|
👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇 👉👉👉 ಕ್ಲಿಕ್ ಮಾಡಿ 👈 👈 👈 **********************************************************************ವಿದ್ಯಾ ಪ್ರವೇಶ 38ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 67ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ 1 :- ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು ಮಕ್ಕಳಿಂದ ಕೇಳಿ ತಿಳಿದು ಆ ಚಟುವಟಿಕೆಯ ಮೂಲಕ ಮಕ್ಕಳನ್ನು ತರಗತಿಗೆ ಸ್ವಾಗತಿಸುವುದು. ಮಾತುಕತೆ: ಚಟುವಟಿಕೆ: ಸಂಕೇತಗಳನ್ನು
ತಿಳಿಯೋಣಸಾಮಗ್ರಿಗಳು: ಟ್ರಾಫಿಕ್ ಸಿಗ್ನಲ್ ಚಿತ್ರಗಳು Red says stop Green says go Yellow says wait Even if your are late ವಿಧಾನ :- ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.ಈ ಮೇಲಿನ ಪ್ರಾಸವನ್ನು ಹಾಡಿಸಿ. ನಂತರ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಮತ್ತು ಅವರನ್ನು ಚರ್ಚೆಯಲ್ಲಿ ತೊಡಗಿಸಿ. ಟ್ರಾಫಿಕ್ ಸಿಗ್ನಲ್ ಗ ಳ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರಿಸಲು ಅವರನ್ನು ಪ್ರೋತ್ಸಾಹಿಸಿ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ
ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ
ಸೂಚಿಯಂತೆ ಕಾರ್ಯ ನಿರ್ವಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ* ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* ಸಾಮರ್ಥ್ಯ: ಪರಿಸರದ ಅರಿವು-ಪ್ರಕೃತಿಚಟುವಟಿಕೆ : ಪ್ರಾಣಿಗಳ ಬಗ್ಗೆ ಮಾತಾಡೋಣ (ಗುರಿ 3) ಉದ್ದೇಶ:- ಪ್ರಾಣಿಗಳ ಮಹತ್ವ ತಿಳಿಯುವುದು. ಅಗತ್ಯ ಸಾಮಗ್ರಿಗಳು : ವಿವಿಧ ಪ್ರಾಣಿಗಳ ಪೇಪರ್ ಮುಖವಾಡಗಳು ವಿಧಾನ : 💎ಮಕ್ಕಳು ತಮ್ಮ ಸುತ್ತಮುತ್ತ ಕಾಣುವ ಪ್ರಾಣಿಗಳ ಬಗ್ಗೆ ಮಾತಾಡಲು ಹೇಳುವುದು. 💎ಹಾಲನ್ನು ಎಲ್ಲಿಂದ ಪಡೆಯುತ್ತೇವೆ' ಎಂಬ ಪ್ರಶ್ನೆ ಕೇಳುವುದು. 💎ಬೆಚ್ಚಗಿನ ಬಟ್ಟೆಗಳನ್ನು ತಯಾರಿಸಲು ನಾವು ಉಣ್ಣೆಯನ್ನು ಎಲ್ಲಿಂದ ಪಡೆಯುತ್ತೇವೆ? 💎 ಉಳುಮೆಗೆ ಬಳಸುವ ಪ್ರಾಣಿಗಳಾವುವು? ಈ ರೀತಿ ಪ್ರಶ್ನೆ ಕೇಳುವುದರ ಮೂಲಕ ನಮಗೆ ಉಪಯುಕ್ತ ಸಾಕುಪ್ರಾಣಿಗಳ ಬಗ್ಗೆ ಮಾತಾಡಲು ಪ್ರೋತ್ಸಾಹಿಸುವುದು. ಪ್ರಾಣಿಗಳು ನಮ್ಮೊಂದಿಗೆ ಪರಿಸರವನ್ನು ಹಂಚಿಕೊಂಡಿವೆ ಮತ್ತು ಅವುಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಚರ್ಚಿಸುವುದು. ನಾವು ಪ್ರಾಣಿಗಳಿಗೆ ದಯೆ ತೋರಬೇಕು ಮತ್ತು ಸಾಧ್ಯವಾದಾಗಲೆಲ್ಲ ಅವುಗಳಿಗೆ ಆಹಾರ ನೀಡಲು ಸೂಚಿಸುವುದು. ಅ.ಹಾ: IL-20 ಸರಿಯಾದ ದಾರಿ ತೋರಿಸು ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ
ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.ವಿನ್ಯಾಸಗಳ ರಚನೆ. ಚಟುವಟಿಕೆ : ಬಟ್ಟಲು ಮತ್ತು ಕಾಗದದ ಲೋಟಗಳಿಂದ ಕಟ್ಟಡ. (ಗುರಿ - 1) ಉದ್ದೇಶಗಳು: *ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು. *ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು. *ಆಕಾರ ಮತ್ತು ಗಾತ್ರವನ್ನು ಗುರುತಿಸುವುದರ ಜೊತೆಗೆ ವಿವಿಧ ವಿನ್ಯಾಸಗಳನ್ನು ರಚಿಸುವುದು. *ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುವುದು. ಸಾಮಗ್ರಿಗಳು : ಬಟ್ಟಲುಗಳು, ಕಟ್ಟಿಗೆಯ ಬ್ಲಾಕ್ಸಗಳು ಅಥವಾ ಪೇಪರ್ ಕಪ್‌ಗಳು. ವಿಧಾನ : 3-4 ಮಕ್ಕಳನ್ನು ಒಂದು ಗುಂಪಿನಲ್ಲಿ ಕೂರಿಸುವುದು. ಅವರಿಗೆ ಬಟ್ಟಲುಗಳು ಅಥವಾ ಪೇಪರ್ ಕಪ್‌ಗಳನ್ನು ನೀಡುವುದು. ಸುಗಮಕಾರರು ಮಾದರಿಯಾಗಿ ಸೇತುವೆ, ಕಟ್ಟಡವನ್ನು ಮಾಡಿ ತೋರಿಸುವುದು, ಅದರಂತೆ ಮಕ್ಕಳಿಗೆ ಮಾಡಲು ಹೇಳುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು
ಮಾತನಾಡುವುದು* ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅವಧಾನ ಮತ್ತು ಆಲಿಸುವುದು. ಚಟುವಟಿಕೆ : ಮಧ್ಯದ ಅಕ್ಷರ ಗುರ್ತಿಸು (ಆ ರ ಸ) (ಗುರಿ-2) ಉದ್ದೇಶಗಳು : 👉ಪದಗಳಲ್ಲಿಯ ಅಕ್ಷರಗಳ ಅಕ್ಷರ-ಧ್ವನಿ ಸಹಸಂಬಂಧ ಗುರುತಿಸುವುದು. 👉ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬಂಧ ಅರ್ಥೈಸಿಕೊಳ್ಳುವುದು. ಅಗತ್ಯ ಸಾಮಗ್ರಿಗಳು : ಕಪ್ಪು ಹಲಗೆ, ಮಿಂಚುಪಟ್ಟಿ ವಿಧಾನ: 🎯ಮಿಂಚುಪಟ್ಟಿಯಲ್ಲಿ ಬರೆದ ಪದಗಳನ್ನು ಪ್ರದರ್ಶಿಸುವುದು. 🎯 ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಸ್ವರಾಕ್ಷರಗಳನ್ನು ಪರಿಚಯಿಸುವುದು. 🎯ಪದದ ಮಧ್ಯದಲ್ಲಿರುವ ಅಕ್ಷರವನ್ನು ಗುರುತಿಸಲು ತಿಳಿಸುವುದು. ಕಪ್ಪುಹಲಗೆ ಯಲ್ಲಿ ಬರೆಯುವುದು. 🎯 ಮಕ್ಕಳಿಂದ ಹೇಳಿಸುವುದು. ಅಕ್ಷರ ಮತ್ತು ಶಬ್ದಗಳನ್ನು ಸಂಯೋಜಿಸುವುದು ಮತ್ತು ಗುರ್ತಿಸುವುದು. *ಅರ್ಥ ಗ್ರಹಿಕೆಯೊಂದಿಗೆ ಓದು* ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು. ಚಟುವಟಿಕೆ : • ಚಿತ್ರ ಸಂಪುಟ (ಗುರಿ-2) ವಿಷಯ: 'ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/ವಸ್ತುಗಳು” ಉದ್ದೇಶಗಳು: ☢️ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ ಸಂಪುಟಗಳನ್ನು ರಚಿಸುವರು. ☢️ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು. ಅಗತ್ಯ ಸಾಮಗ್ರಿಗಳು : ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/ ವಸ್ತುಗಳಿಗೆ ಸಂಬಂಧಿಸಿದ ರಚಿಸಿದಚಿತ್ರಗಳು ವಿಧಾನ : ಹಿಂದೆ ರಚಿಸಿದ ಚಿತ್ರಗಳನ್ನು ಬಳಸಿ ಮಾತನಾಡಲು ಅವಕಾಶ ಕಲ್ಪಿಸುವುದು. ವೈಯಕ್ತಿಕ ಚಿತ್ರ ಸಂಪುಟ: ಮಕ್ಕಳು ರಚಿಸಿದ ಚಿತ್ರಗಳನ್ನು ತಮ್ಮ ಕೃತಿ ಸಂಪುಟದಲ್ಲಿ ಸಂಗ್ರಹಿಸಲು ತಿಳಿಸುವುದು ಮತ್ತು ಅವುಗಳನ್ನು ಚರ್ಚಿಸುವುದು. *ಉದ್ದೇಶಿತ ಬರೆಹ * ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿ ಕೊಳ್ಳುವುದು, ಪರಿಸರದ ಅರಿವು. ಚಟುವಟಿಕೆ: ಪಟ್ಟಿ ಮಾಡೋಣ (ಗುರಿ-2) ಉದ್ದೇಶಗಳು: 🔆ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು. 🔆ಸೃಜನಶೀಲ ಚಿಂತನೆಯನ್ನು ಬೆಳೆಸುವುದು. 🔆ಪರಿಸರದ ಅರಿವು ಮೂಡಿಸುವುದು. 🔆ಪದಸಂಪತ್ತನ್ನು ಹೆಚ್ಚಿಸುವುದು, 🔆ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು. ಅಗತ್ಯ ಸಾಮಗ್ರಿಗಳು: ನೋಟ್ ಪುಸ್ತಕ, ಕಾಗದ, ಕ್ರೇಯಾನ್ಸ್ ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ. 📖 ಸೂಚಿತ ವಿಷಯಗಳು: 📖 ನಾವು ನೋಡಿದ ವಸ್ತುಗಳು 📖 ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳು 📖 ಬಣ್ಣಗಳ ಹೆಸರುಗಳು 📖 ನಗರ/ ಹಳ್ಳಿಯಲ್ಲಿ ಕಂಡುಬರುವ ಪ್ರಾಣಿಗಳು, ಪಕ್ಷಿಗಳು ಇತ್ಯಾದಿ ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್/ ಪೇಪರ್‌ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. ಈ ಚಾರ್ಟ್ ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸಿ, ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು. ಹೆಚ್ಚುವರಿಯಾಗಿ ಬಣ್ಣಗಳ ಪಟ್ಟಿ, ಮಕ್ಕಳ ಹೆಸರುಗಳ ಪಟ್ಟಿ, ಪಕ್ಷಿಗಳ ಪಟ್ಟಿ ಇತ್ಯಾದಿ ಪಟ್ಟಿಗಳನ್ನು ತಯಾರಿಸಬಹುದು. ಅ.ಹಾ: E.C-18 ಧ್ವನಿ ಗ್ರಹಿಸು– ಬಣ್ಣ ತುಂಬು. *ಬರವಣಿಗೆಯ ಮಾದರಿ* ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* 🐄🐅ಚಟುವಟಿಕೆ : ಹುಲಿ ಮತ್ತು
ಹಸು 🐄🐅ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ಬೇಕಾಗುವ ಸಾಮಗ್ರಿ: ಹಸು ಹುಲಿ ಮುಖವಾಡ ವಿಧಾನ: ⚾️ಮಕ್ಕಳನ್ನು ಆಟದ ಮೈದಾನಕ್ಕೆ ಕರೆದುಕೊಂಡು ಹೋಗುವುದು. 🥎ಒಂದು ವೃತ್ತದಲ್ಲಿ ಮಕ್ಕಳನ್ನು ನಿಲ್ಲಲು ಸೂಚಿಸುವುದು. ಬರೆಯುವುದು. 🏀ಒಂದು ಮಗುವಿಗೆ ಹಸುವಿನ ಮುಖವಾಡ ಹಾಗು ಮತ್ತೊಂದು ಮಗುವಿಗೆ ಹುಲಿಯ ಮುಖವಾಡ ವನ್ನು ನೀಡುವುದು. 🏐ಉಳಿದ ಮಕ್ಕಳು ವೃತಾಕಾರದಲ್ಲಿ ಕೈ ಕೈ ಜೋಡಿಸಿ ನಿಲ್ಲಲು ಸೂಚಿಸುವುದು . 🥎ಹಸುವಿನ ಮುಖವಾಡ ಧರಿಸಿದ ಮಗು ವೃತ್ತದಲ್ಲಿ ನಿಲ್ಲುತ್ತದೆ ಮತ್ತು ಹುಲಿ ಮುಖವಾಡ ಧರಿಸಿದ ಮಗು ವೃತ್ತದ ಹೊರಗೆ ಇರಬೇಕು ಎಂದು ಸೂಚಿಸುವುದು. ⚽️ಹುಲಿ ಮುಖವಾಡವನ್ನು ಧರಿಸಿರುವ ಮಗು ಹಸುವಿನ ಮುಖವಾಡವನ್ನು ಧರಿಸಿರುವ ಮಗುವನ್ನು ಹಿಡಿಯಲು ಪ್ರಯತ್ನಿಸುತ್ತದೆ. 🏀ವೃತ್ತದಲ್ಲಿ ನಿಂತಿರುವ ಮಕ್ಕಳು ಹಸುವನ್ನು ರಕ್ಷಿಸಲು ಸೂಚಿಸುವುದು.. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ ಸಮಯ*
ಶೀರ್ಷಿಕೆ : ಟೋ ಟೋ &
ದ ಕ್ಯಾಪ್ಸಾಮಗ್ರಿಗಳು : ಚಿತ್ರಗಳು, ಆಟಿಕೆಗಳು ಉದ್ದೇಶಗಳು : »» ಆಸಕ್ತಿಯನ್ನು ಮೂಡಿಸುವುದು. »» ಸೃಜನಶೀಲತೆಯನ್ನು ಹೆಚ್ಚಿಸುವುದು. ವಿಧಾನ :- 👉ಶಿಕ್ಷಕರು ಸಾಹಿತ್ಯವನ್ನು ಆಧರಿಸಿ, ಆಟಿಕೆಗಳನ್ನು ಪ್ರದರ್ಶಿಸಿ, ಮಾತೃಭಾಷೆಯಲ್ಲಿ ಕಥೆಯನ್ನು ಹೇಳುವುದು. 👉ಚಿತ್ರಗಳು/ಆಟಿಕೆಗಳನ್ನು ಪ್ರದರ್ಶಿಸಿ ಕಥೆಯಲ್ಲಿನ ಮಾತೃಭಾಷೆಯಲ್ಲಿ ಸಂಭಾಷಣೆಯನ್ನು ಹೇಳುವುದು. 👉ಕಥೆಯ ನಡುವೆ ಮುಖ್ಯ ಪದಗಳನ್ನು ಇಂಗ್ಲೀಷಿನಲ್ಲಿ ಹೇಳುವುದು. ಕಥೆ : TOTO AND THE CAP This is Toto, the baby cat. He lives with Papa cat and Mama Cat. Papa cat has a cap. Mama cathas a cap. Toto also wanted a cap. Papa cat said "baby cats do not wear caps". One day, Papacat was going out. He hid the cap in a pot. He put the pot on the cot and went out. Toto cat got on to the cot, put his hand in the pot and pulled out the cap. Toto cat put the cap on his head. He was very happy. (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ
*ಮತ್ತೆ ಸಿಗೋಣ* »» ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು
ಪುನರಾವರ್ತಿಸಿ/ನೆನಪಿಸಿ.»» ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. ಗಮನಿಸಿ * ಕಲಿಕಾ ಫಲಗಳನ್ನು ಪರಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ. * ನಿಮ್ಮ ಮಕ್ಕಳು ಒಂದನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು ಮನದಟ್ಟುಮಾಡಿ. * ಒಂದನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು ಸಿದ್ಧರಾಗಿ ಮತ್ತು ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವಸಿದ್ಧತೆ ಮಾಡಿಕೊಳ್ಳಿ. [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25] 🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ) ದಾವಣಗೆರೆ (ಜಿ) 9535633529 🔻🔺🔻🔺🔻🔺🔻🔺🔻🔺🔻🔺🔻🔺 |