ವಿದ್ಯಾ ಪ್ರವೇಶ ದಿನ 39


  
ವಿದ್ಯಾ ಪ್ರವೇಶ  39ನೇ ದಿನ

👫👬👭👫👫👬👭👫👫👬👭👫

      (ವಿ.ಪ್ರ 2022-23 ರ ಕೈಪಿಡಿಯ 70ನೇ ದಿನ)

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1 :- ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು ಮಕ್ಕಳಿಂದ ಕೇಳಿ   ತಿಳಿದು ಆ ಚಟುವಟಿಕೆಯನ್ನು ಮಾಡಿಸುವುದು            

         ಮಾತುಕತೆ   

ದಿನ 67 ರ ಚಟುವಟಿಕೆ: ಇಂಗ್ಲೀಷ್ ಪ್ರಾಸ ಪದ್ಯವನ್ನು ಹಾಡಿಸಿ.

ಒಂದು ಸಾಲನ್ನು ಶಿಕ್ಷಕರು ಇನ್ನೊಂದು ಸಾಲನ್ನು ಮಕ್ಕಳು ಹಾಡಲಿ.

ಚರ್ಚೆಗೆ ಬಳಸಬಹುದಾದ ಪ್ರಶ್ನೆಗಳು :

1. ರಸ್ತೆಯಲ್ಲಿ ಓಡುವುದು ಒಳ್ಳೆಯದೆ?

2. ರಸ್ತೆಯಲ್ಲಿ ಓಡಿದರೆ ಏನಾಗಬಹುದು?

3. ನೀವು ಶಾಲೆಗೆ ಹೇಗೆ ಬರುತ್ತೀರಿ?

4. ಹಿರಿಯರ ಕೈ ಹಿಡಿದು ರಸ್ತೆ ದಾಟುವ ಬಗ್ಗೆ ಏನು ಯೋಚಿಸುತ್ತೀರಿ?

5. ನೀವು ಒಬ್ಬಂಟಿಯಾಗಿ ನಡೆಯುವಾಗ ನೀವು ರಸ್ತೆಯನ್ನು ಹೇಗೆ ದಾಟುತ್ತೀರಿ? ಇತ್ಯಾದಿ.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

      2ನೇ ಅವಧಿ *ನನ್ನ ಸಮಯ*

   ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

3ನೇ ಅವಧಿ *ಬುನಾದಿ ಸಂಖ್ಯಾಜ್ಞಾನ* ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ*

ಸಾಮರ್ಥ್ಯ : ಪರಿಸರದ ಅರಿವು-ಪ್ರಕೃತಿ

ಚಟುವಟಿಕೆ...43 ಬಿ ಪ್ರಾಣಿಗಳ ಹೆಸರಿನ ಮೊದಲ ಅಕ್ಷರ ಹೇಳುವುದು (ಗುರಿ 3)

ಉದ್ದೇಶ:- ಪ್ರಾಣಿಗಳ ಮೊದಲನೆಯ ಅಕ್ಷರ ಗುರುತಿಸಿ ಹೆಸರನ್ನು ಹೇಳುವುದು.

ಅಗತ್ಯ ಸಾಮಗ್ರಿಗಳು : ವಿವಿಧ ಪ್ರಾಣಿಗಳ ಕನ್ನಡ ಮತ್ತು ಇಂಗ್ಲೀಷ್ ಹೆಸರುಗಳ ಪಟ್ಟಿ

ವಿಧಾನ : ವಿವಿಧ ಪ್ರಾಣಿಗಳ ಹೆಸರು ಇರುವ ಪಟ್ಟಿಯನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ನೀಡಿ ಅವುಗಳ ಹೆಸರಿನ ಮೊದಲ ಅಕ್ಷರ ಉಚ್ಚರಿಸಲು ಹೇಳುವುದು.

ಉದಾ: ಆಡು-ಆ, ಎತ್ತು-ಎ ಅದೇ ರೀತಿ .     C For CAT     D For DOG     ಇತ್ಯಾದಿ

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* 

(ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಆಕಾರಗಳ ಪರಿಕಲ್ಪನೆ.

ಚಟುವಟಿಕೆ:-ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು ಗುರಿ –1

ಉದ್ದೇಶ;

👉ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುತ್ತದೆ.

👉ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತದೆ.

👉ಸ್ಥಳದ ಪರಿಕಲ್ಪನೆಯನ್ನು ತಿಳಿಯುತ್ತಾರೆ.

ಸಾಮಗ್ರಿಗಳು : ಬಣ್ಣ, ಹಲ್ಲುಜ್ಜುವ ಬ್ರಶ್, ಬಿಳಿಹಾಳೆ, ವಿವಿಧ ಚಿತ್ರಗಳು [ ಅಕ್ಷರ,ಅಂಕಿ, ಪ್ರಾಣಿ ಮತ್ತು ಪಕ್ಷಿಗಳು]

ವಿಧಾನ:-

💎ಮಕ್ಕಳನ್ನು 3-4 ರಂತೆ ಗುಂಪು ಮಾಡಿ ಕೂರಿಸುವುದು.

💎ಪ್ರತಿ ಗುಂಪಿಗೂ ಬಣ್ಣ ಹಾಳೆ, ಬ್ರಶ್ ಹಾಗೂ ವಿವಿಧ ಚಿತ್ರಗಳನ್ನು ನೀಡುವುದು.

💎ಅದರಲ್ಲಿ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡು ಬಿಳಿಹಾಳೆಯ ಮೇಲೆ ಇಡುವುದು.

💎ತನಗೆ ಇಷ್ಟವಾದ ಬಣ್ಣವನ್ನು ಬ್ರಶ್ ನಿಂದ ಅದ್ದಿ ಚಿತ್ರದ ಸುತ್ತಲೂ ಸ್ಪ್ರೇ ಮಾಡುವುದು.

💎ನಂತರ ಚಿತ್ರವನ್ನು ತೆಗೆದಾಗ ಅಲ್ಲಿ ಮೂಡಿರುವ ಚಿತ್ರ ನೋಡಿ ಸಂತಸಪಡುತ್ತಾರೆ.

ಅ.ಹಾ:-HW-15 ಯಾವ ಪಕ್ಷಿಗೆ ಯಾವ ಆಹಾರ?

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*

 *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.

ಚಟುವಟಿಕೆ-20 ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) ECL-2 (64 ನೇ ದಿನದಿಂದ ಮುಂದುವರೆದಿದೆ.)

ಉದ್ದೇಶಗಳು:-

🌐ಧ್ವನಿ ಸಂಕೇತಗಳ ಅರಿವು ಮೂಡಿಸುವುದು.

🌐ಅಕ್ಷರಗಳು ಮತ್ತು ಪದಗಳ ನಡುವಿನ ಸಹ ಸಂಬಂಧವನ್ನು ಗ್ರಹಿಸುವುದು.

🌐ಪದಗಳನ್ನು ಗ್ರಹಿಸಿ ಗುರುತಿಸುವುದು.

🌐ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.

ಅಗತ್ಯ ಸಾಮಗ್ರಿಗಳು- ಇಲ್ಲ

ಸಲಹಾತ್ಮಕ ವಿಷಯ : ಉಡುಪುಗಳು

ವಿಧಾನ:-

🟢 ಸುಳಿವುಗಳ ಮೂಲಕ ಉಡುಪುಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ.

ಉದಾ :- ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ ಉಡುಪನ್ನು ನಾವು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತೇವೆ..

 ಅದರ ಹೆಸರು ಸ್ವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ಸೈಟರ್ ಎಂದು ಗುರುತಿಸುವುದು.

 ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.

ಅ.ಹಾ: EC-20 ಋತುಮಾನ ಪತ್ತೆ ಹಚ್ಚು

                 *  *ಅರ್ಥ ಗ್ರಹಿಕೆಯೊಂದಿಗೆ ಓದು* 

ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅಕ್ಷರಗಳನ್ನು ಗುರುತಿಸುವುದು, ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ

ಚಟುವಟಿಕೆ...27 (ಗುರಿ-2) ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸುವುದು.

ಉದ್ದೇಶ: 💎ಆಕಾರಗಳ ಆಧಾರದ ಮೇಲೆ ಅಕ್ಷರಗಳನ್ನು ಗುರುತಿಸುವುದು.

💎 ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸಿ ಓದುವುದು.

ಅಗತ್ಯ ಸಾಮಾಗ್ರಿಗಳು : ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ, ಅಕ್ಷರಗಳ ಆಕಾರ ಇತ್ಯಾದಿ

ವಿಧಾನ :-

☢️ಮಕ್ಕಳಿಗೆ ಕಲಿಕೆಯು ಆಸಕ್ತಿದಾಯಕವಾಗಲು ಹಿಂದಿನ ತರಗತಿಯಲ್ಲಿ ಬಳಸಿರುವ ಸಾಮಾಗ್ರಿಗಳನ್ನು

ಹೊರತು ಪಡಿಸಿ ಸಾಮಾಗ್ರಿಗಳನ್ನು ಬಳಸುವುದು.

☢️ ಹಿಂದಿನ ಅವಧಿಯಲ್ಲಿ ಬಳಸಿರುವ ತರಗತಿಯಲ್ಲಿರುವ ವಸ್ತುಗಳ ಹಾಗೂ ಮಕ್ಕಳ ಹೆಸರುಗಳಲ್ಲಿರುವ ಅಕ್ಷರಗಳನ್ನು ಹೊರತು ಪಡಿಸಿ ಗುರುತಿಸಲು ತಿಳಿಸುವುದು.

☢️ಗುರುತಿಸಿದ ಅಕ್ಷರಗಳನ್ನು ಅದರ ಧ್ವನಿಯೊಂದಿಗೆ ಸಂಯೋಜಿಸುವುದು.

☢️ವಿವಿಧ ವಸ್ತುಗಳನ್ನು ಬಳಸಿ( ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ) ಅಕ್ಷರಗಳ ಆಕಾರಗಳ ಕಲ್ಪನೆಯನ್ನು ಮೂಡಿಸುವುದು.

☢️ಮರಳು ಮತ್ತು ಮಣ್ಣಿನ ಮೇಲೆ ಅಕ್ಷರಗಳನ್ನು ಅಭ್ಯಾಸ ಮಾಡಿಸುವುದು.

☢️ಅಕ್ಷರಗಳನ್ನು ಬರೆದು, ಅಕ್ಷರಗಳ ಒಳಗೆ ಬಣ್ಣತುಂಬಲು ಹೇಳುವುದು.

☢️ನೆಲದ ಮೇಲೆ ನೀರಿನಿಂದಅಕ್ಷರದ ಆಕಾರಗಳನ್ನು ರಚಿಸುವುದು.

☢️ ಕಾಗದ ಮತ್ತು ಪೆನ್ಸಿಲ್ ಗಳನ್ನು ಹೊರತುಪಡಿಸಿ ಅಕ್ಷರಗಳನ್ನು ಓದಲು ಅವಕಾಶ ಕಲ್ಪಿಸುವುದು.

☢️ಸ್ಪಷ್ಟವಾದ ಉಚ್ಚಾರದೊಂದಿಗೆ ಪದಗಳ ವೇಗವನ್ನು ಹೆಚ್ಚಿಸುವುದು.

☢️ಅಕ್ಷರಗಳ ಧ್ವನಿಗಳಿಗೆ ಒತ್ತು ನೀಡುವುದು.

☢️ಪರಿಚಿತ ಪದಗಳೊಂದಿಗೆ ಅವುಗಳನ್ನು ಸಂಬಂಧೀಕರಿಸಿ ಹೇಳಿಸುವುದು.

*ಉದ್ದೇಶಿತ ಬರೆಹ *

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ

ಚಟುವಟಿಕೆ: ಹವಾಮಾನ ನಕ್ಷೆ (ಗುರಿ-2) ECW-16 (64 ನೇ ದಿನದಿಂದ ಮುಂದುವರೆದಿದೆ)

ಉದ್ದೇಶಗಳು:

✏️ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.

✏️ವೀಕ್ಷಣಾ ಕೌಶಲವನ್ನು ಬೆಳೆಸುವುದು.

✏️ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.

✏️ಪರಿಸರ ಪ್ರಜ್ಞೆ ಮೂಡಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್

ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.

📝ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶೀಸುವುದು.

📝ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಲು ತಿಳಿಸುವುದು.

📝ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ನಿನ್ನೆ-ಇಂದಿನ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು.

📝ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು.

*ಬರವಣಿಗೆಯ ಮಾದರಿ*

    ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

   ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

6ನೇ ಅವಧಿ *ಹೊರಾಂಗಣ ಆಟಗಳು*

ಚಟುವಟಿಕೆ :-ರಿಂಗ್ ಮಾಸ್ಟರ್

ಸಾಮರ್ಥ್ಯ: *ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ.

*ಅನುಕರಣ ಮತ್ತು ಕಲ್ಪನಾ ಶಕ್ತಿ ಬೆಳೆಸುವುದು.

ಬೇಕಾಗುವ ಸಾಮಗ್ರಿ: ಪ್ರಾಣಿಗಳ ಚಿತ್ರಗಳು

ವಿಧಾನ:

🔆ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸುವುದು .

🔆ಶಿಕ್ಷಕರು ಯಾವ ಪ್ರಾಣಿಯ ಹೆಸರು ಹೇಳುವರೋ ಆ ಪ್ರಾಣಿಯಂತೆ ಕೂಗಲು ಸೂಚಿಸುವುದು

ಉದಾ : ನಾಯಿ, ಬೌ ಬೌ.🐕🐕

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

7ನೇ ಅವಧಿ *ಕಥಾ ಸಮಯ*

         ಶೀರ್ಷಿಕೆ : ಟೋ ಟೋ & ದ ಕ್ಯಾಪ್

ಸಾಮಗ್ರಿಗಳು : ಬೆರಳು ಗೊಂಬೆಗಳು

ಉದ್ದೇಶ :

> ಆಲಿಸುವ ಸಾಮರ್ಥ್ಯ ಬೆಳೆಸುವುದು.

> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು

> ಸೃಜನ ಶೀಲತೆಯನ್ನು ಬೆಳೆಸುವುದು.

> ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.

> ಪದ ಸಂಪತ್ತನ್ನು ಹೆಚ್ಚಿಸುವುದು.

ವಿಧಾನ :

> 🎎 ಶಿಕ್ಷಕರು ಮಾತೃಭಾಷೆ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಥೆಯನ್ನು ಅರ್ಥೈಸುವುದು.

> 🎎ಕಥೆಯ ಪಾತ್ರಗಳನ್ನು ಶಿಕ್ಷಕರು/ಹಿರಿಯ ವಿದ್ಯಾರ್ಥಿಗಳು ಹೆಸರಿಸುವಾಗ ಕಿರಿಯ ವಿದ್ಯಾರ್ಥಿಗಳು ಪಾತ್ರಗಳ ಚಿತ್ರಗಳನ್ನು ತೋರಿಸಲು ಕೇಳುವುದು.

> 🎎ಬೆರಳು ಗೊಂಬೆಗಳನ್ನು ಪ್ರದರ್ಶಿಸಿ ಅವುಗಳ ಹೆಸರುಗಳನ್ನು ಒಮ್ಮೆ ಮಾತೃಭಾಷೆಯಲ್ಲಿ ನಂತರ ಇಂಗ್ಲೀಷ ಭಾಷೆಯಲ್ಲಿ ಹೇಳಿ ಪರಿಚಯಿಸುವುದು.

> 🎎ಶಿಕ್ಷಕರು ಬೆರಳುಗೊಂಬೆಗಳನ್ನು ಪ್ರದರ್ಶಿಸಿ ಸಂಭಾಷಣೆ ರೂಪದಲ್ಲಿ ಹೇಳುವುದು.

👍ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ, (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

              ಕಥೆ : TOTO AND THE CAP

  This is Toto, the baby cat. He lives with Papa cat and Mama Cat. Papa cat has a cap. Mama cathas a cap.

 Toto also wanted a cap. Papa cat said "baby cats do not wear caps". One day, Papacat was going out. He hid the cap in a pot. He put the pot on the cot and went out. Toto cat got on to the cot, put his hand in the pot and pulled out the cap. Toto cat put the cap on his head. He was very happy.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

8ನೇ ಅವಧಿ *ಮತ್ತೆ ಸಿಗೋಣ*

🔶ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ.

🔷 ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

🔶ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ.

                            - : ಗಮನಿಸಿ :-

🙋‍♂️ಕಲಿಕಾ ಫಲಗಳನ್ನು ಪರಿಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ

🙋‍♀️ನಿಮ್ಮ ಮಕ್ಕಳು 1ನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು ಮನದಟ್ಟುಮಾಡಿ.

🙋‍♂️1ನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು ಸಿದ್ಧರಾಗಿ

🙋‍♀️ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಿ.

[ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]

           

🙏🙏🙏🙏🙏🙏.        
ಮಲ್ಲಿಕಾರ್ಜುನ್ ಬಡಿಗೇರ್.    
ನಲಿಕಲಿ ಶಿಕ್ಷಕರು.             
ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ
ಹೊನ್ನಾಳಿ(ತಾ) ದಾವಣಗೆರೆ (ಜಿ)

9535633529.          

             👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇              👉👉👉 ಕ್ಲಿಕ್ ಮಾಡಿ 👈 👈 👈 

**********************************************************************  

   ವಿದ್ಯಾ ಪ್ರವೇಶದ ಪ್ರತಿದಿನದ ಚಟುವಟಿಕೆಗಳ ಮಾಹಿತಿಯನ್ನು ಪ್ರತಿದಿನ  ನಮ್ಮ ನಲಿಕಲಿ ಶಾಲೆ ಬ್ಲಾಗ್ ನ ಮುಖಾಂತರ ವೀಕ್ಷಿಸಿದ ನನ್ನೆಲ್ಲಾ ಆತ್ಮೀಯ ನಲಿ ಕಲಿ 
🙏🙏ವೃತ್ತಿ ಭಾಂದವರಿಗೆ ಹೃದಯಪೂರ್ವಕ ಧನ್ಯವಾದಗಳು🙏🙏