|
ವಿದ್ಯಾ ಪ್ರವೇಶ 16ನೇ ದಿನ 👫👬👭👫👫👬👭👫👫👬👭👫 (ವಿ.ಪ್ರ 2022-23 ರ ಕೈಪಿಡಿಯ 27ನೇ ದಿನ) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 1ನೇ ಅವಧಿ *ಶುಭಾಶಯ ವಿನಿಮಯ* (ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ) ಚಟುವಟಿಕೆ 1: ನಾನು ತರಕಾರಿ ಅಗತ್ಯವಿರುವ ಸಾಮಗ್ರಿಗಳು: ವಿವಿಧ ರೀತಿಯ ತರಕಾರಿಗಳ ಚಿತ್ರ ಕಾರ್ಡ್‌ಗಳು, ವಿಧಾನ:-ವಿವಿಧ ರೀತಿಯ ತರಕಾರಿಗಳ ಚಿತ್ರಗಳನ್ನು ಒಂದೊಂದಾಗಿ ತೋರಿಸಿ ತೋರಿಸಿದ ಚಿತ್ರಗಳನ್ನು ನೋಡಲು ಮಕ್ಕಳಿಗೆ ತಿಳಿಸಿ ಮತ್ತು ತರಕಾರಿಯ ಹೆಸರು ಮತ್ತು ಅದರ ಬಣ್ಣವನ್ನು ಹೇಳುವ ಮೂಲಕ ತರಗತಿಗೆ ಪ್ರವೇಶಿಸಲು ಅವರಿಗೆ ತಿಳಿಸಿ. ಉದಾಹರಣೆಗೆ : ನಾನು ಕ್ಯಾರೆಟ್, ಕಿತ್ತಳೆ ಬಣ್ಣದ ಕ್ಯಾರೆಟ್. ಚಟುವಟಿಕೆ 2 🌀ತರಗತಿ ಪ್ರವೇಶಿಸಿದ ನಂತರ ವೃತ್ತಾಕಾರವಾಗಿ ನಿಲ್ಲುವಂತೆ ಸೂಚಿಸಿ. 🌀ಮಕ್ಕಳನ್ನು ಸ್ವಾಗತಿಸಿ “ಇವತ್ತು ಯಾವ ವಾರ? ಎಂದು ಮಕ್ಕಳನ್ನು ಕೇಳಿ ಮತ್ತು “ಇವತ್ತು ಯಾವ ವಾರ ಎಂಬ ಉತ್ತರ ನೀಡಲು ಪ್ರೋತ್ಸಾಹಿಸಿ. 🌀ಹವಾಮಾನದ ಬಗ್ಗೆ ಮಕ್ಕಳನ್ನು ಕೇಳಿ. 🌀ಹವಾಮಾನ ನಕ್ಷೆಯಲ್ಲಿ ಮಾರ್ಕ್ ಮಾಡಲು ಅವರಿಗೆ ತಿಳಿಸಿ.
ಮಾತುಕತೆ ಚಟುವಟಿಕೆ
: ಋತುಮಾನದ ಮಾತು ಅಗತ್ಯವಿರುವ
ಸಾಮಗ್ರಿಗಳು: ಋತುಮಾನದ ಉಡುಪುಗಳಿಗೆ ಸಂಬಂಧಿಸಿದ ಫ್ಲ್ಯಾಶ್ ಕಾರ್ಡ್‌ಗಳು. (ಹತ್ತಿ ಉಡುಪುಗಳು,ಸೈಟರ್ ಗಳು, ಟೋಪಿ, ಸಾಕ್ಸ್, ಮಳೆ ಕೋಟುಗಳು, ಕಾಫ್ ಗಳು, ಮಂಕಿ ಕ್ಯಾಪ್ ಗಳು) ವಿಧಾನ:-ರಿಮೋಟ್ ಆಟವನ್ನು ನಡೆಸಿ ಅಂದರೆ, ವೃತ್ತದ ಮಧ್ಯದಲ್ಲಿ ಒದಗಿಸಲಾದ ಫ್ಲ್ಯಾಶ್ ಕಾರ್ಡ್ ಗಳನ್ನು ಆರಿಸಲು ಮಗುವಿಗೆ ತನ್ನ ಸರದಿಯನ್ನು ನೀಡಲು ಟಿವಿ ರಿಮೋಟ್ ಬಳಸಿ, ಅವನು / ಅವಳು ಕೆಳಗಿನ ರಚನೆಯ ಮೂಲಕ ಮಾತನಾಡಬೇಕಾದ ಅವಕಾಶವನ್ನು ಯಾರು ಪಡೆಯುತ್ತಾರೆ. 1. ನಾನು
ಈ ಉಡುಪನ್ನು........ ಕಾಲದಲ್ಲಿ ಧರಿಸುತ್ತೇನೆ. 2. ನಾನು
ಈ ಸೀಸನ್ ನಲ್ಲಿ..........ಉಡುಪನ್ನು ಧರಿಸುತ್ತೇನೆ. 3. ಈ
ಋತುವಿನಲ್ಲಿ ಇದು ತುಂಬಾ ಬಿಸಿ/ಶೀತ/ಚಳಿ/ಮಳೆಗಾಲ ವಾಗಿರುತ್ತದೆ. 4. ನಾನು ಈ ಉಡುಪನ್ನು ಏಕೆ ಧರಿಸುತ್ತೇನೆ? ಎಲ್ಲಾ ಮಕ್ಕಳು ಅವರ ಸರದಿಯನ್ನು ಪಡೆಯುವವರೆಗೂ ಚಟುವಟಿಕೆ ಮುಂದುವರಿಯುತ್ತದೆ. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️
2ನೇ ಅವಧಿ *ನನ್ನ ಸಮಯ* (Free Indoor play) * ಕಲಿಕಾ ಸಿದ್ಧತಾ ಭಾಗವಾಗಿ 8 ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. * ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುವುದು. * ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು
ಅನುಕೂಲವಾಗುವಂತೆ ಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.) ಬಿಲ್ಡಿಂಗ್ ಬ್ಲಾಕ್ ಮೂಲೆ:- ಸಾಮರ್ಥ್ಯ
: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು. ಚಟುವಟಿಕೆ
: ರೈಲಿನ ಮಾದರಿ ರಚನೆ ಉದ್ದೇಶ
: ಬ್ಲಾಕ್‌ಗಳನ್ನು ನಿರ್ದೇಶನದಂತೆ ವ್ಯವಸ್ಥಿತವಾಗಿ ಜೋಡಿಸುವ ಕೌಶಲ್ಯ ಗಳಿಸುವುದು. ಸಾಮಗ್ರಿ :- ಕಲಿಕಾ ಕಿಟ್ ನ ಬಿಲ್ಡಿಂಗ್ ಬ್ಲಾಕ್ಸ್ (ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್ ಗಳು, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್ ಗಳು, ವಿವಿಧ ಅಳತೆಯ ಪುಸ್ತಕಗಳು) ವಿಧಾನ: ಲಭ್ಯ ಬ್ಲಾಕ್ಸ್ಗಳನ್ನು ರೈಲಿನ ಮಾದರಿಯಲ್ಲಿ ಜೋಡಿಸುವರು. ಗಣಿತ
ಮೂಲೆ:- ಸಾಮರ್ಥ್ಯ:
ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವರು ಹಾಗೂ ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು. ಉದ್ದೇಶ: * ಭಾರ ಹಾಗೂ ಹಗುರ ವಸ್ತುಗಳನ್ನು ವರ್ಗೀಕರಿಸುವುದು. ಸಾಮಗ್ರಿ
:- ಪ್ಲಾಸ್ಟಿಕ್ ಚೆಂಡು, ರಬ್ಬರ್ ಚೆಂಡು, ರಟ್ಟುಗಳು, ನಾಣ್ಯ, ಹತ್ತಿ ಈ ರೀತಿಯ ವಿವಿಧ ತೂಕದ
ವಸ್ತುಗಳು ವಿಧಾನ:- ನೀಡಲಾಗಿರುವ ಸಾಮಗ್ರಿಗಳನ್ನು ನೋಡಿ ಅನುಭವ ಹೊಂದಿದ ನಂತರ ಭಾರ -ಹಗುರ ವಸ್ತುಗಳಾಗಿ ವಿಂಗಡಿಸುವರು. ಅನ್ವೇಷಣೆ ಅಥವಾ ವಿಜ್ಞಾನ ಮೂಲೆ: ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು. ಚಟುವಟಿಕೆ: ನೀರಿನಲ್ಲಿ ಕರಗು ಉದ್ದೇಶ : ನೀರಿನಲ್ಲಿ ಕರಗುವಕರಗದ ವಸ್ತುಗಳನ್ನು ಗುರುತಿಸುವುದು. ಸಾಮಗ್ರಿ :- ಪಾರದರ್ಶಕ ಪ್ಲಾಸ್ಟಿಕ್ ಲೋಟಗಳು, ನೀರು, ಮರಳು, ಉಪ್ಪು, ಹರಳು, ಬಣ್ಣ ಇತ್ಯಾದಿ. ವಿಧಾನ:- *ಎರಡು ಪಾರದರ್ಶಕ ಲೋಟಗಳಲ್ಲಿ ಅರ್ಧದಷ್ಟು ನೀರನ್ನು ತುಂಬುವರು. *ಒಂದು ಲೋಟಕ್ಕೆ ಉಪ್ಪು ಹಾಗೂ ಇನ್ನೊಂದಕ್ಕೆ ಮರಳನ್ನು ಸೇರಿಸಿ ಕಲಕುವರು. *ಕೆಲವು ಕ್ಷಣಗಳ ನಂತರ ನೀರಿನಲ್ಲಿ ಕಾಣುವ ಬದಲಾವಣೆಗಳನ್ನು ಗಮನಿಸುವರು. ಗೊಂಬೆಗಳ ಮೂಲೆ : ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವರು. ಚಟುವಟಿಕೆ: ನಾನು ನನ್ನ ಗೊಂಬೆಯ ಸ್ವಚ್ಛತೆ. ಉದ್ದೇಶ : ಸ್ವಚ್ಛತೆಯ ಅರಿವು ಹೊಂದುವುದರೊಂದಿಗೆ ಒಳ್ಳೆಯ ಅಭ್ಯಾಸಗಳನ್ನು ಪ್ರದರ್ಶಿಸುವುದು. ಸಾಮಗ್ರಿ :- ಗೊಂಬೆ, ಕರವಸ್ತ್ರ, ಟವೆಲ್, ನೈಲ್ ಕಟ್ಟರ್, ಆಟಿಕೆ ಪ್ಲೇಟ್, ಬಾಚಣಿಗೆ, ನ್ಯಾಪಕಿನ್ (ಹೊದಿಕೆಯಂತೆ ಬಳಸಲು) ವಿಧಾನ: ಮಗು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅನುಸರಿಸುವ ಸ್ವಚ್ಛತಾ ಅಭ್ಯಾಸಗಳನ್ನು ಗೊಂಬೆಯೊಂದಿಗೆ ನಿರ್ವಹಿಸುವರು. (ಹಲ್ಲುಜ್ಜುವಿಕೆ,ಮುಖ ತೊಳೆಯುವಿಕೆ, ಉಗುರು ಕತ್ತರಿಸುವಿಕೆ, ತಿಂಡಿ ತಿನ್ನುವುದು, ಮಲಗುವುದು) ಈ ರೀತಿಯ ದೈನಂದಿನ ಒಳ್ಳೆಯ ಅಭ್ಯಾಸಗಳನ್ನು ಗೊಂಬೆಯೊಂದಿಗೆ ಪ್ರದರ್ಶಿಸುವರು. ಓದುವ | ತರಗತಿ ಗ್ರಂಥಾಲಯ ಮೂಲೆ : ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ.ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು. ಚಟುವಟಿಕೆ: “ಚಿತ್ರ ಓದು” ಉದ್ದೇಶ : ಭಿನ್ನತೆಯನ್ನು ಅರಿಯುವುದು ಮತ್ತು ಅಭಿವ್ಯಕ್ತಿಸುವುದು. ಸಾಮಗ್ರಿಗಳು: ವ್ಯತ್ಯಾಸಗಳನ್ನು ಹೊಂದಿರುವ ಎರಡು ಚಿತ್ರಗಳು ವಿಧಾನ :- 3 ರಿಂದ 4 ವ್ಯತ್ಯಾಸಗಳಿರುವ ಎರಡು ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವುಗಳಲ್ಲಿನ ವ್ಯತ್ಯಾಸಗಳನ್ನು ಮಾತಿನ ಮೂಲಕ ಅಭಿವ್ಯಕ್ತಿಸಲು ತಿಳಿಸುವರು. ಕರಕುಶಲ | ಕಲೆಗೊಂದು ನೆಲೆ ಮೂಲೆ ಸಾಮರ್ಥ್ಯ : ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬಳಸಿಕೊಳ್ಳುವರು. ಚಟುವಟಿಕೆ: “ಹಸ್ತ ಚಿತ್ರ" ಉದ್ದೇಶ : ಕಣ್ಣು-ಕೈಗಳ ಸಹಸಂಬಂಧ ಅರಿಯುವುದು ಸಾಮಗ್ರಿಗಳು: ಬಿಳಿಹಾಳೆ, ಪೆನ್ಸಿಲ್. ಕ್ರೇಯಾನ್ಸ್ ವಿಧಾನ :- ಬಿಳಿಹಾಳೆಯ ಮೇಲೆ ಹಸ್ತವನ್ನು ತೆರೆದಿಟ್ಟು ಪೆನ್ಸಿಲ್ ನ ಸಹಾಯದಿಂದ ಬೆರಳುಗಳ ಅಂಚುಗಳ ಮೇಲೆ ಹಸ್ತದ ಆಕೃತಿಯನ್ನು ಮೂಡಿಸಿ, ಬಣ್ಣ ತುಂಬುವರು. ಬರೆಯುವ ಮೂಲೆ : ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿ ಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವರು. ಚಟುವಟಿಕೆ: ರೇಖಾ ಚಿತ್ರ ಉದ್ದೇಶ : ಬರವಣಿಗೆ ಅಗತ್ಯವಾದ ಪುರ್ವ ಸಿದ್ಧತಾ ಕೌಶಲಗಳ ಬೆಳವಣಿಗೆ ಸಾಮಗ್ರಿ :- ಡ್ರಾಯಿಂಗ್ ಶೀಟ್, ವೈಟ್ ಶೀಟ್ಸ್, ಪೆನ್ಸಿಲ್, ಬಳೆ, ನಾಣ್ಯ, ಮುಚ್ಚಳಗಳು, ಬೆಂಕಿ ಪೊಟ್ಟಣ ಹಾಳೆಯ ಮೇಲೆ ಸಾಮಗ್ರಿಗಳನ್ನು ಬಳಸಿ ಅವುಗಳ ಆಕೃತಿಗಳನ್ನು ರಚಿಸುವರು. ಆಟಿಕೆ/ಮಾಡಿ ನೋಡು ಮೂಲೆ : ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆಯೊಂದಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು. ಚಟುವಟಿಕೆ: ಓರೆಗಾಮಿ ಚಟುವಟಿಕೆ ಉದ್ದೇಶ :- ನೀಡಿದ ನಿರ್ದೇಶನಗಳನ್ನು ಕ್ರಮಬದ್ಧವಾಗಿ ಪಾಲಿಸುವುದು. ಸಾಮಗ್ರಿ : ಬಣ್ಣ ಬಣ್ಣದ ಕಾಗದಗಳು, ವಿಧಾನ :- ಚಿತ್ರದಲ್ಲಿ ಒದಗಿಸಿರುವ ಸೂಚನೆಗಳಂತೆ ಮಕ್ಕಳು ಓರೆಗಾಮಿ ಚಟುವಟಿಕೆಯನ್ನು ನಿರ್ವಹಿಸುವರು. (ಶಿಕ್ಷಕರು ಈ ಚಟುವಟಿಕೆ ನಿರ್ವಹಿಸುವ ಮೊದಲು ಒಂದೆರಡು ಬಾರಿ ಮಾದರಿಯಾಗಿ ಮಾಡಿ ತೋರಿಸುವುದು, ಅಗತ್ಯವಿರುವಲ್ಲಿ ಮಕ್ಕಳಿಗೆ ಸಹಕರಿಸುವುದು.) ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ* ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) ಸಾಮರ್ಥ್ಯ : ಹೋಲಿಸುವುದು, ಪರಿಸರ ಅರಿವು, ಬಣ್ಣ, ಆಕಾರ ಮತ್ತು ಗಾತ್ರಗಳ ಕಲ್ಪನೆ. ಚಟುವಟಿಕೆ : “ಸ್ಪರ್ಶ ಮಾಡು ಎಣಿಸಿ ನೋಡು” (ಗುರಿ -3) ಉದ್ದೇಶ : ಸ್ಪರ್ಶಿಸಿ ಎಣಿಸಿ ಹೇಳುವುದು. ಸಾಮಗ್ರಿಗಳು: ಬ್ಲಾಕ್ಸ್, ಬಳಪ, ಹರಳುಗಳು, ಬಾಟಲ್ ಮುಚ್ಚಳ, ಚೆಂಡುಗಳು, ಕಾಳುಗಳು. ವಿಧಾನ:- ಐದು ಅಥವಾ ಐದಕ್ಕಿಂತ ಹೆಚ್ಚು ವಸ್ತುಗಳನ್ನು ಸಾಲಿನಲ್ಲಿ ಇಡುವುದು (ಬ್ಲಾಕ್ಗಳು, ಸೀಮೆಸುಣ್ಣ, ಬಾಟಲ್ ಮುಚ್ಚಳ ಚೆಂಡುಗಳು) ಪ್ರತಿಯೊಂದು ವಸ್ತುವನ್ನು ಸ್ಪರ್ಶಿಸಲು ಮತ್ತು ಎಣಿಸಲು ಹೇಳುವುದು. ಅ.ಹಾ:-IL-11 ಏಣಿಸಿ ಹೊಂದಿಸೋಣ ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ: ಸಮಾಜಮುಖಿ ವರ್ತನೆಗಳನ್ನು ರೂಢಿಸಿಕೊಳ್ಳು ವುದು,ಬೇರೆಯವರ ಭಾವನೆಗಳನ್ನು ಮತ್ತು ಹಕ್ಕುಗಳನ್ನು ಗೌರವಿಸಿ ಸಮುದಾಯದಲ್ಲಿ ಸಹಾಯ ಮಾಡುವ, ಬೇರೆ ಬೇರೆ ವೃತ್ತಿಗಳನ್ನು ಗೌರವಿಸುವುದು. ಚಟುವಟಿಕೆ : 7 ಎ. ನನ್ನ ಸಮುದಾಯದ ಸಹಾಯಕರು ಉದ್ದೇಶಗಳು : 🎯ಗ್ರಹಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. 🎯ಸಮುದಾಯದ ಸಹಾಯಕರ ಪಾತ್ರಗಳನ್ನು ಗುರ್ತಿಸುವುದು. 📖 ಅ.ಹಾ:-HW-6 ಚಿತ್ರ ಬಂಧ ಸಾಮಗ್ರಿ : ವಿವಿಧ ವೃತ್ತಿಯ ಮಿಂಚುಪಟ್ಟಿಗಳು. ವಿಧಾನ : ಮಕ್ಕಳು ಸಮುದಾಯದ ಸಹಾಯಕರಂತೆ ಮೂಕಾಭಿನಯ ಮಾಡುವುದು ಉಳಿದ ಮಕ್ಕಳು ಅವರು ಯಾರೆಂದು ಊಹಿಸಿ ಹೇಳುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 5ನೇ ಅವಧಿ *ಭಾಷಾ ಅಭಿವೃದ್ಧಿ
ಮತ್ತು ಬುನಾದಿ ಸಾಕ್ಷರತೆ* *ಆಲಿಸುವುದು
ಮತ್ತು ಮಾತನಾಡುವುದು* ಸಾಮರ್ಥ್ಯ:
ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ,
ಪದಸಂಪತ್ತಿನ ಬೆಳವಣಿಗೆ ಚಟುವಟಿಕೆ
: ಹಾಡು, ಪ್ರಾಸಗೀತೆ, ಪದ್ಯ/ ನಾಟಕ. (ಗುರಿ-2) ಉದ್ದೇಶಗಳು: * ಧ್ವನಿ
ಸಂಕೇತಗಳ ಅರಿವನ್ನು ಮೂಡಿಸುವುದು. *
ಪ್ರಾಸಗಳ ಅರಿವನ್ನು ಉಂಟು ಮಾಡುವುದು. * ಕ್ರಿಯಾತ್ಮಕ
ಸ್ವ-ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು. * ತನ್ನ
ಸುತ್ತಲಿನ ಪರಿಸರದೊಂದಿಗೆ ಸಂಬಂಧೀಕರಿಸುವುದು. ಅಗತ್ಯ
ಸಾಮಗ್ರಿಗಳು- ಇಲ್ಲ ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ, ಶಿಕ್ಷಕರು ಮಕ್ಕಳಿಗೆ 3ನೇ ದಿನದಂದು ಪರಿಚಯಿಸಿದ ಪ್ರಾಸಗೀತೆಯನ್ನೇ ಅಭಿನಯದೊಂದಿಗೆ ಹಾಡಿ ತೋರಿಸಲಿ. ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಛರಿಸಲು ತಿಳಿಸಿ. ನೆನಪಿಡಬೇಕಾದ
ಅಂಶಗಳು: ಮಕ್ಕಳು
ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.ಮಗುವಿಗೆ ತಿಳಿದಿರುವ ಹಾಡನ್ನು ಹೇಳಲು ಉತ್ತೇಜಿಸಿ. ಅರ್ಥಗ್ರಹಿಕೆಯೊಂದಿಗಿನ ಓದು ಸಾಮರ್ಥ್ಯ:
ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ, ಚಟುವಟಿಕೆ
: ಪುಸ್ತಕ ಮೇಳ (ಗುರಿ -2) ಉದ್ದೇಶ
: ಪುಸ್ತಕಗಳ ಮೇಲಿನ ಬಾಂಧವ್ಯವನ್ನು ವೃದ್ಧಿಸುವುದು. ಅಗತ್ಯ
ಸಾಮಗ್ರಿಗಳು: ವಿವಿಧ ರೀತಿಯ ಪುಸ್ತಕಗಳು ವಿಧಾನ:
ಶಾಲಾ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿ, ಮಕ್ಕಳು ಪುಸ್ತಕಗಳೆಡೆಗೆ ಒಲವು
ಹೆಚ್ಚಿಸಿಕೊಳ್ಳುವಂತೆ ಮಾಡುವುದು. ಪುಸ್ತಕ ಮೇಳದಲ್ಲಿ ಪಾಲಕರು ಭಾಗವಹಿಸುವಂತೆ ಪ್ರೋತ್ಸಾಹಿಸುವುದು. ಉದ್ದೇಶಿತ ಬರಹ ಸಾಮರ್ಥ್ಯ:
ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ, ಚಟುವಟಿಕೆ
: “ಪುಸ್ತಕ ಮೇಳ "(ಗುರಿ -2) ಉದ್ದೇಶಗಳು: 📖 ಪುಸ್ತಕಗಳ
ಹೆಸರನ್ನು ಗುರುತಿಸುವುದು. 📖 ಮುದ್ರಣದ
ಪರಿಕಲ್ಪನೆಯನ್ನು ಮೂಡಿಸುವುದು. 📖 ಓದಿನೆಡೆಗೆ ಒಲವು ಬೆಳೆಸುವುದು. 📖 ಪುಸ್ತಕಗಳನ್ನು ಅರ್ಥಗ್ರಹಿಕೆಯೊಂದಿಗೆ ಓದುವುದು, 📖 ಪದಸಂಪತ್ತನ್ನು
ಹೆಚ್ಚಿಸಿಕೊಳ್ಳುವುದು. ಸಾಮಗ್ರಿಗಳು:
ಗ್ರಂಥಾಲಯದ ಪುಸ್ತಕಗಳು, ನೋಟ್ ಬುಕ್ ವಿಧಾನ: 🌀ಶಾಲಾ
ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿ ಮಕ್ಕಳು ವೈವಿಧ್ಯಮಯವಾದ
ಪುಸ್ತಕಗಳನ್ನು ಪರಿಚಯಿಸಿಕೊಳ್ಳಲು ಅವಕಾಶ ಕಲ್ಪಿಸುವುದು. 🌀ಆ ಮೂಲಕ ಪುಸ್ತಕಗಳೆಡೆಗೆ
ಒಲವು ಬೆಳೆಸಿಕೊಳ್ಳುವಂತೆ ಮಾಡುವುದು. 🌀 ತಾನು ನೋಡಿದ ಪುಸ್ತಕಗಳನ್ನು ಹೆಸರಿಸಲು
ತಿಳಿಸುವುದು. 🌀 ಪುಸ್ತಕ ಮೇಳದಲ್ಲಿ ಪಾಲಕರು ಭಾಗವಹಿಸಲು ಪ್ರೋತ್ಸಾಹಿಸ ವುದು. ಬರವಣಿಗೆಯ ಮಾದರಿ: ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 6ನೇ ಅವಧಿ *ಹೊರಾಂಗಣ ಆಟಗಳು* ಚಟುವಟಿಕೆ
: ಸರಳ ಉಸಿರಾಟದ ಚಟುವಟಿಕೆಗಳು (Breathing Exercise) ಸಾಮರ್ಥ್ಯ
: ಏಕಾಗ್ರತೆ ಬೆಳೆಸುವುದು ವಿಧಾನ :
ಮಕ್ಕಳಿಗೆ ಸರಳ ಸೂಚನೆಗಳನ್ನು ನೀಡುವುದು.ಕಣ್ಣನ್ನು
ಮುಚ್ಚಿ ಬೆನ್ನನ್ನು ನೇರ ಮಾಡಿ ಕುಳಿತುಕೊಳ್ಳಲು ತಿಳಿಸುವುದು.. ಎರಡು ಕೈಗಳನ್ನು ಸರಳ
ಮುದ್ರೆಯನ್ನು ಬಳಸಿ ತೊಡೆಯ ಮೇಲೆ ಇರಿಸಿ ಉಸಿರನ್ನು ನಿಧಾನವಾಗಿ ತೆಗೆದುಕೊಳ್ಳಲು ಹಾಗೂ ಹೊರಬಿಡಲು ಸೂಚಿಸುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 7ನೇ ಅವಧಿ *ಕಥಾ ಸಮಯ* ಕಥೆಯ
ಶೀರ್ಷಿಕೆ : ಸಹಜ ಸೌಂದರ್ಯ ಸಾಮಗ್ರಿಗಳು
: ಸರಣಿ ಚಿತ್ರಗಳು ಉದ್ದೇಶಗಳು
: ಆಲಿಸುವ
ಸಾಮರ್ಥ್ಯ ಬೆಳೆಸುವುದು. ಊಹಿಸುವ
ಕೌಶಲವನ್ನು ಹೆಚ್ಚಿಸುವುದು ಆಲೋಚನಾ
ಶಕ್ತಿಯನ್ನು ವೃದ್ಧಿಸುವುದು ಪ್ರಶ್ನಿಸುವ
ಮನೋಭಾವ ಉಂಟು ಮಾಡುವುದು. ವಿಧಾನ :
ಸರಣಿ ಚಿತ್ರಗಳು ಸರಣಿ
ಚಿತ್ರಗಳನ್ನು ವಿವಿಧ ಕಾರ್ಯತಂತ್ರಗಳ ಅಡಿಯಲ್ಲಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು.(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು. ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️ 8ನೇ ಅವಧಿ *ಮತ್ತೆ ಸಿಗೋಣ* 🔚ಈ ದಿನ
ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ. 🔚ಈ ದಿನ ಮಕ್ಕಳು ನಿರ್ವಹಿಸಿದ
ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. 🔚ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. [ಸಾಹಿತ್ಯ
ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26] 🙏🙏🙏🙏🙏🙏🙏🙏🙏 ಮಲ್ಲಿಕಾರ್ಜುನ್ ಬಡಿಗೇರ್ ನಲಿಕಲಿ ಶಿಕ್ಷಕರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸದಾಶಿವಪುರ ಹೊನ್ನಾಳಿ(ತಾ). ದಾವಣಗೆರೆ(ಜಿ) 9535633529 |