|
ವಿದ್ಯಾ ಪ್ರವೇಶ 19ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 32ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ
1 Sun
Moon Stars (ಮುಂದುವರಿದ ಚಟುವಟಿಕೆ) ಸಾಮಗ್ರಿಗಳು:
ನಕ್ಷತ್ರಗಳು, ಚಂದ್ರ ಮತ್ತು ಸೂರ್ಯನ ಚಿತ್ರಗಳು
ವಿಧಾನ:
ದಿನ-32ರ ಸೂಚನೆಗಳನ್ನು ಅನುಸರಿಸಿ. ಚಟುವಟಿಕೆ
2 ಹವಾಮಾನ ನಕ್ಷೆ ಮಾಡಿಸಿ ಮಾತುಕತೆ ಚಟುವಟಿಕೆ : ನನ್ನ ಜವಾಬ್ದಾರಿಗಳು (ಶಾಲಾ ಸಂಸತ್ತು)
ಗುರಿ
ಸಾಮರ್ಥ್ಯ: ಸ್ಮರಣೆ, ಚಿಂತನೆ, ಸ್ವಯಂ ಶಿಸ್ತು,
ಸಮಾಜ ಪರ ವರ್ತನೆ. ಸಾಮಗ್ರಿ: ವಿದ್ಯಾರ್ಥಿಗಳ ಹೆಸರು ಮತ್ತು ಅವರ
ಜವಾಬ್ದಾರಿಗಳ ಬರೆಯಲು ಚಾರ್ಟ್, ಸ್ಕೆಚ್ ಪೆನ್. ವಿಧಾನ: 🌀ವಿದ್ಯಾರ್ಥಿಗಳು ಪ್ರತಿದಿನ ಮಾಡುವಂತಹ ಸರಳ
ಕಾರ್ಯ ಹಾಗು ಜವಾಬ್ದಾರಿಗಳ ಕುರಿತಾಗಿ ಒಂದು ಪಟ್ಟಿ ಮಾಡುವುದು. ಉದಾ: ಗ್ರಂಥಾಲಯ ಮಂತ್ರಿ, ಆಹಾರ ಮಂತ್ರಿ, ಸ್ವಚ್ಛತಾ ಮಂತ್ರಿ ಆಟಗಳ ಮಂತ್ರಿ, ಶೌಚಾಲಯ ಮಂತ್ರಿ, ಇತ್ಯಾದಿ. 🌀ಇಂತಹ ಜವಾಬ್ದಾರಿಗಳು ಹಾಗೂ ಅವುಗಳನ್ನು ನಿರ್ವಹಿಸುವ ಮಕ್ಕಳ ಹೆಸರುಗಳನ್ನು ಬರೆದ ಚಾರ್ಟ್ ಸಿದ್ಧಪಡಿಸುವುದು. ಪ್ರತಿ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಚಿತ್ರಗಳಿರುವ ಬ್ಯಾಡ್ಜ್‌ಗಳನ್ನು ತಯಾರಿಸಿ, ಅವುಗಳನ್ನು ಆಯಾ ಮಂತ್ರಿಗಳು ಧರಿಸಲು ತಿಳಿಸುವುದು. 🌀ತರಗತಿಯ ಪ್ರತಿ ಮಕ್ಕಳಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಿ. ಮಕ್ಕಳ ಸ್ವತಂತ್ರವಾಗಿ ತಮಗೆ ವಹಿಸಿದ ಕಾರ್ಯವನ್ನು ಮಾಡುತ್ತಿದ್ದಾರೆಯೇ ಎಂದು ಗಮನಿಸಿ. ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಿ. ಚಟುವಟಿಕೆ:- 2 "ನನ್ನ ಸಸ್ಯ ನನ್ನ ಮರ"ಮುಂದುವರೆದ ಚಟುವಟಿಕೆ ಸಾಮಗ್ರಿಗಳು:- ವಿವಿಧ ರೀತಿಯ ಸಸ್ಯಗಳ ಚಿತ್ರ ಕಾರ್ಡುಗಳು ವಿಧಾನ ದಿನ 31ರ ಮಾತುಕತೆ ಚಟುವಟಿಕೆಯನ್ನು ಅನುಸರಿಸಿ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ
ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) ಸಾಮರ್ಥ್ಯ:- ಹೊಂದಿಸುವುದು, ಪರಿಸರಜಾಗೃತಿ ಬಣ್ಣ,
ಆಕಾರ, ಗಾತ್ರಗಳ ಪರಿಕಲ್ಪನೆ, ಪರಿಸರದ ಅರಿವು. ಚಟುವಟಿಕೆ : ಮುಟ್ಟಿ ಎಣಿಸು (ಗುರಿ 3) ಉದ್ದೇಶ:- ಮೂರ್ತ ವಸ್ತುಗಳನ್ನು ಸ್ಪರ್ಶಿಸಿ ಎಣಿಸುವುದು ಅಗತ್ಯ ಸಾಮಗ್ರಿಗಳು : ಸುತ್ತಲಿನ ವಿವಿಧ ವಸ್ತುಗಳು ವಿಧಾನ : *ಒಂದು ಸಾಲಿನಲ್ಲಿ 10 ವಸ್ತುಗಳನ್ನು ಇಡುವುದು. *ಮಕ್ಕಳು ಪ್ರತಿ ವಸ್ತುವನ್ನು ಸ್ಪರ್ಶಿಸಿ ಎಣಿಸುವುದು. *ನಂತರ ತಮ್ಮ ತರಗತಿಯ ಮಕ್ಕಳನ್ನು ಎಣಿಸುವುದು. *ವಸ್ತು/ಮಕ್ಕಳನ್ನು ಎಣಿಸುವಾಗ ಪ್ರತಿ ಬಾರಿಯೂ ಚಪ್ಪಾಳೆತಟ್ಟಿ
ಗಟ್ಟಿಯಾಗಿ ಸಂಖ್ಯೆಯನ್ನು ಹೇಳುವುದು. 📖ಅ
ಹಾ IL I2 ಏಣಿಸಿ ಬರೆಯೋಣ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಕೌಶಲಗಳ ವಿಕಾಸ
ಮತ್ತು ಸೃಜನಶೀಲತೆಯ ಅಭಿವೃದ್ಧಿ. ಚಟುವಟಿಕೆ: ಮಾಡಿನೋಡು. ಉದ್ದೇಶಗಳು: *ಸಣ್ಣ ಸ್ನಾಯುಗಳ ಚಲನಾ ಕೌಶಲಗಳು ಅಭಿವೃದ್ಧಿಯಾಗುವುದು. *ಬೆರಳುಗಳ ಕುಶಲತೆ ಹೆಚ್ಚುವುದು ಮತ್ತು ಏಕಾಗ್ರತೆ ಬೆಳೆಯುವುದು. ಸಾಮಗ್ರಿಗಳು: ಕತ್ತರಿ, ವರ್ಣಮಯ ಚಿತ್ರಗಳು,
ಅಂಟು, ಆಕಾರದ 6-7 ತುಂಡುಗಳಾಗಿ ಚಿತ್ರ ಬರುವಂತೆ ಜೋಡಿಸಲು ವಿಧಾನ: 🔵ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು. 🔵ಹಳೆಯ ದಿನಪತ್ರಿಕೆಯಲ್ಲಿನ ಹೂ/ ಪ್ರಾಣಿ ಪಕ್ಷಿ/ಮನೆ ಇತ್ಯಾದಿಗಳ ಚಿತ್ರವನ್ನು ಕತ್ತರಿಸಿ ಅದನ್ನು ರಟ್ಟಿನ ಮೇಲೆ ಅಂಟಿಸಲು ಹೇಳುವುದು. 🔵ನಂತರ ಅದನ್ನು ಬೇರೆ ಬೇರೆ (ಟ್ಯಾನ್ ಗ್ರಾಂ ಮಾದರಿಯಲ್ಲಿ) ಕತ್ತರಿಸುವುದು. 🔵ಕತ್ತರಿಸಿದ ತುಂಡುಗಳನ್ನು ಮತ್ತೆ ಮೊದಲಿನ ಹೇಳುವುದು. 🔵ಇದರಿಂದ ಅಲ್ಪವೆಚ್ಚದ ಸಾಮಗ್ರಿಗಳನ್ನು ಬಳಸಿ ಮಗುವಿನ ಸೃಜನ ಶೀಲತೆಗೆ ಪ್ರೋತ್ಸಾಹ ನೀಡಿದಂತೆ ಆಗುವುದು. 📖ಅ.ಹಾ:-HW-5 ನನ್ನ ಕುಟುಂಬ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* *ಆಲಿಸುವುದು ಮತ್ತು ಮಾತನಾಡುವುದು* ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ:
15 ಪ್ರಾಸ ಪದಗಳನ್ನು ಆಲಿಸುವುದು (ಗುರಿ-02) (26ನೇ ದಿನದಿಂದ ಮುಂದುವರೆದಿದೆ) ಉದ್ದೇಶಗಳು: 🎯ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು. 🎯ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು. 🎯ಸ್ಕೂಲ ಹಾಗೂ ಸೂಕ್ಷ್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು. ಅಗತ್ಯ
ಸಾಮಗ್ರಿಗಳು:- ಇಲ್ಲ ವಿಧಾನ: 🎶 ಮಕ್ಕಳಿಗೆ
26ನೇ ದಿನದಲ್ಲಿ ಹೇಳಿದ ಪ್ರಾಸ ಗೀತೆಯನ್ನೇ ಹೇಳುವುದು. 🎶 ಹಾಡು
ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು. 🎶 ಪ್ರಾಸ
ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು. 🎶 ಒತ್ತಿ
ಹೇಳಿದ ಪದಗಳನ್ನು ಪ್ರತ್ಯೇಕವಾಗಿ ಹೇಳಿಸುವುದು. 🎶 ಪ್ರಾಸಗೀತೆಯಲ್ಲಿಯ
ಪ್ರಾಸ ಪದಗಳನ್ನು ಪರಿಚಯಿಸಿ ಅದಕ್ಕೆ ಮತ್ತೆ ಇನ್ನೊಂದು ಪ್ರಾಸ ಪದ ಸೇರಿಸುವುದು.
*ಅರ್ಥ ಗ್ರಹಿಕೆಯೊಂದಿಗೆ
ಓದು* ಸಾಮರ್ಥ್ಯ: ಸ್ವಯಂ ಅರಿವು, ಧನಾತ್ಮಕ ಸ್ವ-ಅರಿವಿನ
ಅಭಿವೃದ್ಧಿ, ಆಲಿಸುವುದು ಹಾಗೂ ಮಾತನಾಡುವ ಕೌಶಲಅಭಿವೃದ್ಧಿ ಚಟುವಟಿಕೆ : ನನ್ನ ವಿವರ (ಗುರಿ-I) ಉದ್ದೇಶ: ತನಗೆ ಇಷ್ಟವಾದ ಮತ್ತು ಇಷ್ಟವಲ್ಲದ
ಅಂಶಗಳನ್ನು ಅಭಿವ್ಯಕ್ತಿಗೊಳಿಸುವುದು. ಅಗತ್ಯ ಸಾಮಗ್ರಿಗಳು: ಪೆನ್, ಪೆನ್ಸಿಲ್,
ಕ್ರೇಯಾನ್ಸ್ ವಿಧಾನ: *ಶಿಕ್ಷಕರು ಮೊದಲು ತನಗೆ ಇಷ್ಟವಾದ ಅಂಶಗಳು, ಇಷ್ಟವಾಗದ ಅಂಶಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳಬೇಕು. *ನಂತರ ಪ್ರತಿ ಮಗುವಿಗೆ ತನಗೆ ಇಷ್ಟವಾದ, ಇಷ್ಟವಾಗದ ಅಂಶಗಳ ಬಗ್ಗೆ ಯೋಚಿಸಿ ಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು. *ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದರ ಜೊತೆ ಕೆಲವೊಂದು ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು. *ಬಿಳಿ ಹಾಳೆಯನ್ನು ನೀಡಿ ತನಗೆ ಇಷ್ಟವಾದ ತಿಂಡಿ, ಗೊಂಬೆ, ಪ್ರಾಣಿ, ಪಕ್ಷಿ,
ವ್ಯಕ್ತಿ, ಹೂ ಇತ್ಯಾದಿ ಚಿತ್ರಗಳನ್ನು ಬರೆದು ಬಣ್ಣ ತುಂಬಿ ಹೆಸರಿಸಲು ಹೇಳುವುದು.
*ಉದ್ದೇಶಿತ ಬರೆಹ * ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ,ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ. ಚಟುವಟಿಕೆ ಹೆಸರು : ಪುಸ್ತಕ ರಚನೆ (ಗುರಿ : 2) ಉದ್ದೇಶಗಳು: »ಮಕ್ಕಳ ಹಸ್ತಪತ್ರಿಕೆಯನ್ನು ಸಿದ್ಧಪಡಿಸುವುದು. »ಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ತಯಾರಿಸುವುದು. »ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು. ಅಗತ್ಯ ಸಾಮಗ್ರಿಗಳು: ಹಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್ ವಿಧಾನ: *ಶಿಕ್ಷಕರು ಎರಡು ಎ4 ಅಳತೆಯ ಹಾಳೆಗಳನ್ನು ಮಡಚಿ ಪಿನ್ ಮಾಡುವ ಮೂಲಕ ಪ್ರತಿ ಮಗುವಿಗೂ ತನ್ನದೇ ಆದ ಪುಟ್ಟ ನೋಟ್‌ಪುಸ್ತಕವನ್ನು ಒದಗಿಸುವುದು. *ಇದರಲ್ಲಿ ಮಕ್ಕಳು ಸೂಚಿತ ವಿಷಯದ ಬಗ್ಗೆ ಚಿತ್ರ ಬಿಡಿಸಲು ಅಥವಾ ಬರೆಯಲು ತಿಳಿಸುವುದು. ಸಲಹಾತ್ಮಕ ವಿಷಯ: ನನ್ನ ಆಟಿಕೆಗಳು 📖ಅ.ಹಾ : E.C-8.ನನ್ನ ಚಿತ್ರ-ನನ್ನ ಬಣ್ಣ
*ಬರವಣಿಗೆಯ ಮಾದರಿ* ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯವುದು ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* ಚಟುವಟಿಕೆ : ಕ್ಲೈಂಬಿಂಗ್ (ಹತ್ತುವುದು)
(ಗುರಿ-I) ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ ಬೇಕಾಗುವ ಸಾಮಗ್ರಿ: ಹಗ್ಗ ಏಣಿ ಅಥವಾ ಮೆಟ್ಟಿಲುಗಳು ವಿಧಾನ: ಮೆಟ್ಟಿಲುಗಳಿರುವ ಯಾವುದಾದರು ಪ್ರದೇಶದಲ್ಲಿ
ಮಕ್ಕಳು ಮೆಟ್ಟಿಲುಗಳನ್ನು ಹತ್ತಲು ಹಾಗೂ ಇಳಿಯಲು ಸೂಚಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ ಸಮಯ* ವಿಧಾನ : * ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ. *
ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳುವುದರ ಮೂಲಕ
ಕಥೆಯನ್ನು ಪೂರ್ಣ ಗೊಳಿಸುವುದು, ಉದಾ :
ಮುಂದೆನಾಯಿತು? ಎಲ್ಲಿಂದ ಪುಸ್ತಕ ಬಂತು? ಇತ್ಯಾದಿ. ಕಥೆಯನ್ನು
ಹೇಳಿದ ನಂತರ ಕನ್ನಡದಲ್ಲಿ ಸರಳ ಪ್ರಶ್ನೆಗಳನ್ನು ಕೇಳಿ, (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ *ಮತ್ತೆ ಸಿಗೋಣ* 🔚ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ. 🔚ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. 🔚ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26] 🙏🙏🙏🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ). ದಾವಣಗೆರೆ(ಜಿ) 9535633529.
|



