👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇👉👉👉 ಕ್ಲಿಕ್ ಮಾಡಿ 👈 👈 👈**********************************************************************ವಿದ್ಯಾ ಪ್ರವೇಶ 31ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 55ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ 1- ಮಕ್ಕಳು ನಿಧಾನವಾಗಿ ಓಡುತ್ತಾ ತರಗತಿಯನ್ನು ಪ್ರವೇಶಿಸಲಿ. (slow motion) 1. ರಾಕೆಟ್ ಚಪ್ಪಾಳೆಯನ್ನು ಹೇಳಿಕೊಡುವುದು. 2.ಮಕ್ಕಳು ರಾಕೆಟ್ ಚಪ್ಪಾಳೆ ತಟ್ಟುತ್ತಾ ತರಗತಿಯಲ್ಲಿ ವೃತ್ತಾಕಾರವಾಗಿ ನಿಲ್ಲುವುದು.
ಮಾತುಕತೆ: ಚಟುವಟಿಕೆ : ಚಿಹ್ನೆಗಳು ಸಾಮಗ್ರಿ : ವಿವಿಧ ಚಿಹ್ನೆಗಳ ಫ್ಲಾಶ್ ಕಾರ್ಡುಗಳು ವಿಧಾನ: • ಮಕ್ಕಳನ್ನು ವೃತ್ತ ಅಥವಾ
ಅರ್ಧವೃತ್ತಾಕಾರದಲ್ಲಿ ಕೂರಿಸಿ, • ಶಿಕ್ಷಕರು ಚಿತ್ರವನ್ನು ತೋರಿಸುತ್ತಾರೆ
ಮತ್ತು ಚಿಹ್ನೆಯನ್ನು ಊಹಿಸಲು ಮಕ್ಕಳಿಗೆ ಕೇಳುತ್ತಾರೆ. ಉದಾ : ಕುಡಿಯುವ ನೀರು, ಅಪಾಯ,
ಹ್ಯಾಂಡ್ ವಾಷ್, ಶೌಚಾಲಯ.ಮುಂದೆ ಪ್ರತಿ ಮಗುವೂ ನಿಂತು ಚಿಹ್ನೆಗಳು ಅಥವಾ ಸಹಿಯ ಫ್ಲ್ಯಾಶ್
ಕಾರ್ಡ್ ಗಳನ್ನು ತೋರಿಸಬೇಕು ಮತ್ತು ಊಹಿಸಲು ತಮ್ಮ ಸ್ನೇಹಿತರಿಗೆ ಕೇಳಬೇಕು. • ಶಿಕ್ಷಕರು ಪ್ರತಿ ಮಗುವಿಗೆ ಅವಕಾಶ
ನೀಡಬೇಕು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ
ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️
3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ*ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* ಸಾಮರ್ಥ್ಯಗಳು:- ಹಗುರ,
ಭಾರದ ಪರಿಕಲ್ಪನೆಯೊಂದಿಗೆ ಹೋಲಿಸುವುದು ಚಟುವಟಿಕೆ : ಹೋಲಿಕೆ – ಭಾರ ಮತ್ತು ಹಗುರ ( ಗುರಿ-3 ) ಉದ್ದೇಶ:- ಭಾರ ಮತ್ತು ಹಗುರಗಳಿಗೆ ಹೋಲಿಕೆ
ಮಾಡುವುದು. ಸಾಮಗ್ರಿಗಳು: ಹತ್ತಿಚೆಂಡು, ಟೆನ್ನಿಸ್ ಬಾಲ್ /
ಫುಟ್ ಬಾಲ್, ಕಲ್ಲು, ಕಬ್ಬಿಣ, ಹತ್ತಿ ಬಟ್ಟೆ (ಹತ್ತಿಚೆಂಡು ಮತ್ತು ಫುಟ್ ಬಾಲ್ / ಟೆನಿಸ್ ಚೆಂಡಿನ ಗಾತ್ರವು ಒಂದೇ ತೆರನಾಗಿರಬೇಕು.) ವಿಧಾನ : 👉ಮಕ್ಕಳಿಗೆ ಎರಡೂ ಚೆಂಡುಗಳನ್ನು
ಕೈಯಲ್ಲಿ ಎತ್ತಿ ಹಿಡಿಯಲು ಹೇಳುವುದು. 👉 ಹಗುರ ಯಾವುದು? ಭಾರ ಯಾವುದೆಂದು ಕೇಳುವುದು. 👉ಭಾರ ಮತ್ತು ಹಗುರಕ್ಕೆ ಹೋಲಿಕೆ ಮಾಡಲು ಹೇಳುವುದು ಮತ್ತು ಮಕ್ಕಳು ಅವುಗಳನ್ನು ಗುರುತಿಸಲು ಹೇಳುವುದು. 📖ಅ.ಹಾ:-IL-17 ಇವರಿಬ್ಬರಲ್ಲಿ
ಯಾರು ಭಾರ? ಯಾರು ಹಗುರ? ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ: ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಆಕಾರಗಳ ಪರಿಕಲ್ಪನೆ. ಚಟುವಟಿಕೆ: ಟ್ರೇಸ್ ಮಾಡುವುದು. (ಗುರಿ - 1) ಉದ್ದೇಶಗಳು: 🎯 ಸೂಕ್ಷ್ಮ ಸ್ನಾಯುಗಳ
ಅಭಿವೃದ್ಧಿಯಾಗುವುದು. 🎯ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು
ಸಾಧ್ಯವಾಗುವುದು. 🎯 ಅಕ್ಷರಗಳ ಆಕಾರಕ್ಕೆ ಅನುಗುಣವಾಗಿ
ಚಿತ್ರಗಳನ್ನು ಊಹಿಸುವುದು. 📖ಅ.ಹಾ:-HW-12 ಹೊಂದಿಸು. ಸಾಮಗ್ರಿಗಳು : ಮರಳು. ವಿಧಾನ: ಮಕ್ಕಳು ತಾವು ತಿದ್ದಿದ ಅಕ್ಷರಗಳಿಗೆ
ಚಿತ್ರಗಳನ್ನು ರಚಿಸಲು ಹೇಳುವುದು ಮತ್ತು ಸಂಖ್ಯೆಗಳಿಗನುಗುಣವಾಗಿ ವಸ್ತುಗಳನ್ನು ಜೋಡಿಸುವುದು. ಮಕ್ಕಳಿಗೆ ತಮಗೆ ಗೊತ್ತಿರುವ
ಕನ್ನಡ,ಇಂಗ್ಲೀಷ್ ಹಾಗೂ ಅಂಕಿಗಳಿಂದ ಚಿತ್ರ ರಚಿಸಲು ಪ್ರೋತ್ಸಾಹಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು
ಮತ್ತು ಮಾತನಾಡುವುದು* ಸಾಮರ್ಥ್ಯ : ಆಲಿಸುವಿಕೆ, ಸೃಜನಾತ್ಮಕ,
ಸ್ವ-ಅಭಿವ್ಯಕ್ತಿ, ಔಪಚಾರಿಕ ಮಾತುಗಾರಿಕೆ, ಚಟುವಟಿಕೆ: ಆಶುಭಾಷಣ (ಗುರಿ-2) ಉದ್ದೇಶಗಳು : ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ
ಮಾತನಾಡುವುದು. * ಔಪಚಾರಿಕ ಮಾತುಗಾರಿಕೆಯ ಕೌಶಲವನ್ನು ಬೆಳೆಸುವುದು. * ಆಲಿಸಿದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು
ಹೇಳುವುದು. * ಸೃಜನಾತ್ಮಕ ಸ್ವ-ಅಭಿವ್ಯಕ್ತಿಗೆ
ಅವಕಾಶ ಕಲ್ಪಿಸುವುದು. ಸಾಮಗ್ರಿಗಳು : ಪ್ರಾಣಿ, ಪಕ್ಷಿ, ವಾಹನಗಳ ಚಿತ್ರಗಳ
ಮಿಂಚುಪಟ್ಟಿಗಳು ವಿಧಾನ : 🔳 ಡಬ್ಬದಲ್ಲಿ ಪ್ರಾಣಿ, ಪಕ್ಷಿ,
ವಿವಿಧ ವಾಹನಗಳ ಚಿತ್ರಗಳ ಮಿಂಚುಪಟ್ಟಿಗಳನ್ನು ಹಾಕುವುದು. 🔳 ಮಕ್ಕಳಿಗೆ ಡಬ್ಬದಲ್ಲಿ ಕೈ ಹಾಕಿ
ಯಾವುದಾದರೂ ಒಂದು ಮಿಂಚುಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿರುವ ಚಿತ್ರದ ಬಗ್ಗೆ ತಮ್ಮದೇ
ಮಾತುಗಳಲ್ಲಿ ಹೇಳಲು ಅವಕಾಶ ನೀಡುವುದು.
*ಅರ್ಥ ಗ್ರಹಿಕೆಯೊಂದಿಗೆ ಓದು* ಸಾಮರ್ಥ್ಯ: ಮುದ್ರಿತ
ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ
ಅರಿವು. ಚಟುವಟಿಕೆ :-ಚಿತ್ರ ಸಂಪುಟ (ಗುರಿ-2) ವಿಷಯ: ನೀರಿನ ಆಕರಗಳು ಮತ್ತು ಅವುಗಳಲ್ಲಿ ನೋಡಬಹುದಾದ ಪ್ರಾಣಿಗಳು/ಪಕ್ಷಿಗಳು/ ವಸ್ತುಗಳು, ಉದ್ದೇಶ : 🔆ಮಕ್ಕಳು ಗುಂಪಿನಲ್ಲಿ ಕುಳಿತು ತಯಾರಿಸಿದ ಗೋಡೆ ಪತ್ರಿಕೆಗಳನ್ನು ರಚಿಸಿ ಮಂಡಿಸುವುದು ಅಗತ್ಯ ಸಾಮಗ್ರಿಗಳು : ಚಾರ್ಟ್‌ಗಳು, ಸ್ವರಚಿತ ಚಿತ್ರಗಳು, ಕ್ರೇಯಾನ್ಸ್, ಅಂಟು, ಸ್ಟೇಲ್, ಟ್ಯಾಗ್ ವಿಧಾನ : 🔷ಮಕ್ಕಳು ಗುಂಪುಗಳಲ್ಲಿ ಅಗತ್ಯ ಸಾಮಗ್ರಿ ಬಳಸಿ ನೀರಿನ ಆಕರಗಳು ಮತ್ತು ಅವುಗಳಲ್ಲಿ ನೋಡ ಬಹುದಾದ ಪ್ರಾಣಿಗಳು ಪಕ್ಷಿಗಳು/ ವಸ್ತುಗಳ ಬಗ್ಗೆ ಗೋಡೆ ಪತ್ರಿಕೆ ತಯಾರಿಸಲು ಅಗತ್ಯ ಸಹಾಯ ನೀಡುವುದು. 🔷ರಚಿಸಿದ ಗೋಡೆಪತ್ರಿಕೆಯನ್ನು ತರಗತಿಯಲ್ಲಿ ಮಂಡಿಸಲು ಅವಕಾಶ ನೀಡುವುದು. 🔷ಸಿದ್ಧವಾದ ಗೋಡೆಪತ್ರಿಕೆಗಳನ್ನು ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.
*ಉದ್ದೇಶಿತ ಬರೆಹ * ಸಾಮರ್ಥ್ಯ:-ಸಾಮರ್ಥ್ಯ:
ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ
ಅರ್ಥಮಾಡಿಕೊಳ್ಳುವುದು,ಪರಿಸರದ ಅರಿವು. ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2) ಉದ್ದೇಶಗಳು: 💎ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು
ಅವಕಾಶ ನೀಡುವುದು. 💎ಸೃಜನಶೀಲ ಚಿಂತನೆಯನ್ನು ಬೆಳೆಸುವುದು. 💎ಪರಿಸರದ ಅರಿವು ಮೂಡಿಸುವುದು. 💎ಪದಸಂಪತ್ತನ್ನು ಹೆಚ್ಚಿಸುವುದು. 💎ಸೂಚನೆಗಳನ್ನು ಆಲಿಸಿ ಅರ್ಥ
ಮಾಡಿಕೊಳ್ಳುವುದು. ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದ,
ಕ್ರೇಯಾನ್ಸ್, ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ
ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು
ಪಟ್ಟಿಮಾಡಲು ತಿಳಿಸಿ. ಸೂಚಿತ ವಿಷಯ: ತಿಂಡಿಗಳು ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್‌ಪೇಪರ್‌ನಲ್ಲಿ
ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. ಈ ಚಾರ್ಟ್‌ನಲ್ಲಿ
ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸುವುದು. ಮಕ್ಕಳು ಇವುಗಳನ್ನು ನೋಡಲು ಹಾಗೂ
ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು. *ಬರವಣಿಗೆಯ ಮಾದರಿ* ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ
ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ
ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* ಚಟುವಟಿಕೆ : ಹಗ್ಗದ
ಆಟ ಸಾಮರ್ಥ್ಯ: ಚುರುಕುತನ, ಕ್ಷಿಪ್ರ ಚಲನೆಯ ಅಭಿವೃದ್ಧಿ ಸಾಮಗ್ರಿ: ಸ್ಕಿಪ್ಪಿಂಗ್ ರೋಪ್ ವಿಧಾನ : 🧚🧚♂️ಇಬ್ಬರು
ಮಕ್ಕಳು ಹಗ್ಗದ ಎರಡು ತುದಿಗಳನ್ನು ಹಿಡಿದು ಎದುರು ಬದುರಾಗಿ ಕೂರುವುದು . 🧚♀️🧚♀️ಉಳಿದ ಮಕ್ಕಳು
ಓಡಿ ಬಂದು ಹಗ್ಗದ ಮೇಲಿನಿಂದ ನೆಗೆಯಲು ಸೂಚಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ
ಸಮಯ* ಶೀರ್ಷಿಕೆ » ಕೊಕ್ಕರೆ
ಮತ್ತು ಏಡಿ ಸಾಮಗ್ರಿಗಳು
: ಕಥೆಯ ಸಾಹಿತ್ಯ ಉದ್ದೇಶಗಳು
: ಆಲಿಸುವ
ಸಾಮರ್ಥ್ಯ ಬೆಳೆಸುವುದು. ನಿರರ್ಗಳವಾಗಿ
ಮಾತನಾಡುವ ಕೌಶಲ ರೂಢಿಸುವುದು. ವಿಧಾನ :
ಕಥಾ ಸಾಹಿತ್ಯ ನಿರೂಪಣೆ 👨🏫👩🏫ಶಿಕ್ಷಕರು
ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅಥೈಸಿಕೊಳ್ಳಬೇಕು. 👩🏫ಸೂಕ್ತ
ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿ ಕಥೆಯನ್ನು ಹೇಳಬೇಕು. 👨🏫ಕಥೆ
ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು. 👨🏫
ಸರಳ ಪ್ರಶ್ನೆಗಳು ಕೇಳಿ ಕಥೆಯನ್ನು ಅರ್ಥೈಸಬೇಕು. ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ. 👍ಕೊಕ್ಕರೆ
ಜೊತೆ ಯಾವ ಯಾವ ಪ್ರಾಣಿಗಳು ವಾಸಿಸುತ್ತಿದ್ದವು? 👍ಮೀನುಗಳನ್ನು
ತಿನ್ನಲು ಕೊಕ್ಕರೆ ಹೂಡಿದ ಉಪಾಯವೇನು? (ಕಥೆಯನ್ನು
ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ
*ಮತ್ತೆ ಸಿಗೋಣ* 🔚 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು
ಪುನರಾವರ್ತಿಸಿ/ನೆನಪಿಸಿ 🔚 ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ
ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. 🔚 ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು
ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. ಮುಂದಿನ ವಾರದಲ್ಲಿ “ಹೊರಸಂಚಾರಕ್ಕೆ
ಯೋಜನೆ” ರೂಪಿಸಿ ಮಕ್ಕಳು ವಿವಿಧ ಸಸ್ಯಗಳನ್ನು, ಮರಗಳನ್ನು ವೀಕ್ಷಿಸಲಿ ಇದಕ್ಕಾಗಿ ಅಗತ್ಯ ಸಿದ್ಧತೆ ತಯಾರಿ ಮಾಡಿಕೊಳ್ಳುವುದು. [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26] 🙏🙏🙏🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ). ದಾವಣಗೆರೆ(ಜಿ) 9535633529. ********************************************
👉👉👉 ಕ್ಲಿಕ್ ಮಾಡಿ 👈 👈👈
|