ನಲಿ ಕಲಿ ವಿದ್ಯಾ ಪ್ರವೇಶ ದಿನ 34

            👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇               👉👉👉  ಕ್ಲಿಕ್ ಮಾಡಿ  👈 👈 👈 

**********************************************************************

ವಿದ್ಯಾ ಪ್ರವೇಶ  34ನೇ ದಿನ

👫👬👭👫👫👬👭👫👫👬👭👫

      (ವಿ.ಪ್ರ 2022-23 ರ ಕೈಪಿಡಿಯ 62ನೇ ದಿನ)

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1- 

1. ಶಾಲೆಗೆ ಮೊದಲು ಆಗಮಿಸಿದ ಮಗುವಿಗೆ ಪೇಪರಿನಿಂದ ಮಾಡಿದ ಕಿರೀಟ ಹಾಕಿ ಸ್ವಾಗತಿಸುವುದು.

2. ಹೀಗೆ ಮಗುವಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಪ್ರೇರೆಪಿಸುವುದು

ಚಟುವಟಿಕೆ :2

    35 ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು

                            ಮಾತುಕತೆ:

 ಚಟುವಟಿಕೆ : ನೆನಪಿಡಬಹುದೇ?

ವಿಧಾನ:- 🎂ಮಕ್ಕಳನ್ನು ಅರ್ಧ-ವೃತ್ತಾಕಾರದಲ್ಲಿ ಕೂರಿಸಿ, ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಮಗುವಿನ ಕಿವಿಯಲ್ಲಿ ಒಂದು ವಾಕ್ಯವನ್ನು ಮೆಲ್ಲನೆ ಹೇಳಿ.

🎂ನಂತರ ಪ್ರತಿ ಮಗುವು ಕೊನೆಯ ಮಗುವಿಗೆ ಸಂದೇಶವನ್ನು ತಲುಪಿಸುವವರೆಗೆ ವೃತ್ತದಲ್ಲಿರುವ ಮುಂದಿನ ಮಗುವಿಗೆ ಸಂದೇಶವನ್ನು ಪಿಸುಗುಟ್ಟುತ್ತದೆ.

🎂ಕೊನೆಯ ಮಗುವಿಗೆ ಸಂದೇಶವನ್ನು ಜೋರಾಗಿ ಹೇಳಲು ಹೇಳಿ. ಆಟ ಮುಂದುವರಿಯುತ್ತದೆ.

🎂ಈ ಬಾರಿ ನೀವು ಸಂದೇಶವನ್ನು ಪಿಸುಗುಟ್ಟಲು ಮತ್ತೊಂದು ಮಗುವನ್ನು ಆಯ್ಕೆ ಮಾಡಬಹುದು.

ಚಟುವಟಿಕೆ : ನನ್ನ ಜನ್ಮದಿನದಂದು ವೈಜ್ಞಾನಿಕ ಚಿಂತನೆ

ಸಾಮಗ್ರಿಗಳು: ಜನ್ಮದಿನವನ್ನು ಆಚರಿಸಲು ಬಳಸುವ ವಸ್ತುಗಳನ್ನು ಇರಿಸಿ: ಪಾರ್ಟಿ ಹ್ಯಾಟ್, ಮೇಣದ ಬತ್ತಿಗಳು, ಬಲೂನ್ ಗಳು , ಚಾಕೊಲೇಟ್ ಗಳು, ರಿಬ್ಬನ್‌ಗಳು, ಉಡುಗೊರೆ-ಹೊದಿಕೆಗಳು, ಹೂವುಗಳು, ಅಲಂಕಾರ ಕಾಗದಗಳು

ಇತ್ಯಾದಿ.

ವಿಧಾನ:-ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ

🔴 ಪಟ್ಟಿ ಮಾಡಿದ ವಸ್ತುಗಳನ್ನು ವೃತ್ತದ ಮಧ್ಯದಲ್ಲಿ ಇರಿಸಿ.

🟠ನಂತರ ಒಂದು ಮಗುವನ್ನು ಕರೆದು ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಹೆಸರಿಸಲು ತಿಳಿಸಿ.

🟢ನಂತರ ಪಟ್ಟಿಮಾಡಿದ ವಸ್ತುಗಳ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲು ಕೆಲವು ಪ್ರಶ್ನೆಗಳನ್ನು ಕೇಳಿ

🟤ನೀವು ಅವರನ್ನು ಎಲ್ಲಿ ನೋಡಿದ್ದೀರಿ?

🔵ನಾವು ಅವುಗಳನ್ನು ಎಲ್ಲಿ ಬಳಸುತ್ತೇವೆ?

🟡ನೀವು ಎಂದಾದರೂ ಅವುಗಳನ್ನು ಬಳಸಿದ್ದೀರಾ?

🟣ನೀವು ನಿಮ್ಮ ಜನ್ಮದಿನವನ್ನು ಆಚರಿಸುತ್ತೀರಾ?

  ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

2ನೇ ಅವಧಿ *ನನ್ನ ಸಮಯ*

   ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ ಪೂರ್ಣ ಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.

* ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣಗೊಳಿಸಲು ಸಹಕರಿಸುವುದು.

* ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚು ಗಮನಹರಿಸಬೇಕೆಂಬ ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.

  ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿ ಕೊಳ್ಳುವುದು.

  ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

            3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ* ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* 

ಸಾಮರ್ಥ್ಯ: ಪರಿಸರದ ಅರಿವು, ಆವಿಷ್ಕರಿಸುವುದು, ಪ್ರಯೋಗ ಶೀಲತೆ ಬೆಳೆಸುವುದು

ಚಟುವಟಿಕೆ : ಸಸ್ಯದ ಅವಶ್ಯಕತೆಗಳ ಬಗ್ಗೆ ತಿಳಿಯೋಣ (ಗುರಿ-3)

ಉದ್ದೇಶ:- ಸಸ್ಯದ ಬೆಳವಣಿಗೆ ಮತ್ತು ಉಪಯೋಗ ತಿಳಿಯುತ್ತಾರೆ.

ಅಗತ್ಯ ಸಾಮಗ್ರಿಗಳು : ಕಾಗದದ ಲೋಟ/ತೆಂಗಿನ ಕಾಯಿ ಚಿಪ್ಪು, ಮಣ್ಣು, ಬೀಜಗಳು

ವಿಧಾನ : ಸಸ್ಯವನ್ನು ಪರಿಚಯಿಸುವುದು,

    ಸಸ್ಯ ಬೆಳೆಯಲು ಅವಶ್ಯಕ ಅಂಶಗಳಾದ ಮಣ್ಣು, ನೀರು, ಗಾಳಿ, ಬೀಜ ಮತ್ತು ಅವಕಾಶಗಳ ಬಗ್ಗೆ ತಿಳಿಸುವುದು.

  ಕಾಗದದ ಲೋಟದಲ್ಲಿ ಮಣ್ಣು ಹಾಕಿ ವಿವಿಧ ರೀತಿಯ ಬೀಜಗಳನ್ನು ನೆಟ್ಟು, ಪ್ರತಿದಿನ ನೀರುಣಿಸಿ, ಆಗುವ ಬದಲಾವಣೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ತಿಳಿಸುವುದು. ಹಾಡು ಹೇಳಿಕೊಡುವುದು.

                                                         ಮರ

ಮಣ್ಣಿನಿಂದ ಹುಟ್ಟುವೆ

ಮಣ್ಣು ಹಿಡಿದು ನಿಲ್ಲುವೆ

         ಹಣ್ಣುಗಳನು ನೀಡುವೆ          

ಇನ್ನು ಇನ್ನು ಬೆಳೆಯುವೆ

ಬಿಸಿಲಿನಲ್ಲಿ ನಿಲ್ಲುವೆ 

ನಮಗೆ ನೆರಳು ನೀಡುವೆ

ಶುದ್ಧ ಗಾಳಿ ನೀಡುತಾ

ಎಲ್ಲರನ್ನು ಸಲಹುವೆ

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

     4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಆಕಾರಗಳ ಪರಿಕಲ್ಪನೆ.

ಚಟುವಟಿಕೆ: ಟ್ರೇಸಿಂಗ್, (ಮರಳು), ಗುರಿ - 1

ಉದ್ದೇಶಗಳು

👉ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು.

👉ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

ಸಾಮಗ್ರಿಗಳು : ಮರಳು.ಲೋಟ, ತೆಂಗಿನ ಚಿಪ್ಪು, ಚಮಚ ರಟ್ಟುಗಳು.

 ವಿಧಾನ :»»

     ಮಕ್ಕಳಿಗೆ ಮೇಲ್ಕಂಡ ವಸ್ತುಗಳನ್ನು ನೀಡಿ ಮನೆ, ಗೂಡು, ಬೆಟ್ಟ, ಕಾಲುವೆ, ಕಟ್ಟೆ ಕಟ್ಟುವುದು ಇತ್ಯಾದಿ ಮಾದರಿಯಲ್ಲಿ ಮರಳನ್ನು ಹಾಕಲು ಹೇಳಿ ಅದರ ಬಗ್ಗೆ ವಿವರಿಸಲು ಹೇಳುವುದು,

📖ಅ.ಹಾ:-HW-13 ನನ್ನ ಸುತ್ತಲಿನ ಪರಿಸರ

  ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

          *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ : ಧ್ವನಿ ಮತ್ತು ಸಂಕೇತಗಳ ಸಂಯೋಜನೆ, ಪದ ಸಂಪತ್ತಿ ಅಭಿವೃದ್ಧಿ, ಅಕ್ಷರ ಗುರುತಿಸುವುದು.

ಚಟುವಟಿಕೆ : ಪದದ ಕೊನೆಯ ಧ್ವನಿಯನ್ನು ಗುರುತಿಸುವರು ಮತ್ತು ಹೊಂದಿಸುವರು (ಗುರಿ : 2) ECL-22

ಉದ್ದೇಶಗಳು :

🔆 ಧ್ವನಿ ಸಂಕೇತಗಳ ಅರಿವು ಮೂಡಿಸುವುದು 

🔆ಪದಗಳನ್ನು ಗ್ರಹಿಸಿ ಗುರುತಿಸುವುದು.

🔆ಪದಗಳಲ್ಲಿಯ ಅಕ್ಷರಗಳ ಅಕ್ಷರ ಧ್ವನಿ ಸಹಸಂಬಂಧ ಗುರುತಿಸುವುದು.

🔆ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬಂಧ ಅರ್ಥೈಸಿಕೊಳ್ಳುವುದು.

ಅಗತ್ಯ ಸಾಮಗ್ರಿ : ಕರಿ ಹಲಗೆ

ವಿಧಾನ :

♻️ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಕೆಲವು ಪರಿಚಿತ ಪದಗಳನ್ನು ಹೇಳಲು ತಿಳಿಸುವುದು.

ಉದಾ : ಸರ, ಮರ, ಆರ, ದರ, ಬರ,

(ಒಂದೇ ರೀತಿಯ) ಕೊನೆಯ ಅಕ್ಷರದ ಧ್ವನಿ ಗುರುತಿಸುವುದು ತಿಳಿಸುವುದು.

♻️ಹೊಸ ಪದವೊಂದನ್ನು ಹೇಳಿ, ಅದೇ ಶಬ್ದದಿಂದ ಕೊನೆಯಾಗುವ ಪದಗಳನ್ನು ಹೇಳಿಸುವುದು.

♻️ ವಿವಿಧ ಪದಗಳನ್ನು ಪ್ರದರ್ಶಿಸುತ್ತಾ, ಒಂದೇ ರೀತಿಯ ಧ್ವನಿಯಿಂದ ಕೊನೆಯಾಗುವ ಪದ ಗಳನ್ನು  ಪರಿಚಯಿಸುವುದು.

   📖ಅ.ಹಾ: EC-16 ಚಿತ್ರ ಪ್ರಾಸ ಪದ-ಹೊಂದಿಸು

                 *ಅರ್ಥ ಗ್ರಹಿಕೆಯೊಂದಿಗೆ ಓದು* 

ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅಕ್ಷರಗಳನ್ನು ಗುರುತಿಸುವುದು, ಸೂಕ್ಷ್ಮ ಸ್ನಾಯು ಕೌಶಲಗಳಅಭಿವೃದ್ಧಿ.

ಚಟುವಟಿಕೆ : ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸುವುದು (ಗುರಿ-2)

ಅಗತ್ಯ ಸಾಮಾಗ್ರಿಗಳು : ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ, ಅಕ್ಷರಗಳ ಆಕಾರ ಇತ್ಯಾದಿ

ವಿಧಾನ :

💎ತರಗತಿಯಲ್ಲಿರುವ ವಸ್ತುಗಳ ಹಾಗೂ ಮಕ್ಕಳ ಹೆಸರುಗಳಲ್ಲಿರುವ ಅಕ್ಷರಗಳನ್ನು ಗುರುತಿಸಲು ತಿಳಿಸುವುದು,

💎ಗುರುತಿಸಿದ ಅಕ್ಷರಗಳನ್ನು ಅದರ ಧ್ವನಿಯೊಂದಿಗೆ ಸಂಯೋಜಿಸುವುದು.

💎ವಿವಿಧ ವಸ್ತುಗಳನ್ನು ಬಳಸಿ (ಮಣಿಗಳು, ಗುಂಡಿಗಳು, ಮಣ್ಣು, ಮರಳು) ಅಕ್ಷರಗಳ ಆಕಾರಗಳ ಕಲ್ಪನೆಯನ್ನು ಮೂಡಿಸುವುದು.

💎ಮರಳು ಮತ್ತು ಮಣ್ಣಿನ ಮೇಲೆ ಅಕ್ಷರಗಳನ್ನು ಅಭ್ಯಾಸ ಮಾಡಿಸುವುದು.

💎ಅಕ್ಷರಗಳನ್ನು ಬರೆದು, ಅಕ್ಷರಗಳ ಒಳಗೆ ಬಣ್ಣ ತುಂಬಲು ಹೇಳುವುದು,

💎ನೆಲದ ಮೇಲೆ ನೀರಿನಿಂದ ಅಕ್ಷರದ ಆಕಾರಗಳನ್ನು ರಚಿಸುವುದು,

💎ಕಾಗದ ಮತ್ತು ಪೆನ್ಸಿಲ್‌ಗಳನ್ನು ಹೊರತುಪಡಿಸಿ ಅಕ್ಷರಗಳನ್ನು ರಚಿಸಲು ಅವಕಾಶ ಕಲ್ಪಿಸುವುದು.

💎ಅಕ್ಷರಗಳ ಧ್ವನಿಗಳಿಗೆ ಒತ್ತು ನೀಡುವುದು. ಪರಿಚಿತ ಪದಗಳೊಂದಿಗೆ ಅವುಗಳನ್ನು ಸಂಬಂಧೀಕರಿಸುವುದು.

                          *ಉದ್ದೇಶಿತ ಬರೆಹ *

ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆಚಟುವಟಿಕೆ:

ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-2) ECW-3 ಉದ್ದೇಶಗಳು:

📝 ಸೂಕ್ಷ್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

📝 ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು.

📝 ಆಯ್ಕೆಯ ಚಿತ್ರ ಬಿಡಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ, ಶ್ರೇಯಾನ್ಸ್, ಪೆನ್ಸಿಲ್

ವಿಧಾನ : ಮಕ್ಕಳು ತಮ್ಮ ಆಯ್ಕೆಯ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸುವುದು, ಬರೆದ ಚಿತ್ರಕ್ಕೆ ಬಣ್ಣ ತುಂಬಿ ಹೆಸರಿಸಲು ತಿಳಿಸುವುದು.

                  *ಬರವಣಿಗೆಯ ಮಾದರಿ*

    ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

   ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

          6ನೇ ಅವಧಿ *ಹೊರಾಂಗಣ ಆಟಗಳು*  

ಚಟುವಟಿಕೆ – ಸ್ಥಿರ ಸಮತೋಲನ (static balance)

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ದೇಹದ ಬೇರೆ ಬೇರೆ ಭಾಗಗಳ ಸಮ -ತೋಲನ ಸಾಧಿಸುವುದು.

ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ,

ವಿಧಾನ :

🔴ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ ಸಭಾಂಗಣದಲ್ಲಿ ಮಾಡಿಸುವುದು.

🟤ಮಕ್ಕಳು ಚಾಪೆಯ ಮೇಲೆ ಬೆನ್ನ ಮೇಲೆ ಮಲಗಲು ಸೂಚಿಸುವುದು.

🟢ಎಡಕ್ಕೆ ಹೊರಳಿ ಮಲಗಲು ಸೂಚಿಸುವುದು, ಬಲಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.

🟠ಬಲಕ್ಕೆ ಹೊರಳಿ ಮಲಗಲು ಸೂಚಿಸುವುದು. ಎಡಗಾಲು ಮತ್ತು ಬಲಗೈ ಎತ್ತಲು ಸೂಚಿಸುವುದು.

   ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

                7ನೇ ಅವಧಿ *ಕಥಾ ಸಮಯ*

 ಶೀರ್ಷಿಕೆ : ಒಂಟಿ ಮತ್ತು ನರಿ

 ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.                 ಕಥಾ ಸಾಹಿತ್ಯ ನಿರೂಪಣೆ

ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳುವುದರ ಮೂಲಕ ಕಥೆಯನ್ನು

ಪೂರ್ಣ ಗೊಳಿಸುವುದು

ಉದಾ : ಅವರು ಎಲ್ಲಿಗೆ ಹೋದರು? ನಂತರ ಏನಾಯಿತು? ಇತ್ಯಾದಿ

                           « :   ಕಥೆ : »

   ಒಂಟೆ ಮತ್ತು ನರಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದವು. ಅವು ಪ್ರತಿ ದಿನ ಇಬ್ಬರೂ ಸೇರಿ ಆಹಾರ ಹುಡುಕುತ್ತಾ ಹೋಗುತ್ತಿದ್ದವು. ಒಂದು ದಿನ ಆಹಾರ ಹುಡುಕುತ್ತಾ ಹುಡುಕುತ್ತಾ ಊರ ಸಮೀಪ ಇರುವ ಕಬ್ಬಿನ ಗದ್ದೆಯ ಹತ್ತಿರ ಬಂದವು. ಕಬ್ಬನ್ನು ಕಂಡ ನರಿಗೆ ಅದನ್ನು ತಿನ್ನುವ ಆಸೆ ಆಯಿತು.

  ಇದನ್ನು ತನ್ನ ಗೆಳೆಯ ಒಂಟೆಯ ಹತ್ತಿರ ಹೇಳಿತು. ಒಂಟೆ ಈ ಮಾತನ್ನು ಒಪ್ಪಲಿಲ್ಲ. ಯಾರಾದರೂ ಕಾವಲುಗಾರರು ಬಂದರೆ ನಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ನರಿಗೆ ತಿಳಿ ಹೇಳಿತ್ತು.

   ಆದರೂ ಸಹ ನರಿಯು ಒಂಟೆಯನ್ನು ಪುಸಲಾಯಿಸಿ ಕಬ್ಬನ್ನು ತಿನ್ನಲು ಹೊರಟೇ ಬಿಟ್ಟಿತು. ಇಬ್ಬರೂ ಸಹ ಬಹಳ ಸಂತೋಷದಿಂದ ಕಬ್ಬನ್ನು ತಿನ್ನುತ್ತಿದ್ದವು. ಜೊತೆಗೆ ಗಟ್ಟಿಯಲೆಲ್ಲಾ ಬಿಡಾಡಿ ಕಬ್ಬನ್ನು ಹಾಳುಮಾಡಿತ್ತು.

    ಹೊಟ್ಟೆ ತುಂಬಿದ ನಂತರ ನರಿಯು ಒಂಟೆಯ ಹತ್ತಿರ ನನಗೆ ಹೊಟ್ಟೆ ತುಂಬಿದೆ. ಈಗ ನಾನು ಹಾಡನ್ನು ಹಾಡಬೇಕು ಎಂದಿತು. ಒಂಟೆಯು ಬೇಸರದಿಂದ ನನ್ನ ಹೊಟ್ಟೆ ದೊಡ್ಡದು ಇನ್ನೂ ತುಂದಿಲ್ಲ ನೀನು ಹಾಡು ಹೇಳಿದರೆ ಕಾವಲುಗಾರರು ಬರುತ್ತಾರೆ.

   ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದಿತು. ಆದರೂ ನರಿಯು ಒಂಟೆಯ ಮಾತನ್ನು ಲೆಕ್ಕಿಸದೇ ತನ್ನ ಪಾಡಿಗೆ ತಾನು ಕೂಗಲು ಪ್ರಾರಂಭಿಸಿತು. ಈ ವೇಳೆಗೆ ನರಿಯ ಕೂಗನ್ನು ಕೇಳಿದ ಕಾವಲುಗಾರರು ದೊಣ್ಣೆಯನ್ನು ಹಿಡಿದು ಓಡಿ ಬಂದರು.   ಕಾವಲುಗಾರರನ್ನು ನೋಡಿದ ನರಿಯು ಮೊದಲೇ ಓಡಿಹೋಯಿತು. ತಿನ್ನುವ ಭರದಲ್ಲಿದ್ದ ಒಂಟೆಗೆ ಕಾವಲುಗಾರರು ಬರುತ್ತಿರುವುದು ತಿಳಿಯುವಷ್ಟರಲ್ಲಿ ಅವರು ಬಂದು ಒಂಟೆಯನ್ನು ದೊಣ್ಣೆಯಿಂದ ಚೆನ್ನಾಗಿ ಹೊಡೆದರು.

    ಏಟನ್ನು ತಿಂದ ಒಂಟೆ ನೋವಿನಿಂದ ಕೂಗುತ್ತ ನರಿಯ ಸ್ವಾರ್ಥ ಬುದ್ಧಿಯನ್ನು ಶಪಿಸುತ್ತ ತನ್ನ ದಾರಿಯನ್ನು ಹಿಡಿಯಿತು. 

ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ,

👍ಕಬ್ಬಿನ ಗದ್ದೆ ಎಲ್ಲಿತ್ತು ?

👍ಕಬ್ಬನ್ನು ತಿಂದ ನಂತರ ನರಿಯು ಏನೆಂದು ಹೇಳಿತು?

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು)

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

                8ನೇ ಅವಧಿ *ಮತ್ತೆ ಸಿಗೋಣ*  

»» ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ.

»» ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

 ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.

[ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26]
                     
   🙏🙏🙏🙏🙏🙏🙏🙏🙏                     
                    ಮಲ್ಲಿಕಾರ್ಜುನ್ ಬಡಿಗೇರ್                       
     ನಲಿಕಲಿ ಶಿಕ್ಷಕರು.                              
 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ         
ಹೊನ್ನಾಳಿ(ತಾ).            ದಾವಣಗೆರೆ(ಜಿ)          
9535633529.                          
             

           ********************************************

FLNಗೆ ಸಂಬಂಧಿಸಿದ

ಸುತ್ತೋಲೆ,ಮಾದರಿ ಕ್ರಿಯಾಯೋಜನೆ,  ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ

ಪೂರಕ ಸಾಹಿತ್ಯಕ್ಕಾಗಿ 

                            👉👉👉  ಕ್ಲಿಕ್ ಮಾಡಿ  👈 👈👈