ಮಾಡುತ್ತೇನೆ/ನನ್ನ ಕೈಗಳಿಂದ ಆಡುತ್ತೇನೆ ಇತ್ಯಾದಿ. (ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂ ಮಾತ -ನಾಡಲು ಪ್ರೋತ್ಸಾಹಿಸಬಹುದು) ಚಟುವಟಿಕೆ: ರೈಮ್ 🎶 Head, shoulders, knees and toes. ರೈಮ್
ಅನ್ನು ಅಭಿನಯದೊಂದಿಗೆ ಮಕ್ಕಳಿಗೆ ಹೇಳಿ ಕೊಡಿ. 🌀ದೇಹದ ಭಾಗಗಳನ್ನು ಇಂಗ್ಲೀಷ್ ನಲ್ಲಿ ಪರಿಚಯಿಸಿ. 🌀ಸರಳ ಪ್ರಶ್ನೆಗಳನ್ನು ಕೇಳಿ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* (Free Indore play) ಕಲಿಕಾ ಸಿದ್ಧತಾ ಭಾಗವಾಗಿ 8 ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. (ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಕ್ಕಳಿಗೆ
ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.) ಬಿಲ್ಡಿಂಗ್ ಬ್ಲಾಕ್ಸ್ ಮೂಲೆ:- ಸಾಮರ್ಥ್ಯ : ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು. ಚಟುವಟಿಕೆ : ಗಾತ್ರದ ಆಧಾರದ ಮೇಲೆ ವಸ್ತುಗಳ ಜೋಡಣೆ ಉದ್ದೇಶ : 4 ರಿಂದ 5 ವಸ್ತು, ಬ್ಲಾಕ್‌ಗಳನ್ನು ಜೋಡಿಸುವುದು. ಸಾಮಗ್ರಿ :- ಕಲಿಕಾ ಕಿಟ್ ನ ಬಿಲ್ಡಿಂಗ್ ಬ್ಲಾಕ್ಸ್ (ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್ಗಳು, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್ ಗಳು,
ವಿವಿಧ ಅಳತೆಯ ಪುಸ್ತಕಗಳು) ವಿಧಾನ: ಗಾತ್ರದ ಆಧಾರದ ಮೇಲೆ ಸಾಮಗ್ರಿಗಳನ್ನು ಒಂದರ ಮೇಲೊಂದರಂತೆ ಜೋಡಿಸುವರು. ಗಣಿತ ಮೂಲೆ:- ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವುದು ಹಾಗೂ ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು. ಚಟುವಟಿಕೆ: ನಡೆ ...ನಡೆ....ನಡಿಗೆ ಉದ್ದೇಶ:- ನಿರ್ದಿಷ್ಟ ನಿರ್ದೇಶನವನ್ನು ಪಾಲಿಸುತ್ತ ಸ್ವತಂತ್ರ ವಾಗಿ ಕಾರ್ಯೋನ್ಮುಖರಾಗುವುದು. ಸಾಮಗ್ರಿ :- ಚಾಕ್ ಪೀಸ್ ವಿಧಾನ:-ತರಗತಿ ಕೋಣೆಯೊಳಗೆ ವಕ್ರ, ನೇರ ರೇಖೆಗಳನ್ನು ಎಳೆದು ಅದರ ಮೇಲೆಯೇ ನಡೆಯುತ್ತ ಸಾಗುವರು. ಅನ್ವೇಷಣೆ ಅಥವಾ ವಿಜ್ಞಾನ ಮೂಲೆ: ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವ ಗಳನ್ನು ಬೆಳೆಸಿಕೊಳ್ಳುವರು. ಚಟುವಟಿಕೆ: ಬಣ್ಣದ ಮೋಜಿನಾಟ (ಗುರಿ - 3) ಉದ್ದೇಶ : ಬಣ್ಣಗಳನ್ನು ಸೇರಿಸುವ ಮೂಲಕ ಹೊಸ ಬಣ್ಣಗಳ ಸೃಷ್ಟಿಯ ಬಗ್ಗೆ ತಿಳಿಯುವುದು. ಸಾಮಗ್ರಿ :- ಪಾರದರ್ಶಕ ಲೋಟಗಳು, ನೀರು, ಬಣ್ಣಗಳು. ವಿಧಾನ: ಮಕ್ಕಳು ನೀರಿನಲ್ಲಿ ಬಣ್ಣವನ್ನು ಬೆರೆಸುವುದರಿಂದ ಆಗುವ ಬದಲಾವಣೆಯನ್ನು ಗಮನಿಸುವರು. ಗೊಂಬೆಗಳ ಮೂಲೆ : ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವುದು. ಚಟುವಟಿಕೆ: ಗೊಂಬೆ ಜೋಡಿಸು ಉದ್ದೇಶ : ಗೊಂಬೆಗಳನ್ನು ವಿವಿಧ ಆಧಾರಗಳಲ್ಲಿ ವರ್ಗೀಕರಿಸುವುದು. ಸಾಮಗ್ರಿ :- ವಿವಿಧ ರೀತಿಯ ಗೊಂಬೆಗಳು. (ವಿವಿಧ ಗಾತ್ರದ ಪ್ರಾಣಿ, ಪಕ್ಷಿ, ಮನುಷ್ಯ, ವಾಹನಗಳು. ವಿಧಾನ: ಗೊಂಬೆಗಳ ಗುಂಪು ರಚನೆ ಮಾಡಿಸುವುದು. ತಮ್ಮದೇ ಆದ ಕಲ್ಪನೆಯಲ್ಲಿ ಮಕ್ಕಳು ಗೊಂಬೆಗಳನ್ನು ಜೋಡಿಸುತ್ತಾರೆ. (ಗಾತ್ರದ ಆಧಾರದ ಮೇಲೆ ಪ್ರಾಣಿಗಳ, ಮನುಷ್ಯ ಗೊಂಬೆಗಳ, ವಾಹನಗಳ ಗುಂಪಾಗಿ, ಮನುಷ್ಯನೊಂದಿಗೆ ನಾಯಿಯನ್ನು, ಪಕ್ಷಿಯೊಂದಿಗೆ ಮರವನ್ನು,) ಮಕ್ಕಳು ಗುಂಪು ಮಾಡಿದ ಕಾರಣಗಳನ್ನು ತಿಳಿಸುವರು. ಓದುವ / ತರಗತಿ ಗ್ರಂಥಾಲಯ ಮೂಲೆ
: ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವರು. ಮತ್ತು ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು. ಚಟುವಟಿಕೆ: ಚಿತ್ರ ಓದು ಉದ್ದೇಶ : ಚಿತ್ರ ಗುರುತಿಸುವುದರೊಂದಿಗೆ ಸ್ಪಷ್ಟವಾಗಿ ಓದುವುದು. ಸಾಮಗ್ರಿ :- ಕ್ರಿಯಾ ಪದಗಳನ್ನು ಬಿಂಬಿಸುವ ಚಿತ್ರಗಳು / ಚಾರ್ಟ್ ವಿಧಾನ: ಚಿತ್ರವನ್ನು ನೋಡಿ ಕ್ರಿಯಾಪದಗಳನ್ನು ಗುರುತಿಸುವರು. ಕಲೆಗೊಂದು ನೆಲೆ/ಕರಕುಶಲ ಮೂಲೆ: ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವರು. ಚಟುವಟಿಕೆ: ಹತ್ತಿ ಉಂಡೆ ಅಂಟಿಸುವುದು. ಉದ್ದೇಶ :- ನೀಡಲಾದ ಮಾರ್ಗದರ್ಶನವನ್ನು ಅರ್ಥೈಸಿಕೊಂಡು ಕಾರ್ಯೋನ್ಮುಖರಾಗುವುದು. ಸಾಮಗ್ರಿ :- ಹತ್ತಿ, ಗೊಂದು, ಡ್ರಾಯಿಂಗ್ ಶೀಟ್. ವಿಧಾನ: ಶಿಕ್ಷಕರು ಅಕ್ಷರ / ಆಕೃತಿ / ರೇಖಾ ಚಿತ್ರ ಬರೆದ ಡ್ರಾಯಿಂಗ್ ಶೀಟ್ ಒದಗಿಸುವರು ಮಕ್ಕಳು
ಅದರ ಮೇಲೆ ಹತ್ತಿ ಉಂಡೆಗಳನ್ನು ಗೆರೆಯ ಮೇಲೆಯೆ ಅಂಟಿಸುವರು. ಬರೆಯುವ ಮೂಲೆ : ಸಾಮರ್ಥ್ಯ:- ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳು ವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು. ಚಟುವಟಿಕೆ: ಬರೆಯೋಣ ಬಾ ಉದ್ದೇಶ : ಅಕ್ಷರ ರಚನಾ ವಿನ್ಯಾಸಕ್ಕೆ ಅಗತ್ಯ ಪೂರ್ವ ತಯಾರಿ ಹೊಂದುವುದು. ಸಾಮಗ್ರಿ :- ಸ್ಯಾಂಡ್ ಟ್ರೇ (ಮರಳಿನ ಹಲಗೆ) ಮರಳಿನ ಟ್ರೇ ಯಲ್ಲಿ ಮಗು ಕೈ ಬೆರಳನ್ನು ಬಳಸಿ ವಿವಿಧ ಅಕ್ಷರ ವಿನ್ಯಾಸ ಸಂಬಂಧಿತ ರೇಖಾಭ್ಯಾಸಗಳನ್ನು ಮಾಡುವರು. ಆಟಿಕೆ / ಮಾಡಿ ನೋಡು ಮೂಲೆ : ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು. ಚಟುವಟಿಕೆ: ಜೋಡಿಸಿ ನೋಡು. ಉದ್ದೇಶ : ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ವಸ್ತುಗಳನ್ನು ಜೋಡಿಸುವುದು. ಸಾಮಗ್ರಿ :- ಹುಣಸೆ ಬೀಜ, ಮುಚ್ಛಳಗಳು, ಗುಂಡಿಗಳು, ಮಣಿಗಳು. ವಿಧಾನ : ಶಿಕ್ಷಕರು ಎಳೆದ / ಬರೆದ ರೇಖೆ, ವಕ್ರ ರೇಖೆ, ಆಕೃತಿಗಳನ್ನು ಬರೆದು ಅದರ ಮೇಲೆ ಮಕ್ಕಳು
ಮೇಲ್ಕಂಡ ಸಾಮಗ್ರಿಗಳನ್ನು ಜೋಡಿಸುವರು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ*
(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) ಸಾಮರ್ಥ್ಯ : ಗುರುತಿಸುವಿಕೆ, ಸ್ಮರಣೆ, ಪರಿಸರದ ಅರಿವು. ಚಟುವಟಿಕೆ :ಗುಂಪಿಗೆ ಸೇರದ ವಸ್ತು ಗುರುತಿಸು. (ಗುರಿ 3). ಉದ್ದೇಶ:- ಗುಂಪಿಗೆ ಸೇರದ ವಸ್ತುವನ್ನು ಗುರುತಿಸುವುದು. ಅಗತ್ಯ ಸಾಮಗ್ರಿಗಳು : ಹಣ್ಣುಗಳು ಮತ್ತು ತರಕಾರಿಗಳ ಮಾದರಿಗಳ ಸೆಟ್, ಪೆನ್ಸಿಲ್ ಮತ್ತು
ಪೆನ್ನುಗಳ ಸೆಟ್, ತ್ರಿಭುಜಾಕಾರದ ಆಕೃತಿಗಳ ಕಟೌಟ್ ಸೆಟ್ ಮತ್ತು ಒಂದು ವೃತ್ತ, ಪ್ರಾಣಿಗಳು ಮತ್ತು
ಪಕ್ಷಿ ಚಿತ್ರಗಳ ಸೆಟ್ ( ಪ್ರತಿ ಸಾಮಗ್ರಿಗಳು 3 ಸೆಟ್ ) ವಿಧಾನ : ಪ್ರತಿ ಸೆಟ್‌ನಲ್ಲಿ ಮೂರು ಒಂದೇ ರೀತಿಯ ವಸ್ತುಗಳು ಮತ್ತು ಒಂದು ವಿಭಿನ್ನ ವಸ್ತು ಇರುವಂತೆ ಅನೇಕ ಸೆಟ್‌ಗಳನ್ನು ಸಿದ್ಧಪಡಿಸುವುದು. ಮಕ್ಕಳಿಗೆ ಗುಂಪಿನಲ್ಲಿ ಒಂದೊಂದು ಸೆಟ್ ನೀಡುವುದು. ನೀಡಿದ ನಾಲ್ಕುವಸ್ತುಗಳನ್ನು ಸೂಕ್ಷ್ಮವಾಗಿ ನೋಡಲು ಹೇಳುವುದು. ವಿಭಿನ್ನವಾದ ಅಥವಾ ಗುಂಪಿಗೆ ಸೇರದ ಒಂದು ವಸ್ತುವನ್ನು ಗುರುತಿಸಿ ಅದಕ್ಕೆ ಕಾರಣ ಕೇಳುವುದು. ಪ್ರತಿ ಗುಂಪಿನ ಮಕ್ಕಳು ಚಟುವಟಿಕೆಯಲ್ಲಿ
ಭಾಗವಹಿಸಿ ತಮಗೆ ನೀಡಿದ ವಸ್ತುಗಳಲ್ಲಿ ಗುಂಪಿಗೆ ಸೇರದ ವಸ್ತುವನ್ನು ಹೇಗೆ ಆಯ್ಕೆ ಮಾಡಿದರು ಎಂಬುದನ್ನು
ವಿವರಿಸಲು ಹೇಳುವುದು. ಅ.ಹಾ:-IL-6 ಇದು
ಗುಂಪಿಗೆ ಸೇರುವುದಿಲ್ಲ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ
ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಚಟುವಟಿಕೆ : ಬ್ರಶ್ ನಿಂದ ಚಿತ್ರಕಲೆ. (ಗುರಿ - 1) ಉದ್ದೇಶಗಳು: 🎨ಬ್ರಶ್‌ನ್ನು ಹಿಡಿಯುವ ಮತ್ತು ಬಳಸುವ ವಿಧಾನವನ್ನು
ತಿಳಿಯುವುದು. 🎨 ಕಣ್ಣು ಕೈಗಳ ನಡುವೆ ಸಮನ್ವಯತೆ ರೂಢಿಯಾಗುವುದು. ಸಾಮಗ್ರಿಗಳು : ಬ್ರಶ್, ಪೇಂಟ್, ಈಸಲ್ ಬೋರ್ಡ(ಲಭ್ಯತೆ
ಇದ್ದಲ್ಲಿ) ವಿಧಾನ : ಬಿಳಿಹಾಳೆಯ ಮೇಲೆ ಪೇಂಟ್ ಮತ್ತು ಬ್ರಶ್‌ನ್ನು ಹೇಗೆ ಬಳಸಬೇಕೆಂದು ಮಕ್ಕಳಿಗೆ ತೋರಿಸುವುದು.ಮಕ್ಕಳು ತಮ್ಮ ಆಯ್ಕೆಯ ವಿವಿಧ ಚಿತ್ರಗಳನ್ನು ಚಿತ್ರಿಸಲು ಅವಕಾಶ ಮಾಡಿಕೊಡುವುದು. ಆ ಚಿತ್ರಕ್ಕೆ ಬ್ರಶ್‌ನಿಂದ ಬಣ್ಣ ತುಂಬಲು ಹೇಳಿ ಚಿತ್ರವನ್ನು ವಿವರಿಸಲು ತಿಳಿಸುವುದು. ಅ.ಹಾ:-HW-4 ಹೇಳಿದ
ಸಂಖ್ಯೆಗಳಿಗೆ ನೀಡಿದ ಬಣ್ಣ ಹಾಕು ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು ಮಾತನಾಡುವುದು* ಸಾಮರ್ಥ್ಯ: ಆಲಿಸುವ ಕೌಶಲ, ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿ,
ಔಪಚಾರಿಕ ಮಾತುಕತೆ, ಬಣ್ಣಗಳ ಕಲ್ಪನೆ ಚಟುವಟಿಕೆ : ನೋಡಿ ಹೇಳು ( ಗುರಿ-2) ಇಅಐ-8 ಉದ್ದೇಶಗಳು: * ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ
ಮಾತನಾಡುವುದು. 📢 ಔಪಚಾರಿಕ ಮಾತುಗಾರಿಕೆಯ ಕೌಶಲವನ್ನು ಬೆಳೆಸುವುದು. 📢 ಆಲಿಸಿದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವುದು. 📢 ಸೃಜನಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು. ಸಾಮಗ್ರಿ : ಪ್ರಾಣಿ, ಪಕ್ಷಿ, ವಾಹನಗಳು ಇತ್ಯಾದಿಗಳು
ಚಿತ್ರ/ ಆಟಿಕೆ ವಿಧಾನ: ಪ್ರಾಣಿ/ ಪಕ್ಷಿ/ ವಾಹನಗಳು ಇತ್ಯಾದಿಗಳ ಆಟಿಕೆ/
ಚಿತ್ರಗಳನ್ನು ಚೀಲದಲ್ಲಿರಿಸಿ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕರೆದು ಚೀಲದಿಂದ ಯಾವುದಾದರೂ ಒಂದು
ಚಿತ್ರ/ಆಟಿಕೆಯನ್ನು ತೆಗೆದುಕೊಂಡು ಅದರ ಆಕಾರ, ಬಣ್ಣ, ಉಪಯೋಗ, ಲಕ್ಷಣಗಳ ಬಗ್ಗೆ ಮಾತನಾಡಲು ತಿಳಿಸಿ.
*ಅರ್ಥ ಗ್ರಹಿಕೆಯೊಂದಿಗೆ ಓದು* ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ
ಅಭಿವೃದ್ಧಿ. ಚಟುವಟಿಕೆ : ಹೆಸರಿನ ಜಗತ್ತು (ಗುರಿ 2) ಉದ್ದೇಶ: ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು ಲಿಪಿ ಸಂಕೇತಗಳೊಂದಿಗೆ ಸಹ ಸಂಬಂಧೀಕರಿಸಿಕೊಳ್ಳುವುದು. ಸಾಹಿತ್ಯ ಮತ್ತು ವಸ್ತು ಒಂದೇ ಇದೆ ಎಂಬ ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು. ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್ ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ ಸುತ್ತಮುತ್ತಲಿನ ಸಾಮಾಗ್ರಿಗಳು ವಿಧಾನ : 🎯 ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ ಸಾಮಾನ್ಯ/ ಪರಿಚಿತ ವಸ್ತುಗಳ ಹೆಸರನ್ನು ಪಟ್ಟಿ ಮಾಡುವುದು. ಉದಾ- ಮೇಜು, ಕುರ್ಚಿ, ಬಾಗಿಲು…ಇತ್ಯಾದಿ. 🎯 ಸಿದ್ಧಪಡಿಸಿದ ನಾಮ ಫಲಕಗಳನ್ನು ಆಯಾ ವಸ್ತುಗಳ ಮೇಲೆ ಅಂಟಿಸುವುದು. 🎯 ಇನ್ನೊಂದು ಸೆಟ್ ನಾಮ ಫಲಕಗಳ ಮಿಂಚುಪಟ್ಟಿಗಳನ್ನು ತಯಾರಿಸಿಟ್ಟು ಕೊಳ್ಳುವುದು. 🎯ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು. 🎯ಪದ ಉಚ್ಛರಿಸುತ್ತಾ ಆ ವಸ್ತುವಿನ ಬಳಿಗೆ ಮಗು ಹೋಗಲು ತಿಳಿಸುವುದು. 🎯 ಮಗು ಕನಿಷ್ಟ ನಾಲ್ಕೈದು ವಸ್ತುಗಳನ್ನಾದರೂ ಹೆಸರಿಸಲು ಅವಕಾಶ ಕಲ್ಪಿಸುವುದು. 🎯 ಆ ಪದಗಳನ್ನು ಕಥೆಯಲ್ಲಿ ಗುರುತಿಸಲು ಅವಕಾಶ ಕಲ್ಪಿಸುವುದು. 🎯ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ/ ಸಮಯದಲ್ಲಿ
ಮಕ್ಕಳಿಗೆ ಗುರುತಿಸಿ ಓದಲು (ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸುವುದು. ಗಮನಿಸಿ : ಈ ಹಿಂದೆ ಈ ಚಟುವಟಿಕೆಗಳಲ್ಲಿ ಬಳಸಿದ ಪದಗಳನ್ನು ಹೊರತುಪಡಿಸಿ ಬೇರೆ ಬೇರೆ ಸ್ಥಳ, ಸನ್ನಿವೇಶದಲ್ಲಿ ಬರುವ ಪದಗಳನ್ನು ಬಳಸಿ ಚಟುವಟಿಕೆಯನ್ನು ನಿರ್ವಹಿಸುವುದು. * ಉದ್ದೇಶಿತ ಬರೆಹ * ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ. ಚಟುವಟಿಕೆ : ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-2) ಉದ್ದೇಶಗಳು: • ಸೂಕ್ಷ್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು. • ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು. • ಆಯ್ಕೆಯ ಚಿತ್ರ ಬಿಡಿಸುವುದು. ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಪೆನ್ಸಿಲ್ ವಿಧಾನ : ಮಕ್ಕಳು ತಮ್ಮ ಆಯ್ಕೆಯ ಹೂವು ಹಣ್ಣುಗಳ ಚಿತ್ರ ಬಿಡಿಸುವುದು. ಬರೆದ ಚಿತ್ರಕ್ಕೆ ಬಣ್ಣ ತುಂಬಿ ಹೆಸರಿಸಲು ತಿಳಿಸುವುದು. ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು.
ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿ ನಲ್ಲಿಯೇ ಬರೆಯುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* ಚಟುವಟಿಕೆ: ಕುಂಟೆಬಿಲ್ಲೆ ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು. ಸಾಮಗ್ರಿ : ಬಿಲ್ಲೆ, ಬಳಪ ವಿಧಾನ : 🟪ನೆಲದ ಮೇಲೆ ಬಳಪದ ಸಹಾಯದಿಂದ ಆಟಕ್ಕೆ ಬೇಕಾದ ಚೌಕಗಳನ್ನು ಎಳೆಯುವುದು. 🟪ಮಕ್ಕಳು ಚೌಕದ ಗೆರೆಯ ತುಳಿಯದಂತೆ ಬಿಲ್ಲೆಯನ್ನು ಕಾಲಿನಿಂದ ಚೌಕದಿಂದ ಚೌಕಕ್ಕೆ ದೂಡುತ್ತಾ ಆಟ ಆಡಲು ಸೂಚಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ ಸಮಯ* ಶೀರ್ಷಿಕೆ : ಸೋನಿ & ಟೊಮೆಟೋಸ್ ಸಾಮಗ್ರಿಗಳು : ಸಾಹಿತ್ಯ, ಚಿತ್ರಗಳು ಉದ್ದೇಶಗಳು : * ಆಲಿಸುವ ಸಾಮರ್ಥ್ಯ ಬೆಳೆಸುವುದು. * ಪದಸಂಪತ್ತನ್ನು ಹೆಚ್ಚಿಸುವುದು. ವಿಧಾನ : 🌝ಸಾಹಿತ್ಯದಲ್ಲಿನ ಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಿ ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಹೆಸರಿಸಲು ಸರಳ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ಪುನಃ ಹೇಳುವುದು. 🌝 ಕಥೆಯ ವಾಕ್ಯಗಳನ್ನು ಓದುವಾಗ
ಕಥೆಯ ನಡುವೆ ಬರುವ ಸೋನಿ, ಟೊಮೆಟೋ ಇತ್ಯಾದಿ ಚಿತ್ರಗಳನ್ನುಮಕ್ಕಳು ಹೆಸರಿಸುವಂತೆ ಪ್ರಶ್ನೆಗಳನ್ನು
ಕೇಳುತ್ತ ಕಥೆಯನ್ನು ನಿರೂಪಿಸುವುದು. (ಕಥೆಯನ್ನು ಆನಂದಿಸುವುದರ ಜೊತೆಗೆ
ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ *ಮತ್ತೆ
ಸಿಗೋಣ* 🔚 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು
ಪುನರಾವರ್ತಿಸಿ/ನೆನಪಿಸಿ 🔚 ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. 🔚 ಮರುದಿನ ಮಕ್ಕಳು ಸಂತೋಷದಿಂದ
ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. 🔚"ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ. [ಸಾಹಿತ್ಯ ಕೃಪೆ :
ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]
🙏🙏🙏🙏🙏🙏
ಮಲ್ಲಿಕಾರ್ಜುನ್ ಬಡಿಗೇರ್
ನಲಿಕಲಿ
ಶಿಕ್ಷಕರು ಸರ್ಕಾರಿ
ಪ್ರಾಥಮಿಕ ಶಾಲೆ ಸದಾಶಿವಪುರ
ಹೊನ್ನಾಳಿ(ತಾ) ದಾವಣಗೆರೆ (ಜಿ).
9535633529 |