|
-: ವಿದ್ಯಾ ಪ್ರವೇಶ 5ನೇ ದಿನ :- 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 5ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ) 👫ಮಕ್ಕಳನ್ನು
ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ. 👫 ಅವರನ್ನು
ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ. 👫
ಗುಡ್ ಮಾರ್ನಿಂಗ್ ಮಕ್ಕಳೇ, ಹೇಗಿದ್ದೀರಿ ?‛ ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಮತ್ತು "ಗುಡ್ ಮಾರ್ನಿಂಗ್ ಟೀಚರ್" ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ
ಮಕ್ಕಳನ್ನು ಪ್ರೋತ್ಸಾಹಿಸಿ. ನಾವು ಚೆನ್ನಾಗಿದ್ದೇವೆ, ಧನ್ಯವಾದಗಳು. 👫ಶುಭಾಶಯಗಳಿಗೆ ಮಕ್ಕಳು ಆತ್ಮವಿಶ್ವಾಸದಿಂದ ಪ್ರತಿಕ್ರಿಸುವವರೆಗೆ ಚಟುವಟಿಕೆಯನ್ನು ಪುನರಾವರ್ತಿಸಿ. ಮಾತುಕತೆ ಚಟುವಟಿಕೆ :
ಕ್ಲ್ಯಾಪ್ ಆಂಡ್ ಕ್ಲ್ಯಾಪ್ ವಿಧಾನ: ⭕ ಮಕ್ಕಳನ್ನು
ವೃತ್ತದಲ್ಲಿ ಕೂರಿಸಿ. ⭕ ಚಪ್ಪಾಳೆಯನ್ನು
ಪರಿಚಯಿಸಿ, ತಾಳಬದ್ಧವಾಗಿ ಚಪ್ಪಾಳೆ ತಟ್ಟುವುದನ್ನು ರೂಢಿಸಿ. ⭕ಇದನ್ನು ಕೆಲವು
ಬಾರಿ ಪುನರಾವರ್ತಿಸಿ. ನಂತರ ನಿಧಾನವಾಗಿ, ನಿಧಾನವಾಗಿ ಮಕ್ಕಳು ನಿಮ್ಮೊಂದಿಗೆ ಮಾಡುವಂತೆ ಮಾಡಿ. ⭕ನಂತರ ಅದೇ
ಲಯದೊಂದಿಗೆ ನಿಮ್ಮ ಹೆಸರನ್ನು ಪರಿಚಯಿಸಿ :ನನ್ನ ಹೆಸರು.......(ಚಪ್ಪಾಳೆ ಜೊತೆಗೆ) ⭕ ಮಗುವಿಗೆ ಅದೇ
ಲಯದೊಂದಿಗೆ ಅವನ/ಅವಳ ಹೆಸರನ್ನು ಪರಿಚಯಿಸುವ ಮೂಲಕ ಅದೇ ರೀತಿ ಮಾಡಲು ಹೇಳಿ. ⭕ ಪ್ರತಿ ಮಗುವು ಲಯವನ್ನು ಕಾಯ್ದುಕೊಂಡು ಅವನ/ಅವಳ ಹೆಸರನ್ನು ಪರಿಚಯಿಸಲು ಅವಕಾಶ ನೀಡಿ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ*ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ*(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ವಿಂಗಡಣೆ,
ಪರಿಸರದ ಅರಿವು. ಚಟುವಟಿಕೆ : ಗುಂಪು
ಮಾಡುವುದು. (ಗುರಿ-3) ಉದ್ದೇಶ:- ವಸ್ತುವಿನ
ಭೌತಿಕ ಲಕ್ಷಣಗಳನ್ನು ಆಧರಿಸಿ ವಿಂಗಡಿಸುವುದು. ಅಗತ್ಯ ಸಾಮಗ್ರಿಗಳು : ವಿವಿಧ ತರಹದ ಬ್ಲಾಕ್‌ಗಳು, ಗುಂಡಿಗಳು, ಗೋಲಿಗಳು, ಬೀಜಗಳು, ರಿಂಗ್ಸ್, ಆಟಿಕೆಗಳು/ ಗಣಿತ ಕಲಿಕಾ ಆಂದೋಲನದ ಕಿಟ್ ವಿಧಾನ : ವಸ್ತುವಿನ ಭೌತಿಕ ಲಕ್ಷಣಗಳನ್ನು ಆಧರಿಸಿ ಹೋಲಿಕೆ ಮಾಡಿ ಅದಕ್ಕೆ ಅನುಗುಣವಾಗಿ ವಸ್ತುಗಳನ್ನು ಗುಂಪುಗಳಾಗಿ ವಿಂಗಡಿಸಿ, ಅವುಗಳ ವ್ಯತ್ಯಾಸಗಳನ್ನು ಗಮನಿಸುವುದು. ಉದಾ: ವಿವಿಧ ತರಹದ ಬ್ಲಾಕ್‌ಗಳು, ಗುಂಡಿಗಳು, ಗೋಲಿಗಳು, ಬೀಜಗಳು, ರಿಂಗ್ಸ್, ಆಟಿಕೆಗಳು. ಇವುಗಳನ್ನು ಆಕಾರ, ಗಾತ್ರ, ಬಣ್ಣ ಆಧಾರದ ಮೇಲೆ ಗುಂಪುಗಳಾಗಿ ವಿಂಗಡಿಸುವುದು. ಈ ಪ್ರಕ್ರಿಯೆಯ ಅನುಭವ
ಪಡೆದ ನಂತರ ಯಾವ ಲಕ್ಷಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ ಎಂದು ತಿಳಿಸಲಿ. ಅ.ಹಾ:-IL-3 ಗುಂಪು
ಮಾಡೋಣ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* ಮಕ್ಕಳ ಚಟುವಟಿಕೆ
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಚಟುವಟಿಕೆ : ಕ್ಲೇ/
ಮಣ್ಣು ಅಥವಾ ಹಿಟ್ಟಿನಿಂದ ಅಚ್ಚು ತೆಗೆಯುವುದು. ಗುರಿ-1 ಉದ್ದೇಶಗಳು: 📌 ಸೂಕ್ಮ ಸ್ನಾಯುಗಳ
ಅಭಿವೃದ್ದಿಯಾಗುವುದು. 📌ಕಣ್ಣು ಕೈಗಳ ನಡುವೆ
ಸಮನ್ವಯ ಸಾಧಿಸಲು ಸಾಧ್ಯವಾಗುವುದು. 📌 ತಮ್ಮ ಕಲ್ಪನೆಯ ಆಕೃತಿ ಮೂಡಿಸುವುದರ ಜೊತೆಗೆ ಸೃಜನ ಶೀಲತೆಯನ್ನು ಅಭಿವ್ಯಕ್ತಗೊಳಿಸಲು ಸಹಕಾರಿಯಾಗುವುದು. ಸಾಮಗ್ರಿಗಳು : ಕ್ಲೇ
ಅಥವಾ ಕಲಸಿದ ಹಿಟ್ಟು. ವಿಧಾನ : ಮಕ್ಕಳಿಗೆ
ಕ್ಲೇ/ ಮಣ್ಣು ಅಥವಾ ಕಲಸಿದ ಹಿಟ್ಟನ್ನು ನೀಡಿ ಅದರೊಂದಿಗೆ ತಮ್ಮ ಆಯ್ಕೆಯ ಮಾದರಿಗಳನ್ನು ಮಾಡಲು
ಹೇಳುವುದು. ಹಬ್ಬಗಳಿಗೆ ಸಂಬಂದಿಸಿದಂತೆ ದೀಪ ಇತ್ಯಾದಿ ಮಾದರಿಗಳನ್ನು ಮಾಡಲು ಹೇಳಿ ನಂತರ ಬಣ್ಣ ತುಂಬಲು ಹೇಳುವುದು. ಮಕ್ಕಳು ಕ್ಲೇ ಅಥವಾ ಹಿಟ್ಟಿನಲ್ಲಿ ಮಾದರಿಗಳನ್ನು ತಯಾರಿಸುವಾಗ ಸುಗಮಕಾರರು ಗಮನಿಸುತ್ತಿರಬೇಕು. ಚಟುವಟಿಕೆ ಮುಗಿದ ಮೇಲೆ ಮಕ್ಕಳು ತಯಾರಿಸಿದ ಮಾದರಿಯನ್ನು ವಿವರಿಸಲು ಹೇಳುವುದು. ಸುಗಮಕಾರರು ಮಕ್ಕಳಿಗೆ ವಿವಿಧ ಮಾದರಿಗಳನ್ನು ತಯಾರಿಸಲು ಸಣ್ಣ ಮೊಂಡಾದ ಪ್ಲಾಸ್ಟಿಕ್ ಚಾಕು , ಅಚ್ಚುಗಳು ಮತ್ತು ರೋಲಿಂಗ್ ಪಿನ್ನುಗಳು ಅಥವಾ ಮರದ ಚಿಗುರುಗಳು , ಹೂಗಳು, ಬಣ್ಣ ಮುಂತಾದ ಇತರ ಪರಿಕರಗಳನ್ನು ಒದಗಿಸಬಹುದು. ಮಾದರಿಗಳನ್ನು ವೈವಿದ್ಯಮಯವಾಗಿ ಮಾಡಲು ಬೀಜಗಳು, ಚಿತ್ರಗಳು, ಕಲ್ಲುಗಳು, ಚಿಪ್ಪುಗಳು ಇತ್ಯಾದಿಗಳನ್ನು ಒದಗಿಸುವುದು. ಚಟುವಟಿಕೆಯ ನಂತರ ಮಕ್ಕಳು ತಮ್ಮ ಕೈಗಳನ್ನು
ತೊಳೆದುಕೊಳ್ಳುವಂತೆ ನೋಡಿಕೊಳ್ಳುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು
ಮಾತನಾಡುವುದು* ಸಾಮರ್ಥ್ಯ : ಗಮನವಿಟ್ಟು ಕೇಳುವುದು,
ಸೃಜನಾತ್ಮಕ ಆಲೋಚನೆ, ಪರಿಸರ ಜಾಗೃತಿ ಮೂಡಿಸುವುದು. ಚಟುವಟಿಕೆ : ಪದ ಊಹಿಸು (ಗುರಿ-2)
ಇಅಐ-5 ಉದ್ದೇಶಗಳು : 🟣 ಪ್ರಶ್ನೆಗಳನ್ನು ಕೇಳುವ ಮೂಲಕ
ಮಕ್ಕಳಲ್ಲಿ ಆಲಿಸುವ ಸಾಮರ್ಥ್ಯ ಹೆಚ್ಚಿಸುವುದು. 🟣ಸೃಜನಶೀಲ ಆಲೋಚನೆಯ ಮೂಲಕ ಮಾತನಾಡಲು
ಅವಕಾಶ ಕಲ್ಪಿಸುವುದು. 🟣ತಮ್ಮ ಸುತ್ತಲಿನ ಪರಿಸರದ ಬಗೆಗಿನ
ಅರಿವನ್ನು ಪಡೆದುಕೊಳ್ಳುವುದು. ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ
ಕೂರಿಸುವುದು. ಹೌದು/ ಇಲ್ಲ ಎನ್ನುವ ಪ್ರಶ್ನೆಗಳನ್ನು
ಕೇಳುವುದರ ಮೂಲಕ ಊಹಿಸಿದ ಪದವನ್ನು ಕಂಡುಹಿಡಿಯುವುದು ಹೇಗೆ ಎನ್ನುವುದನ್ನು ತೋರಿಸಿ ಕೊಡುವುದು. ಉದಾ : ಮಕ್ಕಳಿಗೆ ಊಹೆ ಮಾಡಿ ಹೇಳುವಂತೆ
ಪ್ರೇರೇಪಿಸುವುದು. ಇದು ಮಾವಿನ ಹಣ್ಣು ಎಂದು ಊಹಿಸುವುದು. ಈ ರೀತಿಯ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುವುದು. ಶಿಕ್ಷಕರು ಮಾವಿನ ಹಣ್ಣು ಎನ್ನುವ ಪದವನ್ನು ಊಹಿಸಿ ಮಕ್ಕಳು ಹೌದು/ ಇಲ್ಲ ಎಂಬ ಪ್ರಶ್ನೆಗಳನ್ನು
ಕೇಳುವ ಮೂಲಕ ಉತ್ತರವನ್ನು ಪತ್ತೆ ಹಚ್ಚಲು ಹೇಳುವುದು. ಉದಾಹರಣೆಗಾಗಿ: 🎯 ಇದು ಒಂದು ವಸ್ತುವೇ? ಹಣ್ಣೇ?
ತರಕಾರಿಯೇ? ಪ್ರಾಣಿಯೇ? ವ್ಯಕ್ತಿಯೇ? 🎯 ಇದು ಚಲಿಸುವುದೇ? 🎯 ಇದು ತರಗತಿಯಲ್ಲಿ ಇದೆಯೇ? 🎯ಉದ್ಯಾನವನದಲ್ಲಿ ಸಿಗುತ್ತದೆಯೇ? ಮಕ್ಕಳಿಗೆ ಈ ಚಟುವಟಿಕೆ ಪರಿಚಿತವಾದ ನಂತರ ಇದೇ ರೀತಿ ಸರಿಯಾದ ಉತ್ತರ ಊಹಿಸುವವರೆಗೂ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುವುದು. *ಅರ್ಥಗ್ರಹಿಕೆಯೊಂದಿಗಿನ ಓದು* ಸಾಮರ್ಥ್ಯ:-ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥ ಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು. ಚಿತ್ರ ಸಂಪುಟ (ಗುರಿ-2) ವಿಷಯ:- ಉದ್ಯಾನವನದಲ್ಲಿ ನೀವು ನೋಡಿರುವ ವಸ್ತುಗಳು/ ವಿಷಯಗಳು. ಉದ್ದೇಶಗಳು 🌀ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ ಸಂಪುಟಗಳನ್ನು ರಚಿಸುವರು. 🌀ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು. ಅಗತ್ಯ ಸಾಮಗ್ರಿಗಳು:- ಕಾಗದ, ಕ್ರೈಯಾನ್ಸ್, ಅಂಟು, ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಗಳು, ಉದ್ಯಾನವನದಲ್ಲಿ ನೋಡಬಹುದಾದ ವಿಷಯ ವಸ್ತುಗಳ ಕುರಿತ ಕಥನ/ ಕವಿತೆ /ಹಾಡುಗಳ ಪಟ್ಟಿ. ವಿಧಾನ:- 🧸 ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶು ಗೀತೆಗಳು ಚಿತ್ರಗಳನ್ನು ಗುರುತಿಸುವುದು. 🧸ಹಾಡು ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೇಳುವರು ಶಿಕ್ಷಕರು ಮಕ್ಕಳು ಗ್ರಹಿಸಿ ಹೇಳಿದ ಪದಗಳನ್ನು ಕಪ್ಪು ಹಲಗೆಯ ಮೇಲೆ ಬರೆಯುವುದು ಆ ಪದಗಳ ಕುರಿತು ಚರ್ಚಿಸುವರು ಹಾಗೂ ಆಯ ಪರಿಚಿತ ಪದಗಳ ಆಧಾರದಲ್ಲಿ ಪದ ಜಾಲಗಳನ್ನು ಕಪ್ಪುಹಲಗೆ ಅಥವಾ ಚಾರ್ಟ್ಗಳಲ್ಲಿ ಬರೆದು ಚರ್ಚಿಸುವರು. 🧸 ಮಕ್ಕಳಿಗೆ ಹಾಳೆ ಕ್ರೆಯನ್ಸ್ ಇನ್ನಿತರ ಸಾಮಗ್ರಿಗಳನ್ನು ನೀಡಿ ಉದ್ಯಾನವನದ ಚಿತ್ರ ನೋಡಿ ಅಥವಾ ಉದ್ಯಾನವನದಲ್ಲಿ ಈ ಇಂದಿನ ಅನುಭವದ ಮೇಲೆ ಮಕ್ಕಳು ಚಿತ್ರಗಳನ್ನು ಬರೆಯಲು ಮತ್ತು ಬಣ್ಣ ಹಚ್ಚಲು ಅವಕಾಶ ನೀಡುವುದು. ವೈಯಕ್ತಿಕ ಚಿತ್ರ ಸಂಪುಟ:-ಮಕ್ಕಳು ರಚಿಸಿದ ಚಿತ್ರಗಳನ್ನು ತಮ್ಮ ಕೃತಿ ಸಂಪುಟದಲ್ಲಿ ಸಂಗ್ರಹಿಸಲು ತಿಳಿಸುವುದು ಮತ್ತು ಅವುಗಳನ್ನು ಮುಂದಿನ ಆರನೇ ದಿನದಲ್ಲಿ ಚರ್ಚಿಸುವುದಾಗಿ ತಿಳಿಸುವುದು. ಉದಾ ಹೂಗಳು ಮರಗಳು ಪಕ್ಷಗಳು ಮಕ್ಕಳ ಆಟಿಕೆ ಸಮಗ್ರಿಗಳು ಕುಳಿತುಕೊಳ್ಳುವ ಆಸನಗಳು ಇತ್ಯಾದಿ. ಚಿತ್ರಗಳು/ ವಿಡಿಯೋಗಳು /ಕ್ಷೇತ್ರ ಭೇಟಿಯ ಅನುಭವದ ಆಧಾರದ ಮೇಲೆ ಮಕ್ಕಳು ವಯಕ್ತಿಕವಾಗಿ ಚಿತ್ರ ಬರೆಯಲು ಅವಕಾಶವಿರುವಂತೆ ನೋಡಿಕೊಳ್ಳುವುದು. ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಗಳನ್ನು/ ಚಿತ್ರಪಟಗಳನ್ನು/ ವಿಡಿಯೋ/ ಹಾಡು ಕಥೆಗಳನ್ನು ಬಳಸಿ ಅಥವಾ ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು. *ಉದ್ದೇಶಿತ ಬರೆಹ * ಸಾಮರ್ಥ್ಯ : ಕೈ-ಕಣ್ಣುಗಳ ನಡುವೆ ಹೊಂದಾಣಿಕೆ ಚಟುವಟಿಕೆ : ಚಿತ್ರ ರಚಿಸಿ. (ಗುರಿ 01) ECW-5 ಉದ್ದೇಶಗಳು : 🎯 ಸೂಕ್ಷ್ಮ ಚಲನಾ ಕೌಶಲಗಳನ್ನು ಬೆಳೆಸುವುದು. 🎯 ಕಣ್ಣು-ಕೈಗಳ ಸಮನ್ವಯವನ್ನು ಅಭಿವೃದ್ಧಿಪಡಿಸುವುದು. ಸಾಮಗ್ರಿಗಳು: ಕಪ್ಪು ಹಲಗೆ/ ಸ್ಲೇಟು, ಸೀಮೆಸುಣ್ಣ ವಿಧಾನ: * ಮಕ್ಕಳಿಗೆ ವಿವಿಧ ಚಿತ್ರ/ಆಕೃತಿಗಳನ್ನು ರಚಿಸಲು ಅವಕಾಶ ನೀಡುವುದು. * ತಮ್ಮ ಕಲ್ಪನೆಯಂತೆ ಚಿತ್ರ/ಆಕೃತಿಗಳನ್ನು ರಚಿಸಲು ಹೇಳುವುದು ಮಕ್ಕಳು ತಮ್ಮ ಇಷ್ಟದಂತೆ ಚಿತ್ರ ರಚಿಸಿ ಬಣ್ಣ ತುಂಬಲು ಹೇಳುವುದು. * ಸೃಜನಾತ್ಮಕತೆ ಪ್ರೋತ್ಸಾಹಿಸಲು ಶಿಕ್ಷಕರು ತಮ್ಮ ಆಲೋಚನೆಗಳನ್ನು ಮಕ್ಕಳ ಮೇಲೆ ಒತ್ತಡ ತರಬಾರದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* ಚಟುವಟಿಕೆ : ಕಣ್ಣಾ
ಮುಚ್ಚಾಲೆ ಸಾಮರ್ಥ್ಯ : ಸೂಕ್ಷ್ಮ
ಮನೋಭಾವ, ಅನ್ವೇಷಣೆ ಮನೋಭಾವ ಬೆಳೆಸಲು. ವಿಧಾನ: 🌍 ಒಂದು
ಮಗುವಿನ ಕಣ್ಣನ್ನು ಮುಚ್ಚಿ ಉಳಿದ ಮಕ್ಕಳಿಗೆ ಬಚ್ಚಿಟ್ಟುಕೊಳ್ಳಲು ಸೂಚಿಸುವುದು. 🌍 ನಿಗದಿತ ಸಮಯದಲ್ಲಿ
ಬಚ್ಚಿಕೊಂಡ ಮಕ್ಕಳನ್ನು ಹುಡುಕಲು ತಿಳಿಸುವುದು. 🌍 ಅಡಗಿಕೊಂಡ ಮಕ್ಕಳಲ್ಲಿ
ಮೊದಲು ಯಾರು ಸಿಗುತ್ತಾರೋ ಅವರು ಈ ಆಟವನ್ನು ಮುಂದುವರೆಸುತ್ತಾರೆ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ ಸಮಯ* 🛑 ಕಥೆ ಹೇಳುವುದು ಪ್ರತಿ ದಿನ ನಡೆಯುವ
ಒಂದು ಪ್ರಕ್ರಿಯೆ. ಇದು ಮಕ್ಕಳಲ್ಲಿ ಮುದ್ರಿತ ಸಾಮಗ್ರಿಗಳ ಬಗ್ಗೆ ಜಾಗೃತಿ,ಶಬ್ದಸಂಪತ್ತಿನ ಬೆಳವಣಿಗೆ,
ಆಲಿಸುವ ಸಾಮರ್ಥ್ಯ ಮತ್ತು ಗ್ರಾಂಥಿಕ ಶಬ್ದಗಳನ್ನು ಗ್ರಹಿಸುವುದರ ಜೊತೆಗೆ ಮೌಲ್ಯಗಳನ್ನು ಮತ್ತು
ಸಂಸ್ಕಾರವನ್ನು ಕಲಿಸುತ್ತದೆ. ಕಥೆಯ ಶೀರ್ಷಿಕೆ
: ಸಿಂಹ ಮತ್ತು ಇಲಿ ಸಾಮಗ್ರಿಗಳು : ಸಂಭಾಷಣೆ
ಇರುವ ಮಿಂಚಪಟ್ಟಿಗಳು ಉದ್ದೇಶಗಳು : 📢ಆಲೋಚನಾ ಶಕ್ತಿಯನ್ನು
ವೃದ್ಧಿಸುವುದು 📢ಪ್ರಶ್ನಿಸುವ ಮನೋಭಾವ
ಉಂಟುಮಾಡುವುದು. 📢 ಊಹಿಸುವ ಕೌಶಲವನ್ನು
ಹೆಚ್ಚಿಸುವುದು. 📢ಕಥೆಗೆ ಸಂಬಂಧಿಸಿದ
ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು. 📢 ಅಭಿವ್ಯಕ್ತಿ ಸಾಮರ್ಥ್ಯವನ್ನು
ಹೆಚ್ಚಿಸುವುದು. 📢 ನಿರರ್ಗಳವಾಗಿ
ಮಾತನಾಡುವ ಕೌಶಲವನ್ನು ರೂಢಿಸುವುದು. ವಿಧಾನ : 🌈 ಕಥೆಯನ್ನು ಪುನರಾವಲೋಕನ
ಮಾಡಿಕೊಳ್ಳುವುದು. 🌈 ಕಥೆಯ ನಿರೂಪಣೆಯನ್ನು
ಮಾಡಲು ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸಹಕರಿಸುವುದು. 🌈 ಮಕ್ಕಳು ತಪ್ಪಾಗಿ ಹೇಳಿದರೂ ತಕ್ಷಣವೇ ತಿದ್ದದೇ ಸಕಾರಾತ್ಮಕವಾಗಿ ಸ್ವೀಕರಿಸಿ ಆ ನಂತರ ಸರಿಪಡಿಸಿ ಕಥೆಯನ್ನು ಮುಂದುವರೆಸಲು ಹೇಳುವುದು. 🌈 ಮಿಂಚುಪಟ್ಟಿಗಳಲ್ಲಿ ಪಾತ್ರಗಳ
ಸಂಭಾಷಣೆಯನ್ನು ಚಿಕ್ಕ ಚಿಕ್ಕದಾಗಿ ಬರೆದು ನೀಡುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ *ಮತ್ತೆ
ಸಿಗೋಣ* 🔚 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು
ಪುನರಾವರ್ತಿಸಿ/ನೆನಪಿಸಿ 🔚 ಈ ದಿನ ಮಕ್ಕಳು ನಿರ್ವಹಿಸಿದ
ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. 🔚ಮರುದಿನ ಮಕ್ಕಳು ಸಂತೋಷದಿಂದ
ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. 🔚"ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ. [ಸಾಹಿತ್ಯ ಕೃಪೆ :
ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25] 🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ) ದಾವಣಗೆರೆ (ಜಿ) 9535633529
|