👇ನಲಿ ಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👇 👉👉👉 ಕ್ಲಿಕ್ ಮಾಡಿ 👈 👈 👈**********************************************************************ವಿದ್ಯಾ ಪ್ರವೇಶ 28ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 51ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ 1- ಏಕ್- ದೋ -ಏಕ್ / 1-2-I-2 ಎಣಿಸುವ ಮೂಲಕ ಕದಮ್
ತಾಲ್ ಮಾಡುವ ಮೂಲಕ ಒಂದು ಸಾಲಿನಲ್ಲಿ ತರಗತಿಯನ್ನು ಪ್ರವೇಶಿಸಲು ಮಕ್ಕಳಿಗೆ ತಿಳಿಸಿ. ಚಟುವಟಿಕೆ 2: 1. ಮಳೆ ಚಪ್ಪಾಳೆ ಯನ್ನು ಹೇಳಿಕೊಡುವುದು. 2. ಮಕ್ಕಳು ಮಳೆ ಚಪ್ಪಾಳೆ ತಟ್ಟುತ್ತಾ ತರಗತಿಯಲ್ಲಿ ವೃತ್ತಾಕಾರವಾಗಿ ನಿಲ್ಲುವುದು. ಚಟುವಟಿಕೆ 3: 1. ದುಂಬಿ ಚಪ್ಪಾಳೆ ಯನ್ನು ಹೇಳಿಕೊಡುವುದು. 2. ಮಕ್ಕಳು ದುಂಬಿ ಚಪಾಳೆ ತಟ್ಟುತಾ ತರಗತಿಯಲ್ಲಿ
ವೃತ್ತಾಕಾರವಾಗಿ ನಿಲ್ಲುವುದು. ಮಾತುಕತೆ ಚಟುವಟಿಕೆ: ಪ್ರಕೃತಿ ನಡಿಗೆ ವಿಧಾನ: ಮಕ್ಕಳನ್ನು ಶಾಲಾ ಉದ್ಯಾನವನಕ್ಕೆ ಅಥವಾ ಹತ್ತಿರದ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ, ಅವರು ವಿವಿಧ ರೀತಿಯ ಗಿಡ ಮರಗಳನ್ನು ನೋಡಲು/ ಅನ್ವೇಷಿಸಲು ಅವಕಾಶ ಮಾಡಿಕೊಡಿ. ಅವುಗಳ ಕುರಿತು ಮಾತನಾಡಲು ಅವಕಾಶ ನೀಡಿ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 2ನೇ ಅವಧಿ *ನನ್ನ ಸಮಯ* ಕಲಿಕಾ ಸಿದ್ಧತಾ ಭಾಗವಾಗಿ 8
ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿ ಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. (ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ*ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) ಸಾಮರ್ಥ್ಯ: ತೂಕ ಮಾಡುವುದನ್ನು ತಿಳಿಯುವುದು. ಚಟುವಟಿಕೆ : ಪರಸ್ಪರ ತೂಕ ಮಾಡೋಣ ( ಗುರಿ-I) ಉದ್ದೇಶ:- ತೂಕ ಮಾಡುವುದನ್ನು ತಿಳಿಯುವುದು. ಸಾಮಗ್ರಿಗಳು : ತೂಕದ ಮಾಪಕ ವಿಧಾನ: ಒಂದು ಮಗು ತೂಕ ಮಾಪಕದ ಮೇಲೆ ನಿಲ್ಲಲಿ
ಮತ್ತು ಇನ್ನೊಂದು ಮಗು ತೂಕವನ್ನು ಗಮನಿಸಲಿ, ಅದನ್ನು ಶಿಕ್ಷಕರು ಒಂದೆಡೆ ದಾಖಲಿಸುವುದು. 👉ಹೀಗೆ ಪ್ರತಿ ಮಗುವಿನ ತೂಕದ ಬೆಳವಣಿಗೆಯ ಚಾರ್ಟ್ ನಿರ್ವಹಿಸಿ ತರಗತಿಯಲ್ಲಿ ಪ್ರದರ್ಶಿಸುವುದು. 👉ಆರೋಗ್ಯಕರ ಆಹಾರದ ಅಭ್ಯಾಸವನ್ನು
ಅನುಸರಿಸುವುದರಿಂದ ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ : ಕಷ್ಟವಿಲ್ಲದೇ
ದಾರದಿಂದ ಚಿತ್ರ ರಚನೆ ಮಾಡುವುದು. ಚಟುವಟಿಕೆ : ದಾರದಿಂದ ಚಿತ್ರ ರಚನೆ, ಗುರಿ - 1 ಉದ್ದೇಶಗಳು: 🟢ಸೂಕ್ಷ್ಮ ಸ್ನಾಯುಗಳ
ಅಭಿವೃದ್ಧಿಯಾಗುವುದು. 🟡ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು. 🟣ಕಷ್ಟವಿಲ್ಲದೇ ಚಿತ್ರ ರಚಿಸಬಹುದೆಂಬ ಆತ್ಮ
ವಿಶ್ವಾಸ ಮೂಡಿಸುವುದು. ಸಾಮಗ್ರಿಗಳು : ದಾರ, ಬಣ್ಣ ಮತ್ತು ಬಿಳಿಹಾಳೆ. ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು. ಪ್ರತಿ ಮಗುವಿಗೂ ಉದ್ದನೆಯ ಮೂರು ದಾರಗಳನ್ನು ನೀಡಿ, ಒಂದನ್ನು ಕೆಂಪು ಬೆಣ್ಣದಲ್ಲೂ ಇನ್ನೊಂದನ್ನು ನೀಲಿ ಬಣ್ಣದಲ್ಲೂ ಮತ್ತೊಂದನ್ನು ಹಳದಿ ಬಣ್ಣದಲ್ಲೂ ಅದ್ದಿ. ಮಡಿಸಿದ ಬಿಳಿಹಾಳೆಯ ಒಂದು ಭಾಗದಲ್ಲಿ ಬಣ್ಣದಲ್ಲಿ ಅದ್ದಿದ ದಾರಗಳನ್ನು ವಿವಿಧ ವಿನ್ಯಾಸಗಳಲ್ಲಿ ಹಾಕುವುದು ನಂತರ ಮಡಿಸಿದ ಇನ್ನೊಂದು
ಭಾಗವನ್ನು ಅದರ ಮೇಲೆ ಮುಚ್ಚಿ : ದಾರವನ್ನು ಎಳೆಯಬೇಕು. ಹಾಳೆಯನ್ನು ತೆರೆದು ನೋಡಿದಾಗ ಸುಂದರವಾದ ಚಿತ್ರ ಮೂಡಿಬರುತ್ತದೆ. ಇದೇ ರೀತಿ ಬೇರೆ ಬೇರೆ ಬಣ್ಣಗಳನ್ನು ಬಳಸಿ ಚಿತ್ರಮಾಡಬಹುದು. 📖 ಅ.ಹಾ: HW-11 ಯಾವ ದಾರಿ ನನ್ನದು? ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು
ಮತ್ತು ಮಾತನಾಡುವುದು* ಸಾಮರ್ಥ್ಯ : ಸೃಜನಾತ್ಮಕ ಸ್ವ-ಅಭಿವ್ಯಕ್ತಿ, ಧ್ವನಿ ವಿಜ್ಞಾನದ ಅರಿವು, ಪ್ರಾಸ ಪದಗಳ ಪರಿಕಲ್ಪನೆ, ಪದ ಸಂಪತ್ತಿನ ಅಭಿವೃದ್ಧಿ ಚಟುವಟಿಕೆ : ಹಾಡು ಪ್ರಾಸ ಗೀತೆ (ಗುರಿ : 2)
ECL-20 ಉದ್ದೇಶಗಳು: * ಅಭಿನಯಪೂರ್ವಕವಾಗಿ ಹಾಡುವುದು. *ಧ್ವನಿ ಉಚ್ಛಾರವನ್ನು ಗಮನಿಸುವುದು. *ಪ್ರಾಸ ಪದಗಳನ್ನು ಸಂಗ್ರಹಿಸುವುದು, ಅಗತ್ಯ ಸಾಮಗ್ರಿಗಳು : ಇಲ್ಲ ವಿಧಾನ :- 🔊ಹೊಸ ಅಭಿನಯ ಗೀತೆ, ಪ್ರಾಸಗೀತೆ, ಅಥವಾ ಪದ್ಯ ಹೇಳಿಕೊಡಲು ಮಕ್ಕಳೊಂದಿಗೆ ವೃತ್ತಾಕಾರವಾಗಿ ನಿಲ್ಲುವುದು. 🔊ಶಿಕ್ಷಕರು ಹೇಳಿಕೊಟ್ಟ ಅಭಿನಯ
ಗೀತೆ, ಪ್ರಾಸಗೀತೆ, ಅಥವ ಪದ್ಯವನ್ನು ಅನುಸರಿಸಿ ಪುನರುಚ್ಛಿಸಲು ತಿಳಿಸುವುದು. 🔊 ಹಾಡು ಮತ್ತು ಪ್ರಾಸಗೀತೆಯನ್ನು
ಹೇಳಿಕೊಡುವುದು 🔊ಭಾವಾಭಿನಯದೊಂದಿಗೆ ಹಾಡಿ ಮಕ್ಕಳನ್ನು
ರಂಜಿಸುವುದು. 🔊ಮಕ್ಕಳಿಗೆ ಪರಿಚಿತ ಹಾಡು, ಪ್ರಾಸಗೀತೆ
ಅಥವಾ ಪದ್ಯಗಳಿಗೆ ಸಂಬಂಧಿತ ಚಿತ್ರಪುಟಗಳನ್ನು ಪ್ರದರ್ಶಿಸುವುದು. 🔊ಹೊಸ ಪ್ರಾಸ ಪದ ಗುರುತಿಸಿ ಹೇಳಲು
ಮಕ್ಕಳನ್ನು ಪ್ರೇರೇಪಿಸುವುದು. 🔊ಹಾಡು, ಪ್ರಾಸಗೀತೆ, ಅಥವಾ ಪದ್ಯದಲ್ಲಿ
ಬರುವ ಪ್ರಮುಖ ಪಾತ್ರ, ವಸ್ತು, ಘಟನೆಗಳ ಬಗ್ಗೆ ಚರ್ಚಿಸುವುದು. 🐰ಮೊಲದ ಮರಿ ಮೊಲದ ಮರಿ ಮೊಲದ ಮರಿ ಆಡುಬಾರೆ 🐇ಚುಪಕೆ ಚುಪಕೆ ಚುಪಕೆ ಎಂದು ನೆಗೆದು ಬಾರೆ
*ಅರ್ಥ ಗ್ರಹಿಕೆಯೊಂದಿಗೆ ಓದು* ಸಾಮರ್ಥ್ಯ : ಪದ
ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ, ಚಟುವಟಿಕೆ : ಹೆಸರಿನ ಜಗತ್ತು (ಗುರಿ 2) ಉದ್ದೇಶ : ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು
ಲಿಪಿಸಂಕೇತಗಳೊಂದಿಗೆ ಸಹ ಸಂಬಂಧೀಕರಿಸಿಕೊಳ್ಳುವುದು. ಸಾಹಿತ್ಯ ಮತ್ತು ವಸ್ತು ಒಂದೇ ಇದೆ ಎಂಬ
ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು. ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್
ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ ಸುತ್ತಮುತ್ತಲಿನ ಸಾಮಾಗ್ರಿಗಳು ವಿಧಾನ 🔆ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ
ಸಾಮಾನ್ಯ/ ಪರಿಚಿತ ವಸ್ತುಗಳ ಹೆಸರನ್ನು ಪಟ್ಟಿ ಮಾಡುವುದು.ಉದಾ- ಮೇಜು,ಕುರ್ಚಿ, ಬಾಗಿಲು ಇತ್ಯಾದಿ. 🔆ಸಿದ್ಧಪಡಿಸಿದ ನಾಮ ಫಲಕಗಳನ್ನು ಆಯಾ
ವಸ್ತುಗಳ ಮೇಲೆ ಅಂಟಿಸುವುದು. 🔆ಇನ್ನೊಂದು ಸೆಟ್ ನಾಮ ಫಲಕಗಳ
ಮಿಂಚುಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳುವುದು. 🔆ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ
ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು. 🔆ಪದ ಉಚ್ಛರಿಸುತ್ತಾ ಆ ವಸ್ತುವಿನ ಬಳಿಗೆ
ಮಗು ಹೋಗಲು ತಿಳಿಸುವುದು. 🔆ಮಗು ಕನಿಷ್ಟ ನಾಲೈದು ವಸ್ತುಗಳನ್ನಾದರೂ
ಹೆಸರಿಸಲು ಅವಕಾಶ ಕಲ್ಪಿಸುವುದು. 🔆ಆ ಪದಗಳನ್ನು ಕಥೆಯಲ್ಲಿ ಗುರುತಿಸಲು
ಅವಕಾಶ ಕಲ್ಪಿಸುವುದು. 🔆ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ ಸಮಯದಲ್ಲಿ ಮಕ್ಕಳಿಗೆ ಗುರುತಿಸಿ ಓದಲು(ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸ *ಉದ್ದೇಶಿತ ಬರೆಹ * ಸಾಮರ್ಥ್ಯ : ಸೂಕ್ಷ್ಮ ಸ್ನಾಯು
ಚಲನಾ ಕೌಶಲಾಭಿವೃದ್ಧಿ, ಅಕ್ಷರಗಳನ್ನು ಗುರುತಿಸುವುದು. ಚಟುವಟಿಕೆ: ಚುಕ್ಕಿ ಸೇರಿಸು - ಅಂಕಿ ಬರೆ (ಗುರಿ:
2) ಉದ್ದೇಶಗಳು : •ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳನ್ನು
ಅಭಿವೃದ್ಧಿಪಡಿಸುವುದು. •ಅಕ್ಷರಗಳನ್ನು ಗುರುತಿಸುವುದು. •ಚುಕ್ಕಿಗಳಿಂದ ಅಂಕಿಗಳನ್ನು ರಚಿಸುವುದು ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಪೆನ್ಸಿಲ್,
ಕರಿ ಹಲಗೆ, ಸೀಮೆ ಸುಣ್ಣ ವಿಧಾನ:- ಮಕ್ಕಳಿಗೆ ಚುಕ್ಕಿ ಬಳಸಿ 1, 2, 3, 4, 5 ಈ ಅಂಕಿಗಳನ್ನು ಬರೆಯುವ ವಿಧಾನವನ್ನು ಬರೆದು ತೋರಿಸುವುದು. ಮಕ್ಕಳು 1, 2, 3, 4, 5, ಈ ಅಂಕಿಗಳ ಚುಕ್ಕಿಗಳನ್ನು ಸೇರಿಸಲು ಹೇಳುವುದು. *ಬರವಣಿಗೆಯ ಮಾದರಿ* ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ
ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️
ಚಟುವಟಿಕೆ : ಸಂಗೀತದ ಅಂಕೆಗಳು ಸಾಮರ್ಥ್ಯ : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ಸಾಮಗ್ರಿ : ಕುರ್ಚಿಗಳು ವಿಧಾನ : ಸಂಗೀತ ಕುರ್ಚಿಗಳ ವಿಧದಲ್ಲಿ ಆಟವನ್ನು ಆಡಿಸುವುದು . ಕುರ್ಚಿಗಳ ಮೇಲೆ ಅಂಕೆಗಳ ಕಾರ್ಡುಗಳನ್ನು ಇರಿಸುವುದು. ಶಿಕ್ಷಕರು ಒಂದು ಮಗುವಿನ ಹೆಸರು ಕರೆದಾಗ ಆ ಮಗು ಕುಳಿತ ಕುರ್ಚಿಯಲ್ಲಿ ಇಟ್ಟಿರುವ ಅಂಕೆ ಯಾವುದು ಎಂದು ಹೇಳಲು ಸೂಚಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ
ಸಮಯ* ಶೀರ್ಷಿಕೆ : ಗ್ರಾಂಡ್‌ಪಾಸ್ ಗಿಫ್ಟ್ ಸಾಮಗ್ರಿಗಳು---- ಉದ್ದೇಶಗಳು : 👉 ಆಲಿಸುವ ಸಾಮರ್ಥ್ಯ ಬೆಳೆಸುವುದು. 👉ಆಲೋಚನಾ ಶಕ್ತಿಯನ್ನು ವೃದ್ಧಿಸುವುದು 👉ಪ್ರಶ್ನಿಸುವ ಮನೋಭಾವ ಉಂಟು ಮಾಡುವುದು. 👉ಊಹಿಸುವ ಕೌಶಲವನ್ನು ಹೆಚ್ಚಿಸುವುದು. ವಿಧಾನ : 😀ಶಿಕ್ಷಕರು ಕಥೆಯ ಸಾಹಿತ್ಯವನ್ನು
ಪ್ರದರ್ಶಿಸಿ ಕಥೆಯನ್ನು ಮಾತೃಭಾಷೆಯಲ್ಲಿ ಹೇಳುವುದು. 😀ಹಿರಿಯ ವಿದ್ಯಾರ್ಥಿಗಳಿಗೆ ಕಥೆಯ
ಪಾತ್ರಗಳನ್ನು ಹೆಸರಿಸಲು ಹೇಳುವುದು. 😀 ಕಥೆಯ ಪಾತ್ರಗಳನ್ನು ಶಿಕ್ಷಕರು/ಹಿರಿಯ
ವಿದ್ಯಾರ್ಥಿಗಳು ಹೆಸರಿಸುವಾಗ ಕಿರಿಯ ವಿದ್ಯಾರ್ಥಿಗಳು ಪಾತ್ರಗಳ ಚಿತ್ರಗಳನ್ನು ತೋರಿಸಲು ಕೇಳುವುದು. 😀ಶಿಕ್ಷಕರು ಮಾತೃಭಾಷೆ ಮತ್ತು ಇಂಗ್ಲೀಷ
ಭಾಷೆಯಲ್ಲಿ ಕಥೆಯನ್ನು ಅರ್ಥೈಸುವುದು. 😀ಕಥಾ ಸಮಯವನ್ನು ಮನೋರಂಜನಾತ್ಮಕವಾಗಿ
ಸೃಜಿಸುವುದು. (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ
ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ *ಮತ್ತೆ ಸಿಗೋಣ* 🔚 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ ನೆನಪಿಸಿ. 🔚ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ, 🔚 ಮಕ್ಕಳು ಖುಷಿಯಿಂದ, ತಮಾಷೆಯಿಂದ ಇರುವ
ಚಟುವಟಿಕೆಗಳನ್ನು ನಿರ್ವಹಿಸಿ. ಉದಾ : 'ಮ' ಅಕ್ಷರದಿಂದ ಪ್ರಾರಂಭವಾಗುವ ವಸ್ತುಗಳ
ಹೆಸರುಗಳನ್ನು ಮನೆಯಿಂದ ತಿಳಿದುಕೊಂಡು ಬರಲಿ ಮತ್ತು ಮುಂದಿನವಾರ ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿ. ಮರುದಿನ ಮಕ್ಕಳು ಸಂತೋಷದಿಂದ
ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ. [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26] 🙏🙏🙏🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ). ದಾವಣಗೆರೆ(ಜಿ) 9535633529. *************************************
👉👉👉 ಕ್ಲಿಕ್ ಮಾಡಿ 👈 👈👈
|