|
👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇 👉👉👉 ಕ್ಲಿಕ್ ಮಾಡಿ 👈 👈 👈 **********************************************************************ವಿದ್ಯಾ ಪ್ರವೇಶ 37ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 64ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ 1 :- 1.ಶಾಲೆಗೆ ಮೊದಲು ಆಗಮಿಸಿದ 3 ಮಕ್ಕಳಿಗೆ ಪೇಪರಿನಿಂದ
ಮಾಡಿದ ಹೂವುಗಳನ್ನು ನೀಡುವ ಮೂಲಕ ಸ್ವಾಗತಿಸುವುದು. 2.ಹೀಗೆ ಮಗುವಿಗೆ ಸರಿಯಯಾದ ಸಮಯಕ್ಕೆ ಶಾಲೆಗೆ ಬರಲು
ಪ್ರೇರೆಪಿಸುವುದು ಚಟುವಟಿಕೆ :- ಹಿಂದಿನ ದಿನಗಳಲ್ಲಿ ಮಾಡಿದ TPR ಚಟುವಟಿಕೆಗಳನ್ನು
ಮಾಡಿಸುವುದು.
ಮಾತುಕತೆ: ಚಟುವಟಿಕೆ : ದಿನ 64 ರ
ಚಟುವಟಿಕೆಯನ್ನು ಮುಂದುವರೆಸಿ. ಚಟುವಟಿಕೆ 2: ನಮ್ಮ ಹಬ್ಬಗಳ ಸುತ್ತಲೂ ಅಗತ್ಯವಿರುವ ಸಾಮಗ್ರಿಗಳು: ತಮ್ಮ
ಪ್ರದೇಶದಲ್ಲಿ ಆಚರಿಸುತ್ತಿರುವ ವಿವಿಧ ರೀತಿಯ ಹಬ್ಬಗಳ ಚಿತ್ರ ಕಾರ್ಡ್‌ಗಳು ವಿಧಾನ: 1. ಮಕ್ಕಳನ್ನು ಅರೆ-ವೃತ್ತದಲ್ಲಿ
ಕುಳಿತುಕೊಳ್ಳುವಂತೆ ಮಾಡಿ. 2. ಚಿತ್ರ ಕಾರ್ಡ್ ಗಳನ್ನು ಚೀಲದಲ್ಲಿ ಇರಿಸಿ. 3. ಚೀಲವನ್ನು ಪಾಸ್ ಮಾಡಿ ಮತ್ತು ಸಂಗೀತವನ್ನು
ನುಡಿಸಿ. 4. ನಡುವೆ ಸಂಗೀತವನ್ನು ನಿಲ್ಲಿಸಿ. 5. ಮ್ಯೂಸಿಕ್ ನಿಂತಾಗ, ಚೀಲವನ್ನು ಹೊಂದಿರುವ ಮಗುವು
ತನ್ನ ಕೈಯನ್ನು ಚೀಲದೊಳಗೆ ಹಾಕಿ ಚೀಲದಿಂದ ಕಾರ್ಡ್ ಅನ್ನು ಹೊರ ತೆಗೆಯಬೇಕಾಗುತ್ತದೆ. 6. ಕಾರ್ಡ್ ನಲ್ಲಿ ಹಬ್ಬದ ಚಿತ್ರವನ್ನು ನೋಡಿದ
ನಂತರ, ಮಗುವು ತನ್ನ ಮನೆಯಲ್ಲಿ ಆಚರಿಸುತ್ತಿರುವ ಹಬ್ಬಗಳ ಬಗ್ಗೆ ತನ್ನ ಅಭಿಪ್ರಾಯವನ್ನು
ಹಂಚಿಕೊಳ್ಳಬೇಕು. 7. ಹಬ್ಬಗಳಂದು ಅವರ ಆಲೋಚನೆಗಳನ್ನು /
ಆಲೋಚನೆಗಳನ್ನು ಹೊರತರಲು ಅವರಿಗೆ ಕೆಲವು ಪ್ರಶ್ನೆಗಳನ್ನು ಹಾಕಿ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ
ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ
ಸೂಚಿಯಂತೆ ಕಾರ್ಯ ನಿರ್ವಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️
3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ* ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* ಸಾಮರ್ಥ್ಯ: ಪರಿಸರದ ಅರಿವು, ಹೆಚ್ಚು ಕಡಿಮೆ
ಪರಿಕಲ್ಪನೆ, ವೈಯಕ್ತಿಕ ಅಭಿವೃದ್ಧಿ ಚಟುವಟಿಕೆ : ಹಣ್ಣುಗಳ ವಿಂಗಡಣೆ (ಗುರಿ-3) ಉದ್ದೇಶ:- ವಿವಿಧ ತರಹದ ಹಣ್ಣುಗಳನ್ನು ತಿಳಿಯುವುದು. ಅಗತ್ಯ ಸಾಮಗ್ರಿಗಳು : ವಿವಿಧ ರೀತಿಯ
ಹಣ್ಣುಗಳು/ಮಾದರಿ ವಿಧಾನ : ವಿವಿಧ ಹಣ್ಣುಗಳ ಮಾದರಿಗಳನ್ನು ಮಕ್ಕಳಿಗೆ
ನೀಡಿ ಅವುಗಳಲ್ಲಿರುವ ಬೀಜಗಳ ಆಧಾರದ ಮೇಲೆ ವಿಂಗಡಿಸಲು ತಿಳಿಸುವುದು. ಉದಾ: ಮಾವಿನ ಹಣ್ಣು (ಒಂದು ಬೀಜ ಹೊಂದಿರುವ), ಸೇಬು
ಹಣ್ಣು (ಕೆಲವು ಬೀಜ ಹೊಂದಿರುವ), ಕಿತ್ತಳೆ/ಪಪ್ಪಾಯಿ ಹಣ್ಣು(ಹಲವು ಬೀಜ ಹೊಂದಿರುವ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ
ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಆಕಾರಗಳ ಪರಿಕಲ್ಪನೆ. ಚಟುವಟಿಕೆ: ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು
(ಗುರಿ-I) ಉದ್ದೇಶಗಳು: 👉ಸೂಕ್ಷ್ಮ ಸ್ನಾಯುಗಳ
ಅಭಿವೃದ್ಧಿಯಾಗುತ್ತದೆ. 👉ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು
ಸಾಧ್ಯವಾಗುತ್ತದೆ. 👉ಸ್ಥಳದ ಪರಿಕಲ್ಪನೆಯನ್ನು ತಿಳಿಯುತ್ತಾರೆ. ಸಾಮಗ್ರಿಗಳು : ಮರಳು ಮತ್ತು ಕಡ್ಡಿ. ವಿಧಾನ :- *ಮಕ್ಕಳಿಗೆ ಅಂಕಿಗಳ ಆಕಾರದ ರೇಖಾ ಚಿತ್ರಗಳನ್ನು
ಕೊಟ್ಟು ಬಣ್ಣ ತುಂಬಲು ಹೇಳುವುದು. *ಮಗು ತನಗೆ ಬರುವ ಅಂಕಿಗಳ ರೇಖಾ ಚಿತ್ರಗಳನ್ನು
ಬರೆದು ಬಣ್ಣ ತುಂಬಿಸಲು ಹೇಳುವುದು. ಅ.ಹಾ: HW 14 ದಾರಿ ತೋರಿಸು ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು
ಮಾತನಾಡುವುದು* ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ
ಸಹ ಸಂಬಂಧ. ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ
ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) (52 ನೇ ದಿನದಿಂದ ಮುಂದುವರೆದಿದೆ.) ಉದ್ದೇಶಗಳು:- ☀️ ಧ್ವನಿ ಸಂಕೇತಗಳ ಅರಿವು ಮೂಡಿಸುವುದು. ☀️ಅಕ್ಷರಗಳು ಮತ್ತು ಪದಗಳ ನಡುವಿನ
ಸಹ ಸಂಬಂಧವನ್ನು ಗ್ರಹಿಸುವುದು. ☀️ಪದಗಳನ್ನು ಗ್ರಹಿಸಿ ಗುರುತಿಸುವುದು. ☀️ಅಂತ್ಯಾಕ್ಷರಿ ಪದಗಳನ್ನು ಬರೆಯುವುದು. ಅಗತ್ಯ ಸಾಮಗ್ರಿಗಳು- ಇಲ್ಲ ಸಲಹಾತ್ಮಕ ವಿಷಯ : ಆಹಾರ ಪದಾರ್ಥಗಳು ವಿಧಾನ:- ಸುಳಿವುಗಳ ಮೂಲಕ ಆಹಾರ ಪದಾರ್ಥಗಳ
ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ. ಉದಾಹರಣೆಗಾಗಿ 🎯 ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ
ಆಹಾರ ಪದಾರ್ಥವನ್ನು ನಾವು ಚಪಾತಿಯನ್ನು ಮಾಡಲು ಬಳಸುತ್ತೇವೆ. 🎯 ಅದರ ಹೆಸರು ಗೋ ಅಕ್ಷರದಿಂದ
ಪ್ರಾರಂಭವಾಗುತ್ತದೆ. ಎಂದು ಹೇಳಿದಾಗ ಮಕ್ಕಳು ಗೋಧಿ ಎಂದು ಗುರುತಿಸುವುದು.
ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು, ಅಹಾ: EC-17 ಊಹಿಸು –
ಹೊಂದಿಸು
*ಅರ್ಥ ಗ್ರಹಿಕೆಯೊಂದಿಗೆ ಓದು* ಸಾಮರ್ಥ್ಯ: ಪದಗಳನ್ನು ಗುರುತಿಸುವುದು, ಮುದ್ರಿತ
ಪಠ್ಯದ ಅರಿವು, ಅರ್ಥಗ್ರಹಿಕೆ ಚಟುವಟಿಕೆ : ವಾಕ್ಯ ವಿಭಜನೆ. (ಗುರಿ-2) ಉದ್ದೇಶ : ಕಥೆ / ಪ್ರಾಸಗೀತೆಗಳಲ್ಲಿಯ ಪದಗಳನ್ನು
ಗುರುತಿಸುವರು ರಚಿಸುವರು ಮತ್ತು ವಿಭಜಿಸುವರು. ಅಗತ್ಯ ಸಾಮಗ್ರಿಗಳು : ಪ್ರಾಸಗೀತೆ, ಹಾಡು, ಕಥೆ,
ನೆಚ್ಚಿನ ಪುಸ್ತಕ, ಖಾಲಿ ಕಾರ್ಡ್‌ಗಳು, ಚಾರ್ಟ ಪೇಪರ್. ವಿಧಾನ : 🔆ಸರಳ ಪರಿಚಿತ ಪ್ರಾಸ, ಹಾಡು, ಕಥೆಗಳ
ಚಾರ್ಟ್ ತಯಾರಿಸಿ ಅದರಲ್ಲಿಯ ಪ್ರಮುಖ ಪದ/ ವಾಕ್ಯಗಳನ್ನು ದಪ್ಪ ಅಕ್ಷರಗಳಲ್ಲಿ ತೋರಿಸುವಂತೆ
ಬರೆದು ಕಪ್ಪುಹಲಗೆ ಮೇಲೆ ಚಾರ್ಟನ್ನು ಪ್ರದರ್ಶಿಸುವುದು. 🔆ಮಕ್ಕಳಿಗೆ ಕಥೆ/ ಪ್ರಾಸಗೀತೆಯಲ್ಲಿಯ
ವಾಕ್ಯಗಳನ್ನು ಪುನರಾವರ್ತಿಸಿ ಓದುವುದು ಮತ್ತು ಹೇಳಿಕೊಡುವುದು. 🔆 ಶಿಕ್ಷಕರು ವಾಕ್ಯದಲ್ಲಿನ ಪದವನ್ನು
ಗಟ್ಟಿಯಾಗಿ ಓದಬೇಕು ನಂತರ ಮಕ್ಕಳನ್ನು ಕಪ್ಪುಹಲಗೆ ಬಳಿ ಕರೆದು ತಾವು ಹೇಳಿದ ಪದವನ್ನು
ಚಾರ್ಟ್‌ನಲ್ಲಿ ಮುಟ್ಟುವ ಮೂಲಕ ಆ ಪದವನ್ನು ತೋರಿಸಲು ಹೇಳಬೇಕು. 🔆ಶಿಕ್ಷಕರು ಒಂದು ವಾಕ್ಯವನ್ನು ಓದಬೇಕು
ಅದೇ ವಾಕ್ಯದಲ್ಲಿ ಒಂದು ಪದವನ್ನು ಬದಲಾಯಿಸಿ ಓದಬೇಕು. 🔆ಬದಲಾಯಿಸಿದ ಪದ ಯಾವುದು ಎಂದು ಮಕ್ಕಳು
ಬೋರ್ಡ್‌ನಲ್ಲಿ ಮುಟ್ಟುವ ಮೂಲಕ ತೋರಿಸಬೇಕು. ಉದಾ:-ರವಿಯ ಬಳಿ ಒಂದು ಕುರಿ ಇತ್ತು, ರವಿಯ ಬಳಿ
ಒಂದು ಬೆಕ್ಕು ಇತ್ತು ಶಿಕ್ಷಕರು ಯಾವ ಪದ ಬದಲಾಯಿಸಿದ್ದಾರೆ ಎಂಬುದನ್ನು ಮಕ್ಕಳು
ತೋರಿಸಬೇಕು.
*ಉದ್ದೇಶಿತ ಬರೆಹ * ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ,
ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ, ಚಟುವಟಿಕೆ: ಹವಾಮಾನ ನಕ್ಷೆ (ಗುರಿ-2) (58ನೇ
ದಿನದಿಂದ ಮುಂದುವರೆದಿದೆ) ಉದ್ದೇಶಗಳು: 🌀ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು. 🌀ವೀಕ್ಷಣಾ ಕೌಶಲವನ್ನು ಬೆಳೆಸುವುದು. 🌀 ಸೃಜನಶೀಲ ಚಿಂತನೆಯನ್ನು
ಉತ್ತೇಜಿಸುವುದು. 🌀ಪರಿಸರ ಪ್ರಜ್ಞೆ ಮೂಡಿಸುವುದು. ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್ ವಿಧಾನ : 📑 ವಾರದ ದಿನಗಳ ಬಗ್ಗೆ
ಮಕ್ಕಳೊಂದಿಗೆ ಚರ್ಚಿಸುವುದು. 📑ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ
ಪ್ರದರ್ಶಿಸುವುದು, 📑ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ
ಹವಾಮಾನವನ್ನು ಗಮನಿಸಲು ತಿಳಿಸುವುದು. 📑 ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ
ಖಾಲಿ ಹಾಳೆಗಳನ್ನ ನೀಡಿ ನಿನ್ನೆ-ಇಂದಿನ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು. 📑ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು. *ಬರವಣಿಗೆಯ ಮಾದರಿ* ಶಿಕ್ಷಕರು ಮಕ್ಕಳೆದುರು
ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ
ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ
ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* 💎ದಿನ 62ರ ಚಟುವಟಿಕೆಗಳನ್ನು
ಪುನರಾವರ್ತಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ
ಸಮಯ* ಶೀರ್ಷಿಕೆ : ಒಂಟೆ ಮತ್ತು ನರಿ ಸಾಮಗ್ರಿಗಳು
: ಸಾಹಿತ್ಯ ಉದ್ದೇಶಗಳು
: 1-ಆಲೋಚನಾ
ಶಕ್ತಿಯನ್ನು ಹೆಚ್ಚಿಸುವುದು. 2-ಪ್ರಶ್ನಿಸುವ
ಮನೋಭಾವ ಉಂಟುಮಾಡುವುದು. 3-ಓದುವ
ಹವ್ಯಾಸವನ್ನು ಬೆಳೆಸುವುದು. ವಿಧಾನ :
ಕಥೆಯ ಸಾಹಿತ್ಯ ಓದು
ಕಥೆಯ ಸಾರಾಂಶವನ್ನು ಹೇಳಿದ ನಂತರ ಸಾಹಿತ್ಯವನ್ನು ಯಥಾವತ್ತಾಗಿ ಗಟ್ಟಿಯಾಗಿ
ಓದಿ, ಕಥೆಯ ಸಂಭಾಷಣೆಯಲ್ಲಿನ ಸಾಲುಗಳನ್ನು ಪುನರುಚ್ಚರಿಸುವುದು
ಮತ್ತು ಬರೆಯುವುದು.
ಕಥಾ ಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ. 👍ಕಾವಲುಗಾರರಿಂದ
ಒಂಟೆಗೆ ತಪ್ಪಿಸಿಕೊಳ್ಳಲು ಆಗಲಿಲ್ಲ ಏಕೆ? (ಕಥೆಯನ್ನು
ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ
*ಮತ್ತೆ ಸಿಗೋಣ* »» ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು
ಪುನರಾವರ್ತಿಸಿ/ನೆನಪಿಸಿ. »» ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ
ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು
ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26] 🙏🙏🙏🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ). ದಾವಣಗೆರೆ(ಜಿ) 9535633529. ********************************************
👉👉👉 ಕ್ಲಿಕ್ ಮಾಡಿ 👈 👈👈
|