ವಿದ್ಯಾ ಪ್ರವೇಶ ದಿನ 15

  

   ವಿದ್ಯಾ ಪ್ರವೇಶ  15ನೇ ದಿನ

👫👬👭👫👫👬👭👫👫👬👭👫

(ವಿ.ಪ್ರ 2022-23 ರ ಕೈಪಿಡಿಯ 26ನೇ ದಿನ)

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

1ನೇ ಅವಧಿ *ಶುಭಾಶಯ ವಿನಿಮಯ*

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಚಟುವಟಿಕೆ 1: 

ನನ್ನ ಒಳ್ಳೆಯ ಅಭ್ಯಾಸಗಳು (ಮುಂದುವರಿದ ಚಟುವಟಿಕೆ)

ಸಾಮಗ್ರಿಗಳು: ಕೂದಲನ್ನು ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಕೈಗಳನ್ನು ತೊಳೆಯುವುದು, ಉಗುರುಗಳನ್ನು ಕತ್ತರಿಸುವುದು ಇತ್ಯಾದಿಗಳ ಚಿತ್ರಗಳು.

ವಿಧಾನ:

ದಿನ-22 ರ ಸೂಚನೆಗಳನ್ನು ಅನುಸರಿಸಿ. ಮತ್ತು ಹವಾಮಾನ ನಕ್ಷೆ ಬಗ್ಗೆ ಮಕ್ಕಳನ್ನು ಕೇಳಿ ಮತ್ತು ಅದನ್ನು ಹವಾಮಾನ ಕಾರ್ಡ್ ನಲ್ಲಿ ಗುರುತಿಸಲು ಅವರಿಗೆ ಸೂಚನೆ ಮಾಡಿ.

ಚಟುವಟಿಕೆ 2: ನನ್ನ ಪ್ಲೇಟ್‌ನಲ್ಲಿ ಏನಿದೆ?(ಕೆರೆ-ದಂಡೆ ಆಟದ ಮಾದರಿ)

ಸಾಮಗ್ರಿಗಳು: ಯಾವುದೂ ಇಲ್ಲ

ವಿಧಾನ:

🎯ತರಗತಿಯಲ್ಲಿ ನೆಲದ ಮೇಲೆ ದೊಡ್ಡ ವೃತ್ತವನ್ನು ಎಳೆಯಿರಿ (ಮಕ್ಕಳ ಸಂಖ್ಯೆಗೆ ಅನುಗುಣವಾಗಿ)

🎯  ಮಕ್ಕಳನ್ನು ವೃತ್ತದ ಸಾಲಿನ ಹೊರಗೆ ನಿಲ್ಲಿಸಿ.

🎯 ಶಿಕ್ಷಕರು ತರಕಾರಿಗಳ ಹೆಸರುಗಳನ್ನು ಹೇಳಿದರೆ, ಮಕ್ಕಳು ವೃತ್ತದ ಒಳಗೆ ಜಿಗಿಯಬೇಕು ಮತ್ತು ಹಣ್ಣುಗಳ ಹೆಸರುಗಳನ್ನು ಹೇಳಿದರೆ ಅವರು ವೃತ್ತದ ಹೊರಗೆ ಜಿಗಿಯಬೇಕು ಮತ್ತು ಯಾರಾದರೂ ತಪ್ಪು ಮಾಡಿದರೆ, ಅವನು ಅವಳು ಆಟದಿಂದ ಔಟ್ ಆಗುತ್ತಾರೆ.

ಮಾತುಕತೆ

(ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)         ( ದಿನ 23ರ ಚಟುವಟಿಕೆಯನ್ನು ಮುಂದುವರಿಸುವುದು)

ಚಟುವಟಿಕೆ-1: ಊಹಿಸುವ ಆಟ (ಗುರಿ-1)

ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.

ಉದ್ದೇಶ : ಇಷ್ಟದ ವಿಷಯದ ಕುರಿತು ಮಾತನಾಡುವುದು

ಸಾಮಗ್ರಿ : ಸ್ಥಳೀಯ ಆಹಾರ ಪದಾರ್ಥಗಳ ಫ್ಲ್ಯಾಶ್‌ಕಾರ್ಡ್ಗಳು/ಚಿತ್ರಕಾರ್ಡ್ಗಳು, ಲಕೋಟೆಗಳು.

ವಿಧಾನ:

1. ಆಹಾರ ಪದಾರ್ಥಗಳ ಫ್ಲ್ಯಾಶ್‌ಕಾರ್ಡ್ಅನ್ನು ಎತ್ತಿ ಹಿಡಿದುಕೊಳ್ಳಿ ಮತ್ತು ಇಂದು ನಾವು ನಮ್ಮ ನೆಚ್ಚಿನ ಆಹಾರ ಪದಾರ್ಥಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿ.

2. ಆಹಾರ ಪದಾರ್ಥಗಳ ಚಿತ್ರಕಾರ್ಡ್ ಗಳನ್ನು ಲಕೋಟೆಯಲ್ಲಿ ಹಾಕಿ. ನಿಧಾನವಾಗಿ ಚಿತ್ರಕಾರ್ಡ್ ಅನ್ನು ಸ್ವಲ್ಪ ಭಾಗವೇ ಕಾಣುವಂತೆ ಎಳೆಯಿರಿ ಮತ್ತು ಅದರ ಹೆಸರನ್ನು ಊಹಿಸಲು ಮಕ್ಕಳಿಗೆ ಹೇಳಿ.

3. ಮಕ್ಕಳ ಊಹೆಗಳನ್ನು ಸ್ವೀಕರಿಸಿ ಮತ್ತು ‚ಒಳ್ಳೆಯ ಊಹೆ, /ಹೌದು, ಇರಬಹುದು! ಎಂದು ಹೇಳುವ ಮೂಲಕ ಪ್ರೋತ್ಸಾಹಿಸಿ.

4. ಕ್ರಮೇಣ ಚಿತ್ರವನ್ನು ಸಂಪೂರ್ಣವಾಗಿ ತೋರಿಸಿ. ಮಕ್ಕಳು ಅದನ್ನು ಗುರುತಿಸುತ್ತಿ ದ್ದಂತೆ, ಅದರ ಹೆಸರನ್ನು ಹೇಳಿ ಮತ್ತು ಮಕ್ಕಳನ್ನು ಕೇಳಿ, ‚ನಿಮಗೆ ಈ ಆಹಾರ ಇಷ್ಟವೇ? (ಐಸ್‌ಕ್ರೀಮ್/ದೋಸಾ-ಚಟ್ನಿ/ ವಡಾ/ಅಕ್ಕಿ ಇತ್ಯಾದಿ)

5.. ಹೌದು, ನಾನು ಇಷ್ಟ ಪಡುತ್ತೇನೆ..... /ಇಲ್ಲ ನನಗೆ ಇಷ್ಟವಿಲ್ಲ ......ಎಂದು ಹೇಳುವ ಮೂಲಕ ಮಕ್ಕಳು ತಮ್ಮಇಷ್ಟ/ಇಷ್ಟ ಇಲ್ಲದವುಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಿ. 

6. ಕೆಲವು ಸಮಯ ಚಟುವಟಿಕೆಯನ್ನು ಪುನರಾವರ್ತಿಸಿ.

7. ನಂತರ ಮಕ್ಕಳನ್ನು ಕೇಳಿ, ‚ನಿಮಗೆ ಯಾವ ಆಹಾರ ಪದಾರ್ಥ ಇಷ್ಟ.

8. ನನಗೆ ರೊಟ್ಟಿ /ಹಾಲು/ ಇತ್ಯಾದಿ ಇಷ್ಟ ಎಂದು ಹೇಳುವ ಮೂಲಕ ಮಕ್ಕಳಿಂದ ಉತ್ತರಗಳನ್ನು ಪಡೆಯಿರಿ.

   ಪ್ರತಿಯೊಂದು ಮಗುವು ತನ್ನ ಇಷ್ಟಗಳನ್ನು ಹೇಳಲು ಸಮರ್ಥ ವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

2ನೇ ಅವಧಿ *ನನ್ನ ಸಮಯ*

🌀ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

🌀ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ ಪೂರ್ಣ ಗೊಳಿಸಿ ರುವುದನ್ನು ಖಚಿತ ಪಡಿಸಿಕೊಳ್ಳುವುದು.

🌀ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣ ಗೊಳಿಸಲು ಸಹಕರಿಸುವುದು.

🌀ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚು ಗಮನಹರಿಸಬೇಕೆಂಬ ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.

🌀ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

3ನೇ ಅವಧಿ *ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ) 

ಸಾಮರ್ಥ್ಯ: ವಿನ್ಯಾಸಗಳನ್ನು ಗುರ್ತಿಸಿ ಪೂರ್ಣಗೊಳಿಸುವುದು. ಪರಿಸರದ ಅರಿವು.

ಚಟುವಟಿಕೆ : ವಿನ್ಯಾಸಗಳನ್ನು ಪೂರ್ಣಗೊಳಿಸುವುದು (ಗುರಿ -3)

ಉದ್ದೇಶ:-

*ವಿನ್ಯಾಸವನ್ನು ಪೂರ್ಣಗೊಳಿಸುವುದು.

ಸಾಮಗ್ರಿಗಳು: ಪೆನ್ಸಿಲ್, ಅಳಿಸುವ ರಬ್ಬರ್, ಮೆಂಡ‌, ಅಥವಾ ಸೇಬು, ಬಾಳೆಹಣ್ಣು, ಕಿತ್ತಳೇ ಹಣ್ಣು, ಪೇರಳೆ ಮತ್ತು ವಿವಿಧ ಹಣ್ಣುಗಳ ಮಿಂಚು ಪಟ್ಟಿಗಳು, ಚೌಕ, ಆಯತ, ವೃತ್ತವಾಗಿ ಕತ್ತರಿಸಿದ ಆಕೃತಿಗಳು.

ವಿಧಾನ : 

👉ಹಣ್ಣುಗಳನ್ನು ತೆಗೆದುಕೊಳ್ಳುವುದು. 

👉ಒಂದು ಸಾಲಿನಲ್ಲಿ ಪರಾಯವಾಗಿರುವಂತೆ ಜೋಡಿಸುವುದು. ಜೋಡಿಸುವ ಕ್ರಮ ಹೀಗಿರಲಿ.

👉. 🍌🍎🍌🍎🍌🍎🍌🍎(ಬಾಳೆಹಣ್ಣು, ಸೇಬು, ಬಾಳೆಹಣ್ಣು, ಸೇಬು, ಬಾಳೆಹಣ್ಣು, ಸೇಬು) 

ಅಥವಾ

👉.🍎🍎🍌🍎🍎🍌 (ಸೇಬು,ಸೇಬು, ಬಾಳೆಹಣ್ಣು, ಸೇಬು, ಸೇಬು, ಬಾಳೆಹಣ್ಣು,) ಮಕ್ಕಳಿಗೆ ಹಣ್ಣುಗಳನ್ನು ಜೋಡಿಸಿರುವ ವಿನ್ಯಾಸವನ್ನು ಗುರುತಿಸಲು ಪ್ರೋತ್ಸಾಹಿಸುವುದು. 

👉ಮಕ್ಕಳು ಇದೇ ವಿನ್ಯಾಸವನ್ನು ಅನುಸರಿಸಿ ಹಣ್ಣುಗಳನ್ನು ಜೋಡಿಸಲು ತಿಳಿಸುವುದು.

👉 ಹೀಗೆಯೇ ತ್ರಿಕೋನ, ವೃತ್ತ, ಚೌಕ ದಂತಹ ಆಕೃತಿಗಳನ್ನು ಬಳಸಿ ಸರಳ ಮಾದರಿಯನ್ನು ಅನುಸರಿಸಿ ವಿನ್ಯಾಸ ರಚಿಸಲು ಹೇಳುವುದು. 

👉ಹೀಗೆಯೇ ಹೂವುಗಳು, ಎಲೆಗಳು, ಕೊಂಬೆಗಳು, ಬೆಣಚು ಕಲ್ಲುಗಳು, ಬೀಜಗಳನ್ನು ಬಳಸಿ ವಿನ್ಯಾಸ ರೂಪಿಸುವುದು.

ಅ.ಹಾ:-IL-9 ವಿನ್ಯಾಸ ಸರಣಿ ಪೂರ್ಣಗೊಳಿಸೋಣ.

ಅ.ಹಾ:-IL-10 ವಿಶಿಷ್ಟತೆಯನ್ನು ಅರಿತು ವಿನ್ಯಾಸಗಳನ್ನು ಪೂರ್ಣ ಗೊಳಿಸೋಣ.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

4ನೇ ಅವಧಿ *ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: 

*  ಸಮಾಜಮುಖಿ ನಡವಳಿಕೆಯ ವಿಕಾಸ, ಇತರರ ಭಾವನೆಗಳನ್ನು, ಹಕ್ಕುಗಳನ್ನು ಗೌರವಿಸುವುದು.

* ಸೃಜನಶೀಲತೆಯ ಹಾಗೂ ಸೌಂದರ್ಯ ಪ್ರಜ್ಞೆಯ ವಿಕಾಸ ಗಮನಿಸುವುದು, ಕಲ್ಪನಾ ಶಕ್ತಿಯ ವಿಕಾಸ, ಪದಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ; 10 ಬಿ

                                    ಗಣಪ

                      ಬಂದ ಬಂದ ಗಣಪ ಬಂದ 

                      ಮೋದಕವನ್ನು ಗಬಗಬ ತಿಂದ

                      ಸೊಂಡಿಲನೆತ್ತಿ ಆಡಿಸೆ ಚೆಂದ

                      ಎಲ್ಲರ ಕಣ್ಮಣಿಯಾಗಿ ನಿಂದ

                      ಭಕ್ತರ ಹರಸುತ ಹರುಷವ ತಂದ

                      ಬಲು ಚತುರ ಈ ಪಾರ್ವತಿ ಕಂದ

ಉದ್ದೇಶಗಳು:

🧸ಹಬ್ಬಗಳ ಹಾಡುಗಳನ್ನು ಹೇಳುವುದು.

🧸ನಮ್ಮ ಸಂಸ್ಕೃತಿಯಲ್ಲಿರುವ ವಿವಿಧ ವಿಷಯಗಳ ಅರಿವು ಉಂಟಾಗುವುದು.

🧸ಸೌಂದರ್ಯ ಪ್ರಜ್ಞೆಯ ವಿಕಾಸವಾಗುವುದು.

🧸ಹಬ್ಬಗಳಿಗೆ ಸಂಬಂಧಿಸಿದ ಹಾಡುಗಳನ್ನು ಕಲಿಯುವುದ ರೊಂದಿಗೆ ಹಬ್ಬಗಳ ವಿಶೇಷತೆಯನ್ನು ತಿಳಿಯುವುದು.

ಸಾಮಗ್ರಿಗಳು:

ಹಬ್ಬಗಳ ಮಿಂಚುಪಟ್ಟಿಗಳು, ಚಿತ್ರಗಳು.

ವಿಧಾನ: 

* ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳ ಪರಿಚಯ ಮಾಡಿ ಕೊಡುವುದು. 

* ಹಬ್ಬಗಳನ್ನು ಆಚರಿಸುವ ವಿಧಾನ ತಿಳಿಸುವುದು.

* ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಸಂಕ್ರಾಂತಿ, ದೀಪಾವಳಿ, ಹೋಲಿ, ಕ್ರಿಸ್‌ಮಸ್, ಈದ್ ಮಿಲಾದ್, ಗುರುಪೂರ್ಣಿಮಾ ಮುಂತಾದ ಹಬ್ಬಗಳ ಬಗ್ಗೆ ವಿವರಿಸುವುದು.                            * ನಮ್ಮ ದೇಶದಲ್ಲಿ ಈ ಹಬ್ಬಗಳ ಆಚರಣೆ ಹೇಗೆ ಎಂಬುದನ್ನು ತಿಳಿಸುವುದು. 

* ನಿರ್ದಿಷ್ಟ ಹಬ್ಬಗಳ ಕುರಿತು ಹಾಡು, ನೃತ್ಯ, ಕಲೆ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

5ನೇ ಅವಧಿ *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

                       *ಆಲಿಸುವುದು ಮತ್ತು ಮಾತನಾಡುವುದು* 

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಲನಾ ಕೌಶಲಗಳ ಅಭಿವೃದ್ಧಿ. 

ಚಟುವಟಿಕೆ: ಪ್ರಾಸ ಪದಗಳನ್ನು ಆಲಿಸುವುದು (ಗುರಿ-02) ECL-4

ಉದ್ದೇಶಗಳು:

*ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು.

*ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.

*ಸ್ತೂಲ ಹಾಗೂ ಸೂಕ್ಷ್ಮ ಚಲನಾ ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು.

ಅಗತ್ಯ ಸಾಮಗ್ರಿಗಳು:- ಇಲ್ಲ

ವಿಧಾನ:

🎶 ಮಕ್ಕಳಿಗೆ ಹೊಸ ಪ್ರಾಸ ಗೀತೆಯನ್ನು ಹೇಳುವುದು.

🎶 ಹಾಡು ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು.

🎶 ಪ್ರಾಸ ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು.

🎶 ಒತ್ತಿ ಹೇಳಿದ ಪದಗಳನ್ನು ಪ್ರತ್ಯೇಕವಾಗಿ ಹೇಳಿಸುವುದು.

🎶ಪ್ರಾಸಗೀತೆಯಲ್ಲಿಯ ಪ್ರಾಸ ಪದಗಳನ್ನು ಪರಿಚಯಿಸಿ ಅದಕ್ಕೆ ಮತ್ತೆ ಇನ್ನೊಂದು ಪ್ರಾಸ ಪದ ಸೇರಿಸುವುದು.

*ಅರ್ಥ ಗ್ರಹಿಕೆಯೊಂದಿಗೆ ಓದು*

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ,

ಚಟುವಟಿಕೆ : ನಾಮಫಲಕ (ಗುರಿ-2)

ಉದ್ದೇಶ : ನಾಮಫಲಕಗಳಲ್ಲಿಯ ಹೆಸರುಗಳನ್ನು ಚಿತ್ರಗಳ ಸಹಾಯದಿಂದ ಗುರುತಿಸುವರು, ಓದುವರು ಮತ್ತು ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವರು.

ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ನೋಟ್ ಪುಸ್ತಕ, ಚಿತ್ರ ಪಟ. ಕಥಾ ಪುಸ್ತಕ.

ವಿಧಾನ: 

     ಮಗುವಿನ ಸ್ನೇಹಿತರ ಹೆಸರಿನ ಪಕ್ಕದಲ್ಲಿ ಯಾವುದಾದರೂ ವಸ್ತು, ಪ್ರಾಣಿಗಳ ಚಿತ್ರ ಅಂಟಿಸಿ ನಾಮಫಲಕಗಳನ್ನು ರಚಿಸುವುದು. ನಂತರ ತನ್ನ ಸ್ನೇಹಿತರ ಹೆಸರನ್ನ ಗುರುತಿಸಲು ತಿಳಿಸುವುದು.

   ಒಂದು ವೇಳೆ ಮಕ್ಕಳು ಹೆಸರುಗಳನ್ನು ಗುರ್ತಿಸಲು ವಿಫಲವಾದರೆ ಹೆಸರಿನ ಮುಂದೆ ಅಂಟಿಸಿರುವ ಚಿತ್ರಗಳ ಸಹಾಯದಿಂದ ತನ್ನ ಹೆಸರನ್ನು ತೋರಿಸಲು ನೆರವಾಗುವುದು.

 * ಉದ್ದೇಶಿತ ಬರೆಹ *

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಚಲನ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಾತ್ಮಕ ಚಿಂತನೆ.

ಚಟುವಟಿಕೆ : “ಶುಭಾಶಯ ಪತ್ರಗಳ ತಯಾರಿಕೆ (ಗುರಿ -2) ECW-12 ( 25 ನೇ ದಿನದಿಂದ ಮುಂದುವರೆದಿದೆ)

ಉದ್ದೇಶಗಳು:

🔻ಉದ್ದೇಶಕ್ಕನುಗುಣವಾಗಿ ಬರೆಯುವ ಕೌಶಲವನ್ನು ಬೆಳೆಸುವುದು.

🔻ಚಲನ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.

🔻ಸೃಜನಾತ್ಮಕ ಚಿಂತನೆಯನ್ನು ಉತ್ತೇಜಿಸುವುದು.

🔻ಶುಭಾಶಯ ಪತ್ರಗಳನ್ನು ರಚಿಸಲು ಅವಕಾಶ ನೀಡುವುದು.

ಸಾಮಗ್ರಿಗಳು: ಹಾಳೆ, ಶ್ರೇಯಾನ್ಸ್

ವಿಧಾನ:

    ಮಕ್ಕಳು ತಮ್ಮ ಆಯ್ಕೆಯ ಚಿತ್ರಗಳನ್ನು ಬರೆದು ಬಣ್ಣ ಹಚ್ಚಿ, ತಮ್ಮ ಹೆಸರು ಮತ್ತು ಯಾರಿಗೆ ಶುಭಾಶಯಗಳನ್ನು ಹೇಳಲು ಬಯಸುತ್ತಾರೋ ಅವರ ಹೆಸರು ಬರೆಯಲಿ, (ಶಿಕ್ಷಕರು ಮಕ್ಕಳು ಸೂಚಿಸಿದ ವ್ಯಕ್ತಿಗಳ ಹೆಸರನ್ನು ಬರೆಯಲು ಸಹಾಯ ಮಾಡುವುದು) 

     ಈ ಚಟುವಟಿಕೆಯನ್ನು ರಾಷ್ಟ್ರೀಯ ಮತ್ತು ಸ್ಥಳೀಯ ಹಬ್ಬಗಳು/ಹುಟ್ಟುಹಬ್ಬದ ಆಚರಣೆಗಳು ಇತ್ಯಾದಿ ಸಂದರ್ಭಗಳಲ್ಲಿಯೂ ಮಾಡಬಹುದು.

ಬರವಣಿಗೆಯ ಮಾದರಿ:

 ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.

 ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು.

  ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

  6ನೇ ಅವಧಿ *ಹೊರಾಂಗಣ ಆಟಗಳು*  

ಚಟುವಟಿಕೆ : ಸರಳ ವ್ಯಾಯಾಮ

ಸಾಮರ್ಥ್ಯ : ಕೈ ಕಾಲುಗಳ ಸ್ನಾಯುಗಳ ಚಲನೆ.

ವಿಧಾನ:

* ತರಗತಿ ಕೊಠಡಿ ಒಳಗೆ ಸರಳ ಸೂಚನೆಗಳನ್ನು ನೀಡಿ ವ್ಯಾಯಾಮ ಮಾಡಿಸುವುದು.

* ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ಎರಡು ಕೈಗಳನ್ನು ಭುಜದ ಪಕ್ಕಕ್ಕೆ ತನ್ನಿ

⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

7ನೇ ಅವಧಿ *ಕಥಾ ಸಮಯ*

ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.

ಕಥಾ ಸಾಹಿತ್ಯ ನಿರೂಪಣೆ

👨‍🏫ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕ ಕಥೆಯನ್ನು ಪೂರ್ಣಗೊಳಿಸುವುದು

ಉದಾ : ಇದಾದ ಮೇಲೆ ಏನಾಗಿತ್ತು? ನಂತರ ಯಾರು ಬಂದರು? ಇತ್ಯಾದಿ

ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

1) ಬಿಳಿಯ ಕೋಟನ್ನು ಹಾಕಿಕೊಂಡು ನಡೆದ ಪಕ್ಷಿ ಯಾವುದು?

2) ವೈಯಾರ ತೋರಿದ ಪಕ್ಷಿ ಯಾವುದು?

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)

 ⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️⚜️

8ನೇ ಅವಧಿ *ಮತ್ತೆ ಸಿಗೋಣ*  

🔚 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ.

🔚ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

🔚  ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ ಬೀಳ್ಕೊಡಿ.

🔚ಮುಂದಿನವಾರ "ಉದ್ಯಾನವನದ ಭೇಟಿ" ಗಾಗಿ ಯೋಜನೆ ರೂಪಿಸಿ ಮತ್ತು ಅದಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಸಿದ್ಧಪಡಿಸಿಕೊಳ್ಳಿ.

🔚ಶಾಲೆಯಲ್ಲಿ "ಚಿಕ್ಕ ಪುಸ್ತಕ ಪ್ರದರ್ಶನ" ಆಯೋಜಿಸಿ, ಪೋಷಕರನ್ನು ಆಹ್ವಾನಿಸಲು ಯೋಜನೆ ಸಿದ್ಧಪಡಿಸಿ.

[ಸಾಹಿತ್ಯ ಕೃಪೆ: ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2024-25]

                                                      🙏🙏🙏🙏🙏🙏        

                  ಮಲ್ಲಿಕಾರ್ಜುನ್ ಬಡಿಗೇರ್       

                     ನಲಿಕಲಿ ಶಿಕ್ಷಕರು              

 ಸರ್ಕಾರಿ ಪ್ರಾಥಮಿಕ ಶಾಲೆ ಸದಾಶಿವಪುರ

        ಹೊನ್ನಾಳಿ(ತಾ) ದಾವಣಗೆರೆ (ಜಿ).   

                     9535633529